ಕರ್ನಾಟಕ ಸೇರಿ ಇಡೀ ದೇಶ ಬಿಜೆಪಿ ಮಯವಾಗಲಿದೆ – ಜನಾರ್ದನ ರೆಡ್ಡಿ

Public TV
1 Min Read
MLA Janardhana Reddy

ಕೊಪ್ಪಳ: ಮುಂದಿನ ದಿನಗಳಲ್ಲಿ ಕರ್ನಾಟಕ ಸೇರಿ ಇಡೀ ದೇಶ ಬಿಜೆಪಿ ಮಯವಾಗಲಿದೆ ಎಂದು ಶಾಸಕ ಜನಾರ್ದನ ರೆಡ್ಡಿ (G Janardhana Reddy) ಹೇಳಿದರು.

ಜಿಲ್ಲೆಯ ಇರಕಲ್ಲಗಡಾ ಗ್ರಾಮದಲ್ಲಿ ಮಾತನಾಡಿದ ಅವರು, ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ವಿಚಾರವಾಗಿ, ಇದು ಪ್ರಧಾನಿ ಮೋದಿ ಅವರ ಜನಪ್ರಿಯತೆ ತೋರಿಸುತ್ತದೆ. ಬರುವ ದಿನದಲ್ಲಿ ಕರ್ನಾಟಕ ಸೇರಿ ಇಡೀ ದೇಶ ಬಿಜೆಪಿ ಮಯವಾಗಲಿದೆ. ಕಾಂಗ್ರೆಸ್ ದೆಹಲಿಯಲ್ಲಿ ಶೂನ್ಯವಾಗಿದೆ. ನಮ್ಮ ರಾಜ್ಯದಲ್ಲಿ ಗ್ಯಾರಂಟಿ ಸುಳ್ಳಿನ ಸರಮಾಲೆ ಮೇಲೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ. ಕಾಂಗ್ರೆಸ್ ಪಕ್ಷ ಕರ್ನಾಟಕ ಸೇರಿ ದೇಶದಲ್ಲಿ ಶೂನ್ಯವಾಗಲಿದೆ ಎಂದು ಹೇಳಿದರು.ಇದನ್ನೂ ಓದಿ: ಪ್ರೇಮ್‌ ಜೊತೆ ಸಿನಿಮಾ ಮಾಡೇ ಮಾಡ್ತೀನಿ: ದರ್ಶನ್

ಇದೇ ವೇಳೆ ರಾಜ್ಯ ಬಿಜೆಪಿಯಲ್ಲಿ ಒಳಜಗಳ ವಿಚಾರವಾಗಿ ಮಾತನಾಡಿ, ಪಕ್ಷದ ಹಿರಿಯರು ಈಗಾಗಲೇ ಬೆಂಗಳೂರಿಗೆ ಬಂದಿದ್ದಾರೆ. ಎಲ್ಲಾ ವಿಚಾರಗಳು ಶೀಘ್ರದಲ್ಲಿಯೇ ಬಗೆಹರಿಯುತ್ತವೆ. ಪಕ್ಷದ ವರಿಷ್ಟರು ಒಳ್ಳೆಯ ತೀರ್ಮಾನ ಮಾಡುತ್ತಾರೆ. ದೆಹಲಿಯ ಚುನಾವಣೆ ಇದೀಗ ಮುಗಿದಿದೆ. ಕೆಲವೇ ದಿನದಲ್ಲಿ ತೀರ್ಮಾನ ಕೈಗೊಳ್ಳುತ್ತಾರೆ ಎಂದರು.

ಇನ್ನೂ ಅವಕಾಶ ಸಿಕ್ಕರೆ ನಾನು ರಾಜ್ಯಾದ್ಯಕ್ಷ ಆಗ್ತೇನೆ ಎನ್ನುವ ರಾಮುಲು ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಆಸೆ ಎಲ್ಲರಿಗೂ ಇರುತ್ತದೆ. ಆದರೆ ಪಕ್ಷದ ಹಿರಿಯರು ತೀರ್ಮಾನ ಮಾಡಬೇಕು. ಮುಡಾ ವಿಚಾರದಲ್ಲಿ ಇಡಿ ವಿಚಾರಣೆ ಇನ್ನೂ ನಡೆಯುತ್ತಿದೆ. ಹೀಗಾಗಿ ಈಗಾಗಲೇ ಅವರು ವಿಜಯೋತ್ಸವ ಆಚರಣೆ ಮಾಡುವ ಅವಶ್ಯಕತೆ ಇಲ್ಲ. ಇಡಿ ಬಹಳ ಗಂಭೀರವಾಗಿ ತನಿಖೆ ನಡೆಸುತ್ತಿದೆ. ಸಿದ್ದರಾಮಯ್ಯ ಒಬ್ಬರೇ ಜೈಲಿಗೆ ಹೋಗುತ್ತಾರೋ ಅಥವಾ ಎಷ್ಟು ಜನ ಹೋಗುತ್ತಾರೋ ಎನ್ನುವ ಕುರಿತು ಮುಂದಿನ ದಿನದಲ್ಲಿ ಗೊತ್ತಾಗಲಿದೆ ಎಂದು ತಿಳಿಸಿದರು.

ಆನೆಗೊಂದಿ ಸೇತುವೆ ಟಿಡಿಎಸ್ ಪರಿಹಾರ ವಿಚಾರವಾಗಿ, ರಾಜ್ಯ ಸರ್ಕಾರ ನಿರ್ಲಕ್ಷ್ಯದಿಂದಲೇ ಈ ಸ್ಥಿತಿ ಬಂದಿದೆ ಎಂದು ಆರೋಪಿಸಿದರು.ಇದನ್ನೂ ಓದಿ: ಜನಶಕ್ತಿಯೇ ಸರ್ವಶ್ರೇಷ್ಠ – ಅಭಿವೃದ್ಧಿ, ಉತ್ತಮ ಆಡಳಿತ ಗೆಲ್ಲುತ್ತದೆ: ಮೋದಿ

Share This Article