ನವದೆಹಲಿ: ಕರ್ನಾಟಕಕ್ಕೂ ವಂದೇ ಭಾರತ್ ರೈಲು (Vande Bharat Express) ಬರಲಿದ್ದು, ಮುಂದಿನ ನವೆಂಬರ್ ತಿಂಗಳಿನಿಂದ ಚೆನ್ನೈ-ಬೆಂಗಳೂರು-ಮೈಸೂರು (Bengaluru-Mysuru) ಮಾರ್ಗವಾಗಿ ಸಂಚರಿಸಲಿದೆ.
ದೆಹಲಿ – ಉನಾ ಸಂಪರ್ಕಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ಸರಣಿಯ 4ನೇ ರೈಲಿಗೆ ಪ್ರಧಾನಿ ಮೋದಿ (Narendra Modi) ಹಿಮಾಚಲ ಪ್ರದೇಶದಲ್ಲಿ ಗುರುವಾರ ಚಾಲನೆ ನೀಡಿದ್ದಾರೆ. ಇದರೊಂದಿಗೆ ನವೆಂಬರ್ 10 ರಂದು ವಂದೇ ಭಾರತ್ ಎಕ್ಸ್‌ಪ್ರೆಸ್ (Express Train) 5ನೇ ರೈಲು ಚಾಲನೆಗೊಳ್ಳಲಿದೆ. ಇದನ್ನೂ ಓದಿ: ದೊಡ್ಮನೆಯಲ್ಲಿ ಮಕ್ಕಳ ದರ್ಬಾರ್: ಮಗುವನ್ನು ತಬ್ಬಿ ಗಳಗಳನೆ ಅತ್ತ ಮಯೂರಿ
The Vande Bharat train flagged off earlier today will improve connectivity and give an opportunity for many more people to explore the natural beauty and spirituality of Himachal Pradesh. pic.twitter.com/GZnqjmLEka
— Narendra Modi (@narendramodi) October 13, 2022
ಪ್ರಧಾನಿ ನರೇಂದ್ರ ಮೋದಿ ಅವರು 4ನೇ ವಂದೇ ಭಾರತ್ ಸೆಮಿ ಹೈಸ್ಪೀಡ್ (Semi HighSpeed Train) ರೈಲಿಗೆ ಹಸಿರು ನಿಶಾನೆ ತೋರಿದ್ದಾರೆ. ಇದು ಬುಧವಾರ ಹೊರತುಪಡಿಸಿ ವಾರದ ಉಳಿದೆಲ್ಲ ದಿನಗಳಲ್ಲೂ ಸಂಚರಿಸಲಿದೆ. ಮೊದಲ ಮೂರು ರೈಲಿಗಿಂತಲೂ ಗುಣಮಟ್ಟದ್ದಾಗಿದ್ದು, ಉನಾದಿಂದ ದೆಹಲಿಯ ನಡುವೆ 2 ಗಂಟೆ ಪ್ರಯಾಣದ ಸಮಯವನ್ನು ಕಡಿಮೆಗೊಳಿಸಲಿದೆ.
ಫೆಬ್ರುವರಿ 15, 2019ರಂದು ದೇಶದ ಮೊಟ್ಟ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಪ್ರಧಾನಿ ಮೋದಿ ಚಾಲನೆ ನೀಡಿದ್ದರು. ನವದೆಹಲಿ – ಕಾನ್ಪುರ – ಅಲಹಾಬಾದ್ – ವಾರಣಾಸಿ ಮಾರ್ಗದಲ್ಲಿ ಈ ರೈಲು ಸಂಚರಿಸುತ್ತಿದೆ. 2ನೇ ರೈಲು ದೆಹಲಿಯಿಂದ ವಾರಣಾಸಿಗೆ ಸಂಚರಿಸುತ್ತಿದೆ. ಇದನ್ನೂ ಓದಿ: ಸ್ವಂತ ಉದ್ಯಮದ ಕನಸು ನನಸು – B ಟೆಕ್ ವಿದ್ಯಾರ್ಥಿನಿ ಈಗ `ಚಾಯ್‌ವಾಲಿ’
ಏನಿದರ ವಿಶೇಷತೆ?
ಎಲ್ಲಾ ಕೋಚ್‌ಗಳಲ್ಲೂ ಆಟೋ ಮ್ಯಾಟಿಕ್ ಡೋರ್‌ಗಳು ಇರುತ್ತವೆ. ಜಿಪಿಎಸ್ (GPS) ಆಧಾರಿತ ಆಡಿಯೋ ವಿಶ್ಯುಯಲ್ಸ್ ಪ್ರಯಾಣಿಕ ಮಾಹಿತಿ ವ್ಯವಸ್ಥೆ ಇರುತ್ತದೆ. ಉಚಿತ ವೈಫೈ ವ್ಯವಸ್ಥೆ ಇರುತ್ತದೆ. ಸೀಟ್‌ಗಳು ಆರಾಮದಾಯವಾಗಿ ಇರುತ್ತವೆ. ಟಾಯ್ಲೆಟ್‌ಗಳು ಬಯೋ ವ್ಯಾಕ್ಯೂಮ್ ತಂತ್ರಜ್ಞಾನ ಆಧಾರಿತವಾಗಿರುತ್ತವೆ. ಪ್ರತಿ ಸೀಟ್‌ಗೂ ಪ್ರತ್ಯೇಕ ಲೈಟ್ ವ್ಯವಸ್ಥೆ ಇರುತ್ತದೆ. ಇದನ್ನೂ ಓದಿ: ರಾಯಚೂರಿನಲ್ಲಿ ರಸ್ತೆ ಮಾರ್ಗವಿಲ್ಲದೆ ತುಂಬು ಗರ್ಭಿಣಿ ಪರದಾಟ
ಪ್ರಯಾಣಿಕರಿಗೆ ಬಿಸಿ-ಬಿಸಿ ಆಹಾರ (Food) ವಿತರಣೆ ಮಾಡಲಾಗುತ್ತದೆ. ಬಿಸಿ ಹಾಗೂ ತಂಪು ಪಾನೀಯಗಳು ಲಭ್ಯವಾಗುತ್ತವೆ. ರೈಲು ಸಾಗುವಾಗ ಪ್ರಯಾಣಿಕರಿಗೆ ಹೆಚ್ಚಿನ ಶಬ್ಧ ಕೇಳಿ ಬರೋದಿಲ್ಲ. ಪ್ರತಿಯೊಂದು ವಂದೇ ಭಾರತ್ ರೈಲಿನಲ್ಲಿ 1,128 ಪ್ರಯಾಣಿಕರು ಪ್ರಯಾಣ ಮಾಡಬಹುದಾಗಿದೆ. ಎಲ್ಲದಕ್ಕಿಂತ ಹೆಚ್ಚಾಗಿ ವಂದೇ ಭಾರತ್ ರೈಲಿನಲ್ಲಿ ಅಪಘಾತ ತಡೆ ವ್ಯವಸ್ಥೆಗೆ ತುಂಬಾನೇ ಸುಧಾರಿತ ತಂತ್ರಜ್ಞಾನ ಬಳಸಲಾಗಿದೆ.
ಪ್ರತಿ ಕೋಚ್‌ನಲ್ಲೂ ತುರ್ತು ನಿರ್ಗಮನ ಕಿಟಕಿ, ಸಿಸಿಟಿವಿ (CCTV) ಕ್ಯಾಮರಾ ಇರುತ್ತದೆ. ಅಗ್ನಿ ಅನಾಹುತ ತಡೆಯುವ ವ್ಯವಸ್ಥೆ ಕೂಡಾ ಇದೆ.