ರಾಮನಗರ: ಕೌಟುಂಬಿಕ ಕಲಹ (Family Dispute) ಹಿನ್ನೆಲೆ ಮಕ್ಕಳಿಬ್ಬರಿಗೆ ವಿಷವುಣಿಸಿದ (Poison) ತಂದೆ ಬಳಿಕ ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ರಾಮನಗರ (Ramanagara) ತಾಲೂಕಿನ ಕ್ಯಾಸಾಪುರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಕುಮಾರ್ (38) ತನ್ನ ಇಬ್ಬರು ಹೆಣ್ಣುಮಕ್ಕಳಿಗೆ ಜಾಮೂನಿನಲ್ಲಿ (Gulab Jamun) ವಿಷ ಬೆರಸಿ ತಿನ್ನಿಸಿ ತಾನೂ ವಿಷ ಸೇವಿಸಿದ್ದಾರೆ. ಸದ್ಯ ಮೂವರ ಸ್ಥಿತಿ ಗಂಭೀರವಾಗಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಇದನ್ನೂ ಓದಿ: ಲಸಿಕೆ ಹಾಕ್ತಿದ್ದಾಗಲೇ ಕುಸಿದ ಅಂಗನವಾಡಿಯ ಮೇಲ್ಛಾವಣಿ- ಮಗುವಿನ ತಲೆಗೆ ಗಾಯ
ಕೌಟುಂಬಿಕ ಕಲಹದಿಂದ ಕೆಲ ತಿಂಗಳ ಹಿಂದೆ ಪತ್ನಿ ತವರು ಮನೆ ಸೇರಿದ್ದರು. ಎರಡು ಮಕ್ಕಳನ್ನು ನೋಡಿಕೊಳ್ಳುತ್ತಿದ್ದ ಕುಮಾರ್ ಹೆಂಡತಿ ವಾಪಸ್ ಬಾರದಿದ್ದಕ್ಕೆ ಮನನೊಂದು ಮಕ್ಕಳಿಗೂ ವಿಷವುಣಿಸಿ ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ಕುರಿತು ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಟಿಕ್‌ಟಾಕ್ ಸುಂದರಿಗೆ ಕಂಟಕವಾಯ್ತು ಮೊಬೈಲ್ ಗೀಳು – ಪ್ರೀತಿಸಿ ಮದ್ವೆಯಾಗಿದ್ದ ಮಡದಿಯನ್ನೇ ಕೊಂದ ಪತಿ
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]