ನಾಳೆ ‘ಧೂಮಂ’ ಸಿನಿಮಾದ ಫಸ್ಟ್ ಲುಕ್ ರಿಲೀಸ್ : ಹೊಂಬಾಳೆ ಫಿಲ್ಮ್ಸ್

Public TV
1 Min Read
Dhoomam 2

ಲೂಸಿಯಾ ಪವನ್ (Lucia Pawan) ನಿರ್ದೇಶನದ ಧೂಮಂ (Dhoomam) ಸಿನಿಮಾದ ಫಸ್ಟ್ ಲುಕ್ (First Look) ಅನ್ನು ನಾಳೆ ಬೆಳಗ್ಗೆ 10.45ಕ್ಕೆ ರಿಲೀಸ್ ಮಾಡುವುದಾಗಿ ಹೊಂಬಾಳೆ ಫಿಲ್ಮ್ಸ್ ಘೋಷಣೆ ಮಾಡಿದೆ. ಈ ಕುರಿತು ಸಂಸ್ಥೆಯು ಸೋಷಿಯಲ್ ಮೀಡಿಯಾದಲ್ಲಿ ವಿವರ ಹಂಚಿಕೊಂಡಿದೆ. ಮಲಯಾಳಂ ಸಿನಿಮಾ ಇದಾಗಿದ್ದು, ಪವನ್ ಇದೇ ಮೊದಲ ಬಾರಿಗೆ ಆ ಭಾಷೆಯಲ್ಲಿ ಚಿತ್ರ ಮಾಡಿದ್ದಾರೆ. ಈ ಪೋಸ್ಟರ್ ಪೋಸ್ಟ್ ಮಾಡಿದ ಬೆನ್ನಲ್ಲೇ ಸಲಾರ್ ಸಿನಿಮಾದ ಅಪ್ ಡೇಟ್ ನೀಡಿ ಎಂದು ಅಭಿಮಾನಿಗಳು ಕೇಳಿದ್ದಾರೆ.

pawan kumar

ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಲ್ಲಿ ಮೂಡಿ ಬಂದಿರುವ ಮೊದಲ ಮಲಯಾಳಂ ಸಿನಿಮಾ ಇದಾಗಿದ್ದು, ಕನ್ನಡದ ನಿರ್ದೇಶಕರೇ ಆ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು ವಿಶೇಷ. ಪ್ರಧಾನ ಪಾತ್ರದಲ್ಲಿ ಫಾಹದ್ ಫಾಸಿಲ್ (Fahadh Faasil) ನಟಿಸಿದ್ದಾರೆ. ನಾಯಕಿಯಾಗಿ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಅಪರ್ಣ ಬಾಲಮುರಳಿ  (Aparna Balamurali)ಜೊತೆಯಾಗಿದ್ದಾರೆ. ಸೆಪ್ಟೆಂಬರ್ 30ರಂದು ಘೋಷಣೆಯಾಗಿದ್ದ ಈ ಸಿನಿಮಾ, ಅಕ್ಟೋಬರ್ 9ರಂದು ಮುಹೂರ್ತ ಮಾಡಿತ್ತು. ಇದನ್ನೂ ಓದಿ:ಸಲ್ಮಾನ್ ಖಾನ್ ನಂಬರ್ ಬ್ಲಾಕ್ ಮಾಡಿದ್ದರಂತೆ ಸಿದ್ಧಾರ್ಥ್ ಶುಕ್ಲಾ ಪ್ರೇಯಸಿ!

Dhoomam 1

‘ಧೂಮಂ’ ಚಿತ್ರವನ್ನು ‘ಲೂಸಿಯಾ’ ಖ್ಯಾತಿಯ ಪವನ್​ ಕುಮಾರ್​ ನಿರ್ದೇಶನ ಮಾಡುತ್ತಿದ್ದು, ಇದೊಂದು ಪ್ಯಾನ್​ ಇಂಡಿಯಾ ಚಿತ್ರವಾಗಿದ್ದು, ಫಹಾದ್​ ಫಾಸಿಲ್​ ಮತ್ತು ಅಪರ್ಣಾ ಬಾಲಮುರಳಿ ಜತೆಗೆ ಅಚ್ಯುತ್​ ಕುಮಾರ್​, ಜಾಯ್​ ಮ್ಯಾಥ್ಯೂ, ದೇವ್​ ಮೋಹನ್​, ಅನು ಮೋಹನ್​ ಮುಂತಾದವರು ನಟಿಸುತ್ತಿರುವ ಈ ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತ ಮತ್ತು ಪ್ರೀತಾ ಜಯರಾಮನ್​ ಅವರ ಛಾಯಾಗ್ರಹಣವಿದೆ.

Fahadh Faasil 2

ಧೂಮಂ ಸಿನಿಮಾದ ಪೋಸ್ಟರ್ ವೊಂದನ್ನು ರಿಲೀಸ್ ಮಾಡಿರುವ ಹೊಂಬಾಳೆ ಸಂಸ್ಥೆ (Hombale Films), ನಾಲ್ಕು ಭಾಷೆಗಳಲ್ಲಿ ಈ ಸಿನಿಮಾ ಬರಲಿದೆ ಎಂದಿದೆ. ಕ್ರಮವಾಗಿ ಮಲಯಾಳಂ, ಕನ್ನಡ, ತಮಿಳು ತೆಲುಗು ಭಾಷೆಯ ಹೆಸರು ಹಾಕಿರುವುದರಿಂದ ಮೂಲ ಮಲಯಾಳಂನಲ್ಲಿ ಈ ಸಿನಿಮಾ ಮೂಡಿ ಬರಲಿದ್ದು, ಕನ್ನಡ ಮತ್ತು ಇತರ ಭಾಷೆಗೆ ಸಿನಿಮಾವನ್ನು ಡಬ್ ಮಾಡುತ್ತಾರಾ ಕಾದು ನೋಡಬೇಕು.

Share This Article