Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ದಕ್ಷಿಣದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ : ಡಾ.ರಾಜ್ ನಟನೆಯ ‘ಮಹಿಷಾಸುರ ಮರ್ಧಿನಿ’
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Cinema | ದಕ್ಷಿಣದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ : ಡಾ.ರಾಜ್ ನಟನೆಯ ‘ಮಹಿಷಾಸುರ ಮರ್ಧಿನಿ’

Cinema

ದಕ್ಷಿಣದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ : ಡಾ.ರಾಜ್ ನಟನೆಯ ‘ಮಹಿಷಾಸುರ ಮರ್ಧಿನಿ’

Public TV
Last updated: April 13, 2022 2:56 pm
Public TV
Share
2 Min Read
FotoJet 15
SHARE

ಸದ್ಯ ದಕ್ಷಿಣ ಭಾರತದ ಸಿನಿಮಾ ರಂಗದಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳದ್ದೇ ಸುದ್ದಿ. ಬಾಹುಬಲಿ, ಕಜಿಎಫ್ ಸಿನಿಮಾಗಳು ಬರುವ ಮುಂಚೆ ಇಂಥದ್ದೊಂದು ಶಬ್ದವನ್ನು ಕೇಳಿದ್ದು ಕಡಿಮೆ ಅಥವಾ ಇಲ್ಲವೇ ಇಲ್ಲ ಎನ್ನಬಹುದು. ಬಾಹುಬಲಿ ಸಿನಿಮಾ ರಿಲೀಸ್ ಆದಾಗಲೂ ಈ ಶಬ್ದಕ್ಕೆ ಅಷ್ಟೊಂದು ತೂಕವಿರಲಿಲ್ಲ. ಆದರೆ, ಕೆಜಿಎಫ್ ಚಾಪ್ಟರ್ 1 ರಿಲೀಸ್ ಆಗುತ್ತಿದ್ದಂತೆಯೇ ‘ಪ್ಯಾನ್ ಇಂಡಿಯಾ’ ಶಬ್ದಕ್ಕೆ ತೂಕ ಹೆಚ್ಚಾಯಿತು. ಈಗಂತೂ ತಲೆ ಚಿಟ್ಟು ಅನ್ನುವಷ್ಟರ ಮಟ್ಟಿಗೆ ಪ್ಯಾನ್ ಇಂಡಿಯಾ ಸಿನಿಮಾಗಳು ರಾರಾಜಿಸುತ್ತಿವೆ. ಇದನ್ನೂ ಓದಿ : ಕೆಜಿಎಫ್ 2 ಜೊತೆ ನೋಡಬಹುದು ಹೊಂಬಾಳೆ ಫಿಲ್ಮ್ಸ್ ನ ಮತ್ತೆರಡು ಸಿನಿಮಾ ಟೀಸರ್

FotoJet 2 7

ಏನಿದು ಪ್ಯಾನ್ ಇಂಡಿಯಾ?

ಹಲವು ಭಾಷೆಗಳಲ್ಲಿ ಏಕಕಾಲಕ್ಕೆ ನಿರ್ಮಾಣವಾಗಿವೆ, ಆಯಾ ಭಾಷೆಯ ನೋಡುಗರಿಗೆ ಒಂದೇ ಸಲ ಸಿನಿಮಾ ತೋರಿಸುವ ಸಿದ್ಧಾಂತವೇ ‘ಪ್ಯಾನ್ ಇಂಡಿಯಾ’. ಸಾಮಾನ್ಯವಾಗಿ ಎಲ್ಲ ಭಾಷೆಯ ನೋಡುಗರನ್ನು ಗಮನದಲ್ಲಿಟ್ಟುಕೊಂಡು ಇಂಥದ್ದೊಂದು ಸಿನಿಮಾ ಮಾಡುತ್ತಾರೆ. ಕಥೆಯ ಆಯ್ಕೆಯಿಂದ ಹಿಡಿದು ಅದರ ಗುಣಮಟ್ಟದವರೆಗೂ ಅದ್ಧೂರಿತನವನ್ನು ಕಾಪಾಡಿಕೊಂಡು ಬರಲಾಗುತ್ತದೆ. ಅಥವಾ ಆಯಾ ನೋಡುಗನ ಅಭಿರುಚಿಯನ್ನು ಮನದಲ್ಲಿಟ್ಟು ಸಿನಿಮಾ ಕಟ್ಟಲಾಗುತ್ತಿದೆ.

FotoJet 5 1

ಆರು ದಶಕಗಳ ಹಿಂದೆಯೇ ಕನ್ನಡದಲ್ಲಿ ಪ್ಯಾನ್ ಇಂಡಿಯಾ ಸಿನಿಮಾ

ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ಈಗೀಗ ಪಾಪ್ಯುಲರ್ ಆದರೂ, ಅರವತ್ತೆರಡು ವರ್ಷಗಳ ಹಿಂದೆಯೇ ಕನ್ನಡದಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಬಂದಿದೆ. ಅದೂ ಈವರೆಗೂ ಕನ್ನಡದಲ್ಲಿ ಬಾರದೇ ಇರುವಷ್ಟು ಭಾಷೆಗಳಲ್ಲಿ ತೆರೆ ಕಂಡಿದೆ. ಬರೀ ತೆರೆ ಕಾಣುವುದು ಮಾತ್ರವಲ್ಲ ಬಾಕ್ಸ್ ಆಫೀಸ್ ಕಲೆಕ್ಷನ್ ವಿಷಯದಲ್ಲೂ ಅದು ದಾಖಲೆ ಬರೆದಿದೆ. ಆ ಸಿನಿಮಾ ಬೇರೆ ಯಾವುದೂ ಅಲ್ಲ, ಡಾ.ರಾಜ್ ಕುಮಾರ್ ನಟನೆಯ ‘ಮಹಿಷಾಸುರ ಮರ್ಧಿನಿ’. ಇದನ್ನೂ ಓದಿ : ವಿಜಯ್ ಕಿರಗಂದೂರು ತವರಿಗೆ ಭೇಟಿ ನೀಡಿ ಹಿರಿಯರ ಆಶೀರ್ವಾದ ಪಡೆದ ಕೆಜಿಎಫ್ ಟೀಂ

FotoJet 1 8

ಅದು 1959ರ ಬ್ಲ್ಯಾಕ್ ಅಂಡ್ ವೈಟ್ ಯುಗದ ಸಿನಿಮಾ. ಈ ವೇಳೆಯಲ್ಲಿ ಸಿನಿಮಾ ನಿರ್ಮಾಣಗಳ ಸಂಖ್ಯೆಯೂ ತೀರಾ ಕಡಿಮೆ. 1959ರಲ್ಲಿ ತೆರೆಕಂಡ ಸಿನಿಮಾಗಳ ಸಂಖ್ಯೆ ಕೇವಲ ಆರೇ ಆರು. ಆ ಆರು ಸಿನಿಮಾಗಳಲ್ಲಿ ಮಹಿಷಾಸುರ ಮರ್ಧಿನಿ ಕೂಡ ಒಂದು. ಇದು ಪೌರಾಣಿಕ ಚಿತ್ರವಾಗಿದ್ದು, ಕನ್ನಡ, ತಮಿಳು, ತೆಲುಗು, ಹಿಂದಿ ಸೇರಿದಂತೆ ಒಟ್ಟು ಎಂಟು ಭಾಷೆಗಳಿಗೆ ಈ ಸಿನಿಮಾ ಡಬ್ ಆಗಿ ಬಿಡುಗಡೆ ಆಗಿತ್ತು. ಇದನ್ನೂ ಓದಿ: ಗ್ರೌಂಡ್ ರಿಪೋರ್ಟ್ : ರಿಲೀಸ್ ಹಿಂದಿನ ಪಕ್ಕಾ ಲೆಕ್ಕಾಚಾರ, ಆರ್.ಆರ್.ಆರ್ ದಾಖಲೆ ಮುರಿದ ಕೆಜಿಎಫ್ 2

FotoJet 4 1

ಈ ಸಿನಿಮಾದ ಮತ್ತೊಂದು ವಿಶೇಷತೆ ಅಂದರೆ, ಡಾ.ರಾಜ್ ಕುಮಾರ್ ಅವರ ಜತೆ ತಮಿಳು ನಾಡಿನ ಮಾಜಿ ಮುಖ್ಯಮಂತ್ರಿ ದಿ.ಜಯಲಲಿತಾ ಅವರ ತಾಯಿ ಶ್ರೀಮತಿ ಸಂಧ್ಯಾ ಅವರು ಕೂಡ ನಟಿಸಿದ್ದಾರೆ. ಮಹಿಷಾಸುರನ ಪಾತ್ರವನ್ನು ಡಾ.ರಾಜ್ ನಿರ್ವಹಿಸಿದ್ದರೆ, ಚಾಮುಂಡೇಶ್ವರಿಯಾಗಿ ಸಂಧ್ಯಾ ಕಾಣಿಸಿಕೊಂಡಿದ್ದರು. ಉದಯಕುಮಾರ್, ಸಾಹುಕಾರ ಜಾನಿ, ನರಸಿಂಹರಾಜು ಸೇರಿದಂತೆ ಹಲವು ಕಲಾವಿದರು ಈ ಸಿನಿಮಾದ ತಾರಾ ಬಳಗದಲ್ಲಿದ್ದರು. ಇದನ್ನೂ ಓದಿ: ಯಶ್ ಅಭಿಮಾನಿಗಳಿಗಾಗಿ ಸ್ಪೆಷಲ್ ಶೋ ಡಿಮ್ಯಾಂಡ್: ರಾಕಿಭಾಯ್ ನಿರಂತರ ಪ್ರದರ್ಶನ

FotoJet 6 1

ಈ ಸಿನಿಮಾ ಹಲವು ಪ್ರಥಮಗಳಿಗೆ ಕಾರಣವೂ ಆಯಿತು. ಈ ಸಿನಿಮಾದ ಮೂಲಕ ಡಾ.ರಾಜ್ ಕುಮಾರ್ ಅವರು ಗಾಯಕರಾಗಿ ಸಿನಿಮಾ ರಂಗಕ್ಕೆ ಪರಿಚಯವಾದರು. ಆ ಕಾಲದಲ್ಲೇ ಈ ಸಿನಿಮಾ ಬೆಂಗಳೂರಿನಲ್ಲಿ ನೂರು ದಿನಗಳ ಪ್ರದರ್ಶನ ಕಂಡಿತು. ಮದರಾಸಿನ ವಿಕ್ರಂ ಸ್ಟುಡಿಯೋದಲ್ಲಿ ಚಿತ್ರೀಖರಣಗೊಂಡ ಮೊಟ್ಟ ಮೊದಲ ಸಿನಿಮಾ ಕೂಡ ಇದಾಗಿದೆ. ನಿರ್ಮಾಪಕರಾದ ಬಿ.ಎಸ್.ರಂಗಾ ಅವರು ನಿರ್ಮಾಣ ಮಾಡುವುದರ ಜತೆಗೆ ಸಿನಿಮಾಟೋಗ್ರಾಫರ್ ಆಗಿಯೂ ಈ ಚಿತ್ರಕ್ಕೆ ಕೆಲಸ ಮಾಡಿದ್ದಾರೆ.

TAGGED:baahubaliDr. Raj KumarKGF-2Mahishasura Mardini CinemaNarasimha RajuPan IndiaSahukkara Janakiಕೆಜಿಎಫ್-2ಡಾ. ರಾಜ್ ಕುಮಾರ್ನರಸಿಂಹ ರಾಜುಪ್ಯಾನ್ ಇಂಡಿಯಾಬಾಹುಬಲಿಮಹಿಷಾಸುರ ಮರ್ಧಿನಿ ಸಿನಿಮಾಸಾಹುಕಾರ ಜಾನಕಿ
Share This Article
Facebook Whatsapp Whatsapp Telegram

Cinema news

Sangeeth Sagar
ಸಿನಿಮಾ ಚಿತ್ರೀಕರಣ ವೇಳೆ ಹೃದಯಾಘಾತದಿಂದ ನಿರ್ದೇಶಕ ಸಂಗೀತ್‌ ಸಾಗರ್‌ ಸಾವು
Cinema Latest Main Post Sandalwood Shivamogga
Dhanya Ramkumar
ಶಾರುಖ್ ಪುತ್ರನ ಜೊತೆ ಧನ್ಯಾ ರಾಮ್‌ಕುಮಾರ್; ಬಾಲಿವುಡ್‌ ಪ್ಲ್ಯಾನ್‌ನಲ್ಲಿದ್ದಾರಾ?
Bollywood Cinema Latest Sandalwood Top Stories
Jai Lalitha Serial
ಹೊಸ ಧಾರಾವಾಹಿ: ರಾಕಿಂಗ್ ಸ್ಟಾರ್ ಯಶ್ ಅಭಿಮಾನಿ ಜೈ ಲಲಿತಾ
Cinema Latest Top Stories TV Shows
Arjun Janya
ಅರ್ಜುನ್ ಜನ್ಯ ಸಂಯೋಜನೆಯಲ್ಲಿ ʻಮಹಾಗುರು ಮಹಾದೇವʼ ಆಲ್ಬಂ
Cinema Latest Sandalwood

You Might Also Like

Dharmasthala Chinnayya
Districts

ಜಾಮೀನು ಮಂಜೂರಾದರೂ ಚಿನ್ನಯ್ಯನಿಗೆ ಬಿಡುಗಡೆಯ ಭಾಗ್ಯವಿಲ್ಲ!

Public TV
By Public TV
4 seconds ago
Red Sandal
Bengaluru City

ಅಕ್ರಮವಾಗಿ ರಕ್ತಚಂದನ ಸಾಗಿಸ್ತಿದ್ದ ನಾಲ್ವರು ಅರೆಸ್ಟ್ – ಪ್ರತ್ಯೇಕ ಕಡೆ 1.35 ಕೋಟಿ ಮೌಲ್ಯದ 1,889 ಕೆ.ಜಿ ಜಪ್ತಿ

Public TV
By Public TV
3 minutes ago
IndiGo 1
Chikkaballapur

ಇಂಡಿಗೋದಲ್ಲಿ ಭಾರೀ ಅಡಚಣೆ – ಬೆಂಗಳೂರಲ್ಲಿ 73 ಸೇರಿ ದೇಶಾದ್ಯಂತ 100ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದು

Public TV
By Public TV
17 minutes ago
Rupee hits another low Indian Rupee Hits Record Low Despite Robust Economic Growth
Latest

Explainer| ಡಾಲರ್‌ ವಿರುದ್ಧ ರೂಪಾಯಿ ದಾಖಲೆ ಕುಸಿತ – ಯಾರಿಗೆ ಲಾಭ? ಆರ್‌ಬಿಐ ಏನು ಮಾಡುತ್ತಿದೆ?

Public TV
By Public TV
45 minutes ago
Haveri Leopard Caught
Districts

Haveri | ರೈತರ ನಿದ್ದೆಗೆಡಿಸಿದ್ದ ಚಿರತೆ ಸೆರೆ

Public TV
By Public TV
48 minutes ago
Subramanya Police Station
Bengaluru City

ಬಟ್ಟೆ ಒಣಗಾಕುವ ದಾರ ಕುತ್ತಿಗೆಗೆ ಸುತ್ತಿ ಪತ್ನಿಯ ಕೊಲೆ – ಬಳಿಕ ತಾನೂ ನೇಣಿಗೆ ಶರಣಾದ ವೃದ್ಧ

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?