ಕಾಫಿ ಉದ್ಯಮದಿಂದಲೇ ಹೆಚ್ಚು ಫೇಮಸ್ ಆಗಿದ್ದ, ಪ್ರತಿ ವರ್ಷವೂ 160 ಕೋಟಿ ಕಪ್ ಕಾಫಿ ಮಾರುತ್ತಿದ್ದ ಕೆಫೆ ಕಾಫಿ ಡೇ ಸಂಸ್ಥಾಪಕ, ಕಾಫಿ ಕಿಂಗ್ ಎಂದೇ ಫೇಮಸ್ ಆಗಿದ್ದ ವಿ.ಜಿ ಸಿದ್ಧಾರ್ಥ್ ಅವರ ಬಯೋಪಿಕ್ ಸದ್ಯದಲ್ಲೇ ಸೆಟ್ಟೇರಲಿದೆ. ಕಾಫಿ ಉದ್ಯಮಕ್ಕೆ ಒಂದು ಘನತೆ ತಂದುಕೊಟ್ಟು, ರಾಷ್ಟ್ರೀಯ ಹೆದ್ದಾರಿ 66ನೇ ಮಂಗಳೂರು ನಗರದಿಂದ ಉಳ್ಳಾಲ ಕಡೆಗೆ ಹೋಗುವ ಮಾರ್ಗದಲ್ಲಿನ ನೇತ್ರಾವತಿ ಸೇತುವೆ ಬಳಿ ನಾಪತ್ತೆಯಾಗಿ, ಆನಂತರ ಶವವಾಗಿ ಸಿಕ್ಕ ಸಿದ್ಧಾರ್ಥ ಅವರ ಬದುಕು ಮತ್ತು ಸಾವಿನ ನಿಗೂಢತೆ ಹೀಗೆ ಎಲ್ಲ ವಿಷಯವನ್ನು ಇದು ಒಳಗೊಂಡಿರಲಿದೆ.
Advertisement
ಸಿದ್ದಾರ್ಥ ಅವರ ಜೀವನವೇ ರೋಚಕ. ತಮ್ಮ 24ನೇ ವಯಸ್ಸಿನಲ್ಲೇ ಮುಂಬೈನಲ್ಲಿ ಪೋರ್ಟ್ಪೊಲಿಯೋ ಮ್ಯಾನೇಜ್ ಮೆಂಟ್ ತರಬೇತಿ ಪಡೆದರು. ನಂತರ ತಂದೆಯ ಸಹಾಯ ಪಡೆದುಕೊಂಡು ಸ್ವಂತ ಉದ್ಯಮ ಆರಂಭಿಸಿದರು. ಟ್ರೆಡಿಂಗ್, ಮ್ಯೂಚುಯಲ್ ಫಂಡ್ಸ್, ರಿಯಲ್ ಎಸ್ಟೇಟ್, ಸ್ಟಾರ್ಟ್ ಅಪ್ ಕಂಪೆನಿ, ಹೀಗೆ ಒಂದೊಂದೆ ಉದ್ಯಮ ಆರಂಭಿಸಿದರು. ಎಲ್ಲದರಲ್ಲೂ ಗೆಲುವು ಕಂಡರು.
Advertisement
Advertisement
1993ರಲ್ಲಿ ಕಾಫಿ ಉದ್ಯಮಕ್ಕೆ ಕಾಲಿಟ್ಟ ಸಿದ್ಧಾರ್ಥ ಅವರು, ಮೊದ ಮೊದಲು ಕಾಫಿ ಬೀಜಗಳ ವ್ಯಾಪಾರ ಮತ್ತು ರಫ್ತು ಆರಂಭಿಸಿದರು. ಕಾಫಿ ಕ್ಯೂರಿಂಗ್ ಘಟಕವನ್ನೂ ಶುರು ಮಾಡಿದರು. 1948ರಲ್ಲಿ ಹ್ಯಾಮ್ ಬರ್ಗ್ ನ ಚಿಬೊದಲ್ಲಿ ಚಿಕ್ಕದೊಂದು ಮಳಿಗೆಯಲ್ಲಿ ಕಾಫಿ ಉದ್ಯಮ ಪ್ರಾರಂಭ ಮಾಡಿ, 1996ರಲ್ಲಿ ಕಾಫಿ ಡೇ ಶುರು ಮಾಡಿದರು. ಕೇವಲ ಐದೇ ಐದು ವರ್ಷಗಳಲ್ಲಿ ಐದು ಸಾವಿರಕ್ಕೂ ಹೆಚ್ಚು ಕೆಫೆ ಕಾಡಿ ಡೇ ಸ್ಥಾಪಿಸಿ ಕಾಫಿ ಕಿಂಗ್ ಆದರು. ಇದನ್ನೂ ಓದಿ: ಶಿವಣ್ಣ – ತಲೈವಾ ಸಿನಿಮಾಗೆ `ಜೈಲರ್’ ಟೈಟಲ್ ಫಿಕ್ಸ್
Advertisement
ನಂತರ ಹಲವು ಹಗರಣಗಳಲ್ಲಿ ಇವರ ಹೆಸರು ಕೇಳಿ ಬಂತು, ಅವುಗಳೇ ಇವರನ್ನು ಹೈರಾಣು ಮಾಡಿದವು. ಇವೆಲ್ಲವನ್ನೂ ಒಳಗೊಂಡಂತೆ ರುಕ್ಮಿನಿ ರಾವ್ ಮತ್ತು ದತ್ತ ಎನ್ನುವವರು ಜಂಟಿಯಾಗಿ ಸಿದ್ಧಾರ್ಥ ಕುರಿತು ಪುಸ್ತಕವೊಂದನ್ನು ಬರೆದಿದ್ದಾರೆ. ಆ ಪುಸ್ತಕವನ್ನು ಆಧರಿಸಿ ಟಿ ಸೀರಿಸ್ ಫಿಲ್ಮ್ಸ್ ಮತ್ತು ಕರ್ಮ ಮೀಡಿಯಾ ಎಂಟರ್ ಟ್ಮೇನೆಂಟ್ ಜಂಟಿಯಾಗಿ ಇವರ ಬಯೋಪಿಕ್ ಅನ್ನು ತೆರೆಗೆ ತರಲು ಹೊರಟಿದ್ದಾರೆ. ಸದ್ಯ ಸಿನಿಮಾ ಮಾಡಲು ಹಕ್ಕುಗಳನ್ನು ಪಡೆದಿದ್ದಾರೆ. ಸಿದ್ಧಾರ್ಥ ಪಾತ್ರವನ್ನು ಯಾರು ಮಾಡಲಿದ್ದಾರೆ ಎನ್ನುವುದೇ ಸದ್ಯಕ್ಕಿರುವ ಕುತೂಹಲ.