– ಅ.8ರಂದು ಅಭ್ಯರ್ಥಿಗಳ ಭವಿಷ್ಯ
ಶ್ರೀನಗರ: ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದಲ್ಲಿ (Jammu And Kashmir) ಮೂರನೇ ಹಂತದ ವಿಧಾನಸಭೆ ಚುನಾವಣೆ (Assembly Election) ಮಂಗಳವಾರ ಮುಕ್ತಾಯಗೊಂಡಿದ್ದು, ಶೇ.65ಕ್ಕೂ ಹೆಚ್ಚು ಮತದಾನವಾಗಿದೆ. ಕಣಿವೆನಾಡಿನ ಮಂದಿ ಉಗ್ರರ ಬುಲೆಟ್‌ಗೆ ಬ್ಯಾಲೆಟ್ ಮೂಲಕ ಉತ್ತರ ನೀಡಿದ್ದಾರೆ.
Advertisement
Advertisement
ಇಂದು (ಮಂಗಳವಾರ) 40 ಸ್ಥಾನಗಳಿಗೆ ನಡೆದ ಮೂರನೇ ಹಂತದ ಚುನಾವಣೆ ಶಾಂತಿಯುತವಾಗಿ ನಡೆದಿದೆ. ಸಂಜೆ 5 ಗಂಟೆಯ ವೇಳೆಗೆ ಶೇ. 65.48ರಷ್ಟು ಮತದಾನ ಆಗಿದೆ. ಉಧಾಂಪುರದಲ್ಲಿ 72.91%, ಸಾಂಬಾದಲ್ಲಿ 72.41%, ಕಥುವಾದಲ್ಲಿ 70.53ರಷ್ಟು ಮತದಾನವಾಗಿದೆ. ಅಕ್ಟೋಬರ್ 8ರಂದು ಅಭ್ಯರ್ಥಿಗಳ ಭವಿಷ್ಯ ಹೊರಬೀಳಲಿದೆ. ಇದನ್ನೂ ಓದಿ: 2 ವರ್ಷಗಳ ನಂತ್ರ ಭೇಟಿಯಾದ ಗೆಳೆಯನೊಂದಿಗೆ ಸೆಕ್ಸ್ – ರಕ್ತಸ್ರಾವದಿಂದ ಯುವತಿ ಸಾವು
Advertisement
Advertisement
2019ರ ಆಗಸ್ಟ್ನಲ್ಲಿ ಆರ್ಟಿಕಲ್ 370 ಅನ್ನು ರದ್ದುಗೊಳಿಸಿದ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಮೊದಲ ಬಾರಿಗೆ ವಿಧಾನಸಭಾ ಚುನಾವಣೆ ನಡೆದಿದೆ. ಸೆ.18ರಂದು ನಡೆದ ಮೊದಲ ಹಂತದಲ್ಲಿ ಶೇ.61.38ರಷ್ಟು ಮತದಾನ ನಡೆದಿದ್ದು, ಸೆ.26ರಂದು ನಡೆದ 2ನೇ ಹಂತದ ಚುನಾವಣೆಯಲ್ಲಿ ಶೆ.57.31ರಷ್ಟು ಮತದಾನವಾಗಿತ್ತು. ಮೊದಲ ಎರಡು ಹಂತಗಳ ಚುನಾವಣೆಗೆ ಹೋಲಿಸಿದರೆ ಮೂರನೇ ಹಂತದಲ್ಲಿ ಜನರು ಹೆಚ್ಚು ಉತ್ಸಾಹದಿಂದ ಮತ ಚಲಾಯಿಸಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ಬಂಧನವಾಗಿದ್ದ ಶಂಕಿತ ಉಗ್ರನಿಂದ ರಹಸ್ಯ ಸ್ಫೋಟ – ಆ.15ರಂದು ಸ್ಫೋಟಿಸಲು ಇರಿಸಿದ್ದ ಜೀವಂತ IED ವಶ