ಬೆಳಗಾವಿ: ಸಂಸತ್ (Parliament) ಭವನದಲ್ಲಿ ನಡೆದ ಭದ್ರತಾ ವೈಫಲ್ಯದ (Security Breach) ಹೊಣೆಯನ್ನು ವಿಶ್ವಗುರು ಪ್ರಧಾನಿ ಮೋದಿ (Narendra Modi) ಹೊರಬೇಕಾಗುತ್ತದೆ ಎಂದು ಕಾಂಗ್ರೆಸ್ (Congress) ನಾಯಕ ಬಿ.ಕೆ ಹರಿಪ್ರಸಾದ್ (BK Hariprasad) ಹೇಳಿದ್ದಾರೆ.
ಸುವರ್ಣ ಸೌಧದಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಅವರು, ನಿನ್ನೆ ಮನೋರಂಜನ್ ದೇಶಕ್ಕೆ ಮನರಂಜನೆ ಕೊಟ್ಟಿದ್ದಾನೆ. ವಿಶ್ವಗುರು ನರೇಂದ್ರ ಮೋದಿಯವರನ್ನು ದೇವರು ಎಂದು ಮನೋರಂಜನ್ ಪರಿಗಣಿಸುತ್ತಿದ್ದರು ಎಂದು ಅವರ ತಂದೆ ಹೇಳಿದ್ದಾರೆ. ಫೇಕ್ ಅಂಧಭಕ್ತರು ಯಾವ ರೀತಿ ಇರುತ್ತಾರೆ ಎಂದು ನಿನ್ನೆ ಸಾಬೀತು ಮಾಡಿದ್ದಾರೆ. ರಾಷ್ಟ್ರದ ಪ್ರಖ್ಯಾತಿಗೆ ಕಪ್ಪು ಬಣ್ಣ ಬಳಿದಿದ್ದಾರೆ. ವಿಶ್ವಗುರು ಆಡಳಿತ ವೈಫಲ್ಯವನ್ನು ಇಡೀ ವಿಶ್ವವೇ ನೋಡಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಅಶಿಸ್ತಿನ ವರ್ತನೆ – ಲೋಕಸಭೆಯ 14 ಸಂಸದರು ಸಸ್ಪೆಂಡ್
ಡಿಸೆಂಬರ್ 13ರಂದು ಯೋಧರು, ಪೊಲೀಸರು ಪಾರ್ಲಿಮೆಂಟ್ ರಕ್ಷಣೆ ಮಾಡಿದ ದಿನ. ಇವರೆಲ್ಲ ಅಂತಹ ದಿನವನ್ನು ಹುಡುಕುತ್ತಾರೆ. ಡಿಸೆಂಬರ್ 6, ಬುದ್ದ ಹುಟ್ಟಿದ ದಿನವನ್ನೇ ಇವರು ಹುಡುಕುತ್ತಾರೆ. ಮನೋರಂಜನ್ ಹಿನ್ನೆಲೆಯನ್ನು ಕರ್ನಾಟಕ ರಾಜ್ಯದ ಪೊಲೀಸರು ಸಂಪೂರ್ಣ ತನಿಖೆ ಮಾಡಬೇಕು. ಕೆಲವರು ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಲೋಕಸಭೆಯಲ್ಲಿ ಎರಡನೇ ಬಾರಿ ಈ ರೀತಿಯ ಘಟನೆ ನಡೆಯುತ್ತಿದೆ. 75 ವರ್ಷಗಳಲ್ಲಿ ನಾವು ಪಾಸ್ ಕೊಟ್ಟಿದ್ದೇವೆ. ಅವರೆಲ್ಲರೂ ಹೀಗೆ ಮಾಡಿದ್ದಾರಾ? ಯಾಕೆಂದರೆ ವಿಶ್ವಗುರು ಆಗಾಗ ಸಂಶೋಧನೆ ಮಾಡಿ ಅಂಧಭಕ್ತರಿಗೆ ಪಾಠ ಮಾಡುತ್ತಾ ಇರುತ್ತಾರೆ. ಮೋರಿಯಲ್ಲಿ ಪೈಪ್ ಹಾಕಿ ಗ್ಯಾಸ್ ಕಂಡುಹಿಡಿದಿದ್ದು ಇದೇ ವಿಶ್ವಗುರು. ಅದರ ಮೂಲಕ ಗ್ಯಾಸ್ ಪ್ರಯೋಗ ಮಾಡಲು ಬಂದಿದ್ದರಾ ಎಂದು ನೋಡಬೇಕು ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಟಿಎಂಸಿ ಸಂಸದ ಡೆರೆಕ್ ಒಬ್ರಿಯಾನ್ ರಾಜ್ಯಸಭೆಯಿಂದ ಅಮಾನತು