– ಕಳೆದ ಬಾರಿಗಿಂತ ಈ ವರ್ಷ ಪಟಾಕಿ ಅವಘಡ ಸಂಖ್ಯೆ ಹೆಚ್ಚಳ
– ಶನಿವಾರ ಒಂದೇ ದಿನ 20 ಪ್ರಕರಣ ದಾಖಲು
ಬೆಂಗಳೂರು: ದೀಪಾವಳಿ (Deepavali) ಹಬ್ಬ ಹಿನ್ನೆಲೆ ಕಳೆದ ಬಾರಿಗಿಂತ ಈ ವರ್ಷ ಪಟಾಕಿ ಅವಘಡ ಸಂಖ್ಯೆ ಹೆಚ್ಚಾಗಿದ್ದು, ಆಪರೇಷನ್ ಸಂಖ್ಯೆಯೂ ಹೆಚ್ಚಾಗಿದೆ.
Advertisement
ಮಿಂಟೋ ಆಸ್ಪತ್ರೆಯಲ್ಲಿ (Minto Hospital) 5 ದಿನಗಳಲ್ಲಿ 49 ಪಟಾಕಿ ಸಿಡಿತ ಪ್ರಕರಣ ದಾಖಲಾಗಿದೆ. ಪಟಾಕಿ ಅವಘಡದಿಂದ 35 ಮಂದಿ ಚಿಕಿತ್ಸೆ ಪಡೆದು ಹೋಗಿದ್ದರೇ 14 ಮಂದಿ ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 32 ಮಕ್ಕಳು ಪಟಾಕಿಯಿಂದ ಕಣ್ಣಿಗೆ ಏಟು ಮಾಡಿಕೊಂಡಿದ್ದಾರೆ. 17 ಮಂದಿ ವಯಸ್ಕರೂ ಸಹ ಪಟಾಕಿ ಸಿಡಿತಕ್ಕೆ ಒಳಗಾಗಿದ್ದಾರೆ. 23 ಮಂದಿಗೆ ಪಟಾಕಿಯಿಂದ ಗಂಭೀರ ಸಮಸ್ಯೆಯಾಗಿದೆ. ಇದನ್ನೂ ಓದಿ: ಸಿಗರೇಟ್‌ನಿಂದ ಸುಟ್ಟು ಚಿತ್ರಹಿಂಸೆ; ಅಪ್ರಾಪ್ತೆ ಕೊಂದು, ಶೌಚಾಲದಲ್ಲಿ ಶವ ಇಟ್ಟು ಗಂಡ-ಹೆಂಡ್ತಿ ಎಸ್ಕೇಪ್
Advertisement
Advertisement
26 ಮಂದಿಗೆ ಸಣ್ಣ ಪ್ರಮಾಣದ ಗಾಯಗಳಾಗಿದ್ದು, 4 ಮಂದಿಗೆ ಈಗಾಗಲೇ ಸರ್ಜರಿ ಮಾಡಲಾಗಿದೆ. ಇನ್ನೂ 10 ಮಂದಿಗೆ ಸರ್ಜರಿಯ ಅವಶ್ಯಕತೆಯಿದೆ. 27 ಮಂದಿ ಪಟಾಕಿ ಸಿಡಿಸುವಾಗ ಗಾಯ ಮಾಡಿಕೊಂಡಿದ್ದು, 22 ಮಂದಿ ಅಕ್ಕಪಕ್ಕ ಇದ್ದವರು ಪಟಾಕಿ ಸಿಡಿತಕ್ಕೆ ಒಳಗಾಗಿದ್ದಾರೆ. ಶನಿವಾರ ಒಂದೇ ದಿನ 20 ಪಟಾಕಿ ಅವಘಡ ಪ್ರಕರಣ ದಾಖಲಾಗಿದೆ. ಈ ಪೈಕಿ 15 ಮಕ್ಕಳು ಪಟಾಕಿಯಿಂದ ಗಾಯಗೊಂಡಿದ್ದಾರೆ. ನಾರಾಯಣ ನೇತ್ರಾಲಯದಲ್ಲೂ (Narayana Nethralaya) 64ಕ್ಕೂ ಹೆಚ್ಚು ಪಟಾಕಿ ಅವಘಡ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ನ.7ರ ಒಳಗಡೆ ಬಾಕಿ ಹಣವನ್ನು ಪಾವತಿಸದೇ ಇದ್ದರೆ ವಿದ್ಯುತ್ ಕೊಡಲ್ಲ: ಬಾಂಗ್ಲಾಗೆ ಅದಾನಿ ಡೆಡ್‌ಲೈನ್
Advertisement