ಮಡಿಕೇರಿ: ಪಾಂಡವರ ಕಾಲದ ಇತಿಹಾಸ ಸಾರುವ ಕೋಟೆ ಬೆಟ್ಟ ಬೊಳ್ಲಪ್ಪ ಈಶ್ವರ ದೇವಾಲಯದ ವಾರ್ಷಿಕ ಉತ್ಸವವು ಸಾಂಪ್ರದಾಯ ಬದ್ಧವಾಗಿ ಶ್ರದ್ಧಾಭಕ್ತಿಯಿಂದ ನೆರವೇರಿತು.
Advertisement
ಪಾಂಡವರು ಅಜ್ಞಾತವಾಸದಲ್ಲಿದ್ದ ಕಾಲದಲ್ಲಿ ಮಡಿಕೇರಿ ತಾಲೂಕಿನ ಮುಕೋಡ್ಲು ಸಮೀಪದ ಅತೀ ಎತ್ತರ ಬೆಟ್ಟದ ಸಾಲುಗಳ ನಡುವೆ ಬೆಳಗಾಗುವುದರೊಳಗೆ ಕಲ್ಲಿನ ದೇವಾಲಯವೊಂದನ್ನು ನಿರ್ಮಿಸಿ ಪೀಠದ ಮೇಲೆ ಶಿವ-ಪಾರ್ವತಿಯ ಕಲ್ಲಿನ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದರು. ಈ ವೇಳೆ ಬೆಳಗಾದರಿಂದ ದೇವಾಲಯಕ್ಕೆ ಬಾಗಿಲು ನಿರ್ಮಿಸಲು ಪಾಂಡವರಿಗೆ ಸಾಧ್ಯವಾಗಿಲ್ಲ ಎಂಬ ಪುರಾಣ ಕಥೆಯಿದೆ. ಇದನ್ನೂ ಓದಿ: ಕೊಡಗಿನ ಗ್ರಾಮವೊಂದರಲ್ಲಿ ಪುರಾತನ ಈಶ್ವರ ಕೆತ್ತನೆ ಕಲ್ಲುಗಳು ಪತ್ತೆ
Advertisement
ಇಂದಿಗೂ ಈ ಸ್ಥಳದ ಸುತ್ತಲೂ ಹಲವು ಇತಿಹಾಸ ಪುರಾವೆಗಳಿರುವ ವಿಶೇಷತೆಗಳನ್ನು ಒಳಗೊಂಡಿದೆ. ಸುಮಾರು ಹದಿನೈದು ವರ್ಷಗಳ ಹಿಂದೆ ಈ ದೇವಾಲಯದ ಜೀರ್ಣೋದ್ಧಾರ ಕಾರ್ಯ ನೆರವೇರಿಸಲಾಗಿದೆ. ಪ್ರತಿವರ್ಷ ಕೊಡಗಿನ ಸಂಪ್ರದಾಯದಂತೆ ಸಂಕ್ರಮಣದಿಂದ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಹಬ್ಬದ ಕಟ್ಟು ಬೀಳಲಾಗುತ್ತದೆ.
Advertisement
Advertisement
ಉತ್ಸವದ ಮೊದಲ ಸೋಮವಾರ ಪಾಲ್ ಮಂಗಲ ನಡೆದು ಪುತ್ತರಿನಮ್ಮೆ ಕಳೆದು ಬರುವ ಸಂಕ್ರಮಣದ ದಿನ ಉತ್ಸವ ನಡೆಯುತ್ತೆ. ಕಳೆದ ಬುಧವಾರದಂದು ವಾರ್ಷಿಕ ಉತ್ಸವದ ದಿನ ಬೆಳಗ್ಗೆ ನಾಡಿನವರು ತಕ್ಕಮುಖ್ಯಸ್ಥರುಗಳ ಸಮ್ಮುಖದಲ್ಲಿ ಭಂಡಾರದ ಮನೆಯಲ್ಲಿ ದೇವಭಂಡಾರವನ್ನು ಕನ್ನಿಕಂಡ ಮನೆಯಿಂದ ದೇವಾಲಯಕ್ಕೆ ತರಲಾಯಿತು. ಇದನ್ನೂ ಓದಿ: ಸರ್ಕಾರದ ಯೋಜನೆಯ ಪ್ರಯೋಜನ ಪಡೆಯಲು ಅಣ್ಣ-ತಂಗಿಯನ್ನೇ ಮದುವೆಯಾದ!
ಬಿಳಿ ಕುಪ್ಪಸ ತೊಟ್ಟಂತ ನಾಡಿನವರು ದುಡಿಕೊಟ್ಟ್ ಹಾಡು, ಬೊಳಕಾಟ್, ಪರೆಕಳಿಯನ್ನು ಪ್ರದರ್ಶಿದಸಿದರು. ನಾಡಿನವರು ಹರಕ್ಕೆ ಭಂಡಾರವನ್ನು ದೇವರಿಗೆ ಒಪ್ಪಿಸುವ ಮೂಲಕ ದೇವರ ಪ್ರಸಾದವನ್ನು ಸ್ವೀಕರಿಸಿದರು.