ಸಿನಿಪ್ರಿಯರ ಬಹು ನಿರೀಕ್ಷೆಯ ʻಆಪರೇಷನ್ ಲಂಡನ್ ಕೆಫೆʼ (Operation London Cafe) ಚಿತ್ರ ಶೂಟಿಂಗ್ ಕಂಪ್ಲೀಟ್ ಆಗಿದೆ. ಉಡುಪಿ ಮೂಲದ ಇಂಡಿಯನ್ ಫಿಲಂ ಫ್ಯಾಕ್ಟರಿ, ಮರಾಠಿಯ ದೀಪಕ್ ರಾಣೆ ಫಿಲಂಸ್ ಲಾಂಛನದ ಅಡಿಯಲ್ಲಿ ವಿಜಯ್ ಕುಮಾರ್ ಶೆಟ್ಟಿ ಹವರಾಲ್, ರಮೇಶ್ ಕೊಠಾರಿ, ದೀಪಕ್ ರಾಣೆ ಮತ್ತು ವಿಜಯ್ ಪ್ರಕಾಶ್ ನಿರ್ಮಾಣ ಮಾಡಿರುವ ಈ ಚಿತ್ರ ಕನ್ನಡ ಮರಾಠಿ ಮತ್ತು ಹಿಂದಿ ಭಾಷೆಯಲ್ಲಿ ತಯಾರಾಗಿದೆ.
ತನ್ನ ಮೊದಲ ಚಿತ್ರ `ಜಿಲ್ಕಾ’ದ ಮೂಲಕ ಲವರ್ ಕಮ್ ಚಾಕಲೇಟ್ ಬಾಯ್ ಆಗಿ ಚಿತ್ರ ರಸಿಕರ ಗಮನ ಸೆಳೆದಿದ್ದ ಕವೀಶ್ ಶೆಟ್ಟಿ `ಅಪರೇಷನ್ ಲಂಡನ್ ಕೆಫೆ’ಯ ಮಾಸ್ ಕಮ್ ಆ್ಯಕ್ಷನ್ ಪೋಸ್ಟರ್ ಮತ್ತು ಟೀಸರ್ ಮೂಲಕ ಚಿತ್ರರಂಗಕ್ಕೆ ಒಬ್ಬ ಪ್ರತಿಭಾವಂತ ನಟನಾಗುವ ಎಲ್ಲಾ ಭರವಸೆಯನ್ನು ನೀಡಿದ್ದಾರೆ. ಇವರಿಗೆ ಜೊತೆಯಾಗಿ ಕನ್ನಡಿಗರ ಮನೆ ಮಾತಾಗಿರೋ ಮಾತಿನ ಬೆಡಗಿ ಮೇಘಾ ಶೆಟ್ಟಿ (Megha Shetty) ಕುತೂಹಲ ಮೂಡಿಸುವ ತಮ್ಮ ಅಪ್ಪಟ ಹಳ್ಳಿ ಸೊಗಡಿನ ಹೈಸ್ಕೂಲು ಹುಡುಗಿಯ ಗೆಟಪ್‍ನಲ್ಲಿ ಮಿಂಚುತ್ತಿದ್ದಾರೆ. ಇದನ್ನೂ ಓದಿ: ನಟ ದರ್ಶನ್ ಪುತ್ರ ವಿನೀಶ್‌ಗೆ ಬರ್ತ್‌ಡೇ ಸಂಭ್ರಮ; ವಿಜಯಲಕ್ಷ್ಮಿ ಪೋಸ್ಟ್
ಸಡಗರ ರಾಘವೇಂದ್ರ ಚೊಚ್ಚಲ ನಿರ್ದೇಶನದ ಈ ಚಿತ್ರದಲ್ಲಿ ಬಿ.ಸುರೇಶ್, ಧರ್ಮೇಂದ್ರ ಅರಸ್, ಕೃಷ್ಣ ಹೆಬ್ಬಾಳೆ, ನೀನಾಸಂ ಅಶ್ವತ್ಥ್, ಅಶ್ವಿನಿ ಚವೇರಾ ಮುಂತಾದ ಕನ್ನಡ ಮತ್ತು ಮರಾಠಿಯ ಹೆಸರಾಂತ ಕಲಾವಿದರ ಸಂಗಮವಿದೆ. ಈ ಚಿತ್ರಕ್ಕೆ ಆರ್.ಡಿ. ನಾಗಾರ್ಜುನ್ ಛಾಯಾಗ್ರಹಣ, ಪ್ರಾಂಶು ಝಾ ಸಂಗೀತ, ವರದರಾಜ್ ಕಾಮತ್ ಕಲಾ ನಿರ್ದೇಶನ, ವಿಕ್ರಂ ಮೊರ್, ಮಾಸ್ ಮಾದ, ಅರ್ಜುನ್ ರಾಜ್ ಸಾಹಸವಿದ್ದು, ಕವಿರಾಜ್ ಮತ್ತು ಡಾ. ನಾಗೇಂದ್ರ ಪ್ರಸಾದ್ ಸಾಹಿತ್ಯವಿದೆ. ಅನಿರುಧ್ ಶಾಸ್ತ್ರಿ, ಬ್ರಿಜೇಶ್ ಶಾಂಡಿಲ್ಯ, ಐಶ್ವರ್ಯ ರಂಗರಾಜನ್, ಶ್ರೀ ಲಕ್ಷ್ಮಿ ಬೆಳ್ಮಣ್ಣು, ಪ್ರಥ್ವಿ ಭಟ್ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಅತೀ ಶೀಘ್ರದಲ್ಲೇ ಪ್ರೇಕ್ಷಕರನ್ನು ರಂಜಿಸುವ ಚಿತ್ರದ ಮಾಸ್ ಮತ್ತು ಮೆಲೋಡಿ ಹಾಡುಗಳು ಮತ್ತು ಟ್ರೇಲರ್ ಬಿಡುಗಡೆ ಮಾಡಲಿರುವುದಾಗಿ ಚಿತ್ರ ತಂಡ ಹೇಳಿಕೊಂಡಿದೆ. ಇದನ್ನೂ ಓದಿ: ಹಾಡೊಂದಕ್ಕೆ 75,000 ರೂ. ಮೌಲ್ಯದ ಸೀರೆ ಉಟ್ಟಿದ್ದ ರಮ್ಯಾ !
 


 
		 
		 
		 
		 
		
 
		 
		 
		 
		