ಬೆಳಗಾವಿ: ಲಿಂಗಾಯತ (Lingayat) ಪ್ರತ್ಯೇಕ ಧರ್ಮದ ಹೋರಾಟ ನಿಂತಿಲ್ಲ. ಬೂದಿ ಮುಚ್ಚಿದ ಕೆಂಡದಂತಿದ್ದು, ಯಾವಾಗ ಹೊರಗೆ ಬರಲಿದೆ ಎಂಬುದನ್ನು ಕಾದು ನೋಡಬೇಕು ಎಂದು ಗದಗ ತೋಂಟದಾರ್ಯ ಮಠದ ಡಾ.ತೋಂಟದ ಸಿದ್ಧರಾಮ ಸ್ಚಾಮೀಜಿ (Tontada Siddharama Swamiji) ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಲಿಂಗಾಯತ ಒಳಪಂಗಡದ ಜಾತಿಯವರು ಮೀಸಲಾತಿಗಾಗಿ ಹೋರಾಟ ಮಾಡ್ತಿದ್ದಾರೆ. ಈ ಸಂದರ್ಭದಲ್ಲಿ ಪ್ರತ್ಯೇಕ ಧರ್ಮದ ಹೋರಾಟ ಸೂಕ್ತ ಅಲ್ಲ. ಎಲ್ಲಾ ಒಂದು ಹಂತಕ್ಕೆ ಬಂದ ಬಳಿಕ ಮತ್ತೆ ಸೈದ್ಧಾಂತಿಕ, ಕಾನೂನಾತ್ಮಕವಾಗಿ ಪ್ರತಿಪಾದನೆ ಮಾಡಿ ಹೋರಾಟ ಮಾಡಲಾಗುತ್ತದೆ. ಜಾಗತಿಕ ಲಿಂಗಾಯತ ಮಹಾಸಭಾ ಈ ನಿಟ್ಟಿನಲ್ಲಿ ನಿರಂತರ ಪ್ರಯತ್ನ ಮಾಡುತ್ತಿದೆ ಎಂದರು. ಇದನ್ನೂ ಓದಿ: ಟಿಪ್ಪು ಪ್ರತಿಮೆ ಬೇಡ ಎಂದ ಸಿಎಂ ಇಬ್ರಾಹಿಂ ವಿರುದ್ಧ ಚೇತನ್ ಕಿಡಿ – ಟಿಪ್ಪು ಸುಲ್ತಾನ್ ಆಧುನಿಕ ಕರ್ನಾಟಕದ ಐಕಾನ್
Advertisement
Advertisement
ಲಿಂಗಾಯತ ಧರ್ಮದಲ್ಲಿ 108 ಒಳಜಾತಿಗಳಿವೆ. ಮೀಸಲಾತಿ ಕೇಳುವುದರಲ್ಲಿ ಯಾವುದೇ ತಪ್ಪು ಇಲ್ಲ. ಆರ್ಥಿಕ, ಸಾಮಾಜಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡಲಾಗುತ್ತದೆ. ಯಾವುದೇ ರಾಜಕೀಯ ಲಾಭಕ್ಕಾಗಿ ಧರ್ಮ ಬಳಿಸಿಕೊಳ್ಳಬಾರದು. ಅಧಿಕಾರ, ವೈಯಕ್ತಿಕ ಸ್ವಾರ್ಥಕ್ಕಾಗಿ ಎಂದಿಗೂ ಧರ್ಮವನ್ನು ಬಳಸಬಾರದು ಎಂದು ತಿಳಿಸಿದರು.
Advertisement
ಹಿಂದೂ ಎನ್ನುವಂತಹದ್ದು ಒಂದು ಧರ್ಮ ಅಲ್ಲ, ಇದು ಜೀವನ ಶೈಲಿಯಾಗಿದೆ. ವೈದಿಕ ಧರ್ಮಕ್ಕೆ ಈಗ ಹಿಂದೂ ಧರ್ಮ ಎಂದು ಕರೆಲಾಗುತ್ತಿದೆ. ವೈದಿಕ ಧರ್ಮವನ್ನ ಹಿಂದೂ ಧರ್ಮ ಎಂದು ಕರೆದಾಗ ಲಿಂಗಾಯತರು ಹಿಂದೂಗಳು ಆಗಲ್ಲ. ಲಿಂಗಾಯತ ಧರ್ಮ ಅವೈದಿಕ ಧರ್ಮವಾಗಿದೆ. ವೇದ, ಆಗಮನ, ಪುರಾಣವನ್ನು ವಿರೋಧಿಸಿದ ದೇಶದಲ್ಲಿ ಜೈನ, ಬೌದ್ಧ, ಕ್ರೈಸ್ತರ ರೀತಿಯಲ್ಲಿ ಲಿಂಗಾಯತ ಸಹ ಧರ್ಮ ಒಂದಾಗಿದೆ. ಹಿಂದೂಗಳ ಆಚರಣೆ ಹಾಗೂ ಲಿಂಗಾಯತರ ಆಚರಣೆಗೆ ವ್ಯತ್ಯಾಸವಿದೆ ಎಂದು ವಿವರಿಸಿದರು. ಇದನ್ನೂ ಓದಿ: ಮೋದಿ ಅವರಿಂದ್ಲೆ ಬೆನ್ನು ತಟ್ಟಿಸಿಕೊಂಡಿರುವ ರಾಮದಾಸ್‌ಗೆ ಕಿರುಕುಳ ಕೊಡುವಷ್ಟು ಶಕ್ತಿ ನನಗಿಲ್ಲ – ಪ್ರತಾಪ್ ಸಿಂಹ
Advertisement
ಹಿಂದೂಗಳು ದೇವಸ್ಥಾನದಲ್ಲಿ ಇರುವ ದೇವರನ್ನು ಪೂಜಿಸುತ್ತಾರೆ. ಲಿಂಗಾಯತರು ಎದೆ ಮೇಲೆ ಇರೋ ಲಿಂಗ ಪೂಜೆ ಮಾಡುತ್ತಾರೆ. ಹಿಂದೂಗಳು ಮೃತಪಟ್ಟ ಸಂದರ್ಭದಲ್ಲಿ ದಹನ ಮಾಡುತ್ತಾರೆ. ಲಿಂಗಾಯತರು ಮಣ್ಣಲ್ಲಿ ಹುಗೆಯುವ ಪದ್ಧತಿ ಅನುಸರಿಸುತ್ತಾರೆ. ಆಚಾರ ವಿಚಾರಗಳು ಭಿನ್ನ ಆಗಿರೋದ್ರಿಂದ ಲಿಂಗಾಯತ ಎನ್ನುವುದು ಪ್ರತ್ಯೇಕ ಧರ್ಮ. ಬ್ರಿಟಿಷರು ಸಹ ಲಿಂಗಾಯತ ಎನ್ನುವುದು ಧರ್ಮ ಎಂದೇ ಪ್ರಯೋಗ ಮಾಡಿದ್ದಾರೆ. ದೇಶದಲ್ಲಿ ಇರೋ ಎಲ್ಲಾ ಧರ್ಮೀಯರು ಭಾರತೀಯರೇ. ಧರ್ಮ ಎನ್ನುವ ಸೀಮಿತ ಅರ್ಥ ಬಳಸಬೇಕಾದ್ರೆ ಲಿಂಗಾಯತರು ಹಿಂದೂಗಳು ಅಲ್ಲ. ಪ್ರಾದೇಶಿಕವಾಗಿ ಜೈನರು, ಬೌದ್ಧರು, ಸಿಖ್, ಲಿಂಗಾಯತರು ಎಲ್ಲರೂ ಹಿಂದುಗಳೇ. ಆದರೆ ಆಚಾರ-ವಿಚಾರ ಪ್ರತ್ಯೇಕವಾಗಿದ್ದರಿಂದ ಧಾರ್ಮಿಕವಾಗಿ ಎಲ್ಲರೂ ಪ್ರತ್ಯೇಕವಾಗಿದ್ದಾರೆ ಎಂದ ಸ್ಚಾಮೀಜಿ ಹೇಳಿದರು.
ಸತೀಶ್ ಜಾರಕಿಹೊಳಿ ವಿವಾದ ಕುರಿತು ಮಾತನಾಡಿ, ಅದು ವಿವಾದದ ವಿಷಯವೇ ಅಲ್ಲ. ಹಿಂದೂ ಎನ್ನುವುದು ಸಿಂಧು ನದಿಯಿಂದ ಉತ್ಪತ್ತಿ ಆಗುತ್ತದೆ. ಪಾಕಿಸ್ತಾನದಲ್ಲಿಯೂ ಅನೇಕ ಜನ ಸಿಂಧುಸ್ತಾನ ಮಾಡಿ ಎಂದು ಹೋರಾಟ ಮಾಡುತ್ತಿದ್ದಾರೆ. ಜಾತಿ, ಧರ್ಮ ಎಂದು ಬಳಸಿಕೊಂಡಾಗ ವಿವಾದ ಸೃಷ್ಟಿಯಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಮತ ಕನ್ನ ಆರೋಪ- ಚಿಲುಮೆ ಸಂಸ್ಥೆ ವಿರುದ್ಧ ತನಿಖೆಗೆ ಮುಂದಾದ ಬಿಬಿಎಂಪಿ