ನಿರ್ದೇಶಕ ವೆಂಕಟ್ ಭಾರದ್ವಾಜ್ (Venkat Bhardwaj) ಹೊಸದೊಂದು ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರಕ್ಕೆ ಹೈನ (Haina) ಎಂದು ಶೀರ್ಷಿಕೆ ಇಡಲಾಗಿದ್ದು, ‘ಹೈನ’ ಚಿತ್ರದ ಟೈಟಲ್ ಪೋಸ್ಟರ್ ಬಿಡುಗಡೆಯಾಗಿದೆ. ಕಳೆದವಾರ ಸೆಟ್ಟೇರಿರುವ ಹೈನ ಚಿತ್ರ ಕಂಟೆಂಟ್ ಬೇಸ್ಡ್ ಚಿತ್ರವಾಗಿದ್ದು ಸಂಪೂರ್ಣ ನವ ಕಲಾವಿದರ ತಾರಾಗಣವನ್ನೊಳಗೊಂಡಿದೆ.
Advertisement
ಚೆನ್ನೈನ ಕಪಾಲೇಶ್ವರ ದೇವಸ್ಥಾನದಲ್ಲಿ ‘ಹೈನ’ ಚಿತ್ರ ಮುಹೂರ್ತ (Muhurta) ನೆರವೇರಿದ್ದು, ಚಿತ್ರೀಕರಣ ಕೂಡ ಆರಂಭವಾಗಿದೆ. ಡೆಡ್ಲಿ ಸ್ಕ್ವಾಡ್ ಅಡಿ ಬರಹವಿರುವ ಈ ಚಿತ್ರದಲ್ಲಿ ಭಾರತದ ಮಣ್ಣಿನ ಸೊಗಡನ್ನು ವಿಶೇಷವಾಗಿ ಛಲ, ವಿಶ್ವದಲ್ಲಿ ಭಾರತದ ಪ್ರಾಬಲ್ಯ ಸೇರಿದಂತೆ ಹಲವು ಕುತೂಹಲಭರಿತ ವಿಷಯಗಳನ್ನು ತೆರೆ ಮೇಲೆ ತರಲು ಹೊರಟಿದ್ದಾರೆ ವೆಂಕಟ್ ಭಾರಧ್ವಾಜ್. ಈ ಪ್ರಯೋಗಕ್ಕೆ ನವ ಹಾಗೂ ನುರಿತ ಕಲಾವಿದರು ಜೊತೆಯಾಗಲಿದ್ದಾರೆ. ಇದನ್ನೂ ಓದಿ: ಹೂವುಗಳನ್ನ ದೇಹಕ್ಕೆ ಅಂಟಿಸಿ, ಪ್ಲಾಸ್ಟಿಕ್ ಕವರ್‌ನಲ್ಲಿ ಮೈಮುಚ್ಚಿಕೊಂಡು ಬಂದ ಉರ್ಫಿ
Advertisement
Advertisement
ಏಕಕಾಲದಲ್ಲಿ ಕನ್ನಡ, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ‘ಹೈನ’ ಸಿನಿಮಾ ನಿರ್ಮಾಣವಾಗುತ್ತಿದೆ. ಬೆಂಗಳೂರು, ಹೈದ್ರಾಬಾದ್, ಚೆನ್ನೈ, ಕರಾವಳಿ ಭಾಗದಲ್ಲಿ ಚಿತ್ರೀಕರಣ ನಡೆಯಲಿದೆ. ರಾಜ್ ಕಮಲ್, ಲಕ್ಷ್ಮಣ್ ಶಿವಶಂಕರ್, ಪ್ರಮೋದ್ ಮರವಂತೆ, ಶಾಂತಕುಮಾರ್ ಚಿತ್ರದ ತಾಂತ್ರಿಕ ಬಳಗದಲ್ಲಿದ್ದು, ಕೆ.ಕೆ ಕಂಬೈನ್ಸ್ ಹಾಗೂ ಅಮೃತ ಫಿಲಂ ಸೆಂಟರ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ.
Advertisement
ಚಿತ್ರದ ಬಗೆಗಿನ ಹೆಚ್ಚಿನ ಮಾಹಿತಿಯನ್ನು ಚಿತ್ರತಂಡ ಸದ್ಯದಲ್ಲೇ ಹಂಚಿಕೊಳ್ಳಲಿದೆ. ವೆಂಕಟ್ ಭಾರದ್ವಾಜ್ ನಿರ್ದೇಶನದ ‘ಆಹತ’ ಮತ್ತು ‘ನಗುವಿನ ಹೂಗಳ ಮೇಲೆ’ ತೆರೆಗೆ ಬರಲು ಸಿದ್ದವಾಗಿದ್ದು, ಶೀಘ್ರದಲ್ಲೇ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಪ್ರಕಟಿಸಲಿದೆ.
Thank you very much for sharing. Your article was very helpful for me to build a paper on gate.io. After reading your article, I think the idea is very good and the creative techniques are also very innovative. However, I have some different opinions, and I will continue to follow your reply.
I don’t think the title of your article matches the content lol. Just kidding, mainly because I had some doubts after reading the article. https://accounts.binance.com/pt-PT/register-person?ref=W0BCQMF1