ಗಾಯಕ ಸೋನು ನಿಗಮ್ಗೆ (Sonu Nigam) ಸ್ಯಾಂಡಲ್ವುಡ್ ಶಾಕ್ ಕೊಟ್ಟಿದೆ. ಕನ್ನಡದ ಸಿನಿಮಾಗಳಲ್ಲಿ ಅವರನ್ನು ಹಾಡಿಸದಿರಲು ಫಿಲ್ಮ್ ಚೇಂಬರ್ ತೀರ್ಮಾನಿಸಿದೆ. ಇದನ್ನೂ ಓದಿ:ಪಾಕಿಸ್ತಾನದ ನಟನ ಸಿನಿಮಾ ಭಾರತದಲ್ಲಿ ಬ್ಯಾನ್ ಮಾಡೋಕೆ ಅದೇನು ನೀಲಿಚಿತ್ರವಾ?- ಪ್ರಕಾಶ್ ರಾಜ್ ಕೆಂಡ
ಸೋನು ನಿಗಮ್ ‘ಕನ್ನಡ’ ವಿವಾದದ ಕುರಿತು ಇಂದು ನಡೆದ ಫಿಲ್ಮ್ ಚೇಂಬರ್ ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷ ನರಸಿಂಹಲು ಮಾತನಾಡಿ, ಸಿನಿಮಾರಂಗದಲ್ಲಿ ಕಲಾವಿದರನ್ನ ಬ್ಯಾನ್ ಮಾಡುವಂತಿಲ್ಲ. ಆದರೆ ಸ್ವಯಂ ಪ್ರೇರಣೆಯಿಂದ ನಿರ್ಮಾಪಕರು, ಸಂಗೀತ ನಿರ್ದೇಶನಕರು ಗಾಯಕರನ್ನು ದೂರ ಇಡಬಹುದು. ಕಲಾವಿದರಾಗಲಿ, ಗಾಯಕರಾಗಲಿ ಅಧಿಕೃತವಾಗಿ ಬ್ಯಾನ್ ಮಾಡುವ ಅಧಿಕಾರ ಫಿಲ್ಮ್ ಚೇಂಬರ್ಗೆ ಇರೋದಿಲ್ಲ. ಗಾಯಕನನ್ನು ಕೆಲ ವರ್ಷ ದೂರವಿಟ್ಟು ಯಾರೂ ಅವಕಾಶ ಕೊಡದೆ ಬುದ್ಧಿ ಕಲಿಸಬಹುದು ಎಂದಿದ್ದಾರೆ.
ಯಾವುದೇ ಸಿನಿಮಾದಲ್ಲಿ ಹಾಡಿಸುವುದು, ಮ್ಯೂಸಿಕಲ್ ನೈಟ್ಸ್ ಆಗಲಿ ಎಲ್ಲಿಯೂ ಸೋನ್ ನಿಗಮ್ ಅವರನ್ನು ಹಾಡಿಸದಿರಲು ಎಂದು ಫಿಲ್ಮ್ ಚೇಂಬರ್ ನಿರ್ಧರಿಸಿದೆ. ಒಂದು ವೇಳೆ ಸೋನು ನಿಗಮ್ ಕ್ಷಮೆ ಕೇಳಿದರೂ ಅಸಹಕಾರ ಮುಂದುವರೆಸಲು ಕನ್ಮಡ ಫಿಲ್ಮ್ ಚೇಂಬರ್ ಹಾಗೂ ಅಂಗಸಂಸ್ಥೆಗಳು ತೀರ್ಮಾನ ಕೈಗೊಂಡಿವೆ. ಇದನ್ನೂ ಓದಿ:ಮತ್ತೆ ವಿಜಯ್ ದೇವರಕೊಂಡಗೆ ರಶ್ಮಿಕಾ ಮಂದಣ್ಣ ಜೋಡಿ?
ಮೇ 2ರಂದು ಬೆಂಗಳೂರಿನ ಕಾರ್ಯಕ್ರಮವೊಂದರಲ್ಲಿ ಕನ್ನಡ ಹಾಡು ಹೇಳಿ ಎಂದಿದ್ದಕ್ಕೆ, ಇದಕ್ಕೇನೇ ಪಹಲ್ಗಾಮ್ ದಾಳಿ ನಡೆದಿದ್ದು ಎಂದ ಸೋನು ನಿಗಮ್ ಹೇಳಿಕೆ ನೀಡುವ ಮಊಲಕ ವಿವಾದ ಸೃಷ್ಟಿಸಿದ್ದರು.