ಬಾಗಲಕೋಟೆ: ಮಲಪ್ರಭಾ ನದಿ (Malaprabha River) ಬೆಳಗಾವಿ (Belagavi) ಜಿಲ್ಲೆಯ ಕಣಕುಂಬಿಯಲ್ಲಿ ಜನ್ಮತಾಳಿ ಬಾಗಲಕೋಟೆ, ಗದಗ ಹೀಗೆ ಮೂರು ಜಿಲ್ಲೆಗಳಲ್ಲಿ ಹರಿಯುತ್ತದೆ. ಮಳೆ ಇಲ್ಲದೆ, ನದಿಯಲ್ಲಿ ನೀರಿಲ್ಲದೆ, ಸದ್ಯ ಮಲಪ್ರಭ ಬರದ ನದಿ ಎಂಬಂತೆ ಗೋಚರವಾಗುತ್ತಿದೆ. ಮತ್ತೊಂದು ಕಡೆ ನದಿ ಪ್ರದೇಶ ಒತ್ತುವರಿ ಕಾರ್ಯ (Encroachment of River Area) ಸದ್ದಿಲ್ಲದೇ ಸಾಗಿದೆ. ಆದರೆ ಇದನ್ನು ತಡೆಯಬೇಕಾಗಿರುವ ಜಿಲ್ಲಾಡಳಿತ (District Administration) ಕಣ್ಮುಚ್ಚಿ ಕುಳಿತಿದೆ.
ಬಾಗಲಕೋಟೆ (Bagalkote) ಜಿಲ್ಲೆಯ ಬಾದಾಮಿ ತಾಲೂಕಿನ ಭಾಗದ ಜನರಿಗೆ ಈ ನದಿ ಜೀವನಾಡಿಯಾಗಿದೆ. ಈ ನದಿಯನ್ನೇ ನಂಬಿ ತಾಲೂಕಿನ ರೈತರು, ಪೇರಳೆ, ದಾಳಿಂಬೆ, ಬಾಳೆ, ಚಿಕ್ಕು ಹಾಗೂ ಕಬ್ಬು ಮುಂತಾದ ವಾಣಿಜ್ಯ ಬೆಳೆಗಳನ್ನು ಬೆಳೆದು ಜೀವನ ಸಾಗಿಸುತ್ತಿದ್ದಾರೆ. ಫಲವತ್ತಾದ ಮಸಾರಿ ಭೂಮಿ ಇರುವ ಈ ಪ್ರದೇಶದ ಭೂಮಿಗೆ ಸ್ವಲ್ಪ ಕಡಿಮೆ ನೀರಿದ್ದರೂ ಸಹಾ ಚೆನ್ನಾಗಿ ಬೆಳೆ ಬೆಳೆದು ಇಲ್ಲಿನ ರೈತರು ಬೇರೆಯವರಿಗೆ ಮಾದರಿಯಾಗಿದ್ದಾರೆ. ಇದನ್ನೂ ಓದಿ: 2022ರಲ್ಲೇ ಹುಲಿ ಚರ್ಮ ಹಿಂದಿರುಗಿಸಲಾಗಿದೆ- ವಿನಯ್ ಗುರೂಜಿ ಆಶ್ರಮದಿಂದ ಸ್ಪಷ್ಟನೆ
Advertisement
Advertisement
ಈ ಬಾರಿ ಮಳೆಯಾಗದ ಹಿನ್ನೆಲೆ ರೈತರ ಮೊಗದಲ್ಲಿ ಬರದ ಕರಿಛಾಯೆ ಆವರಿಸಿದೆ. ನದಿ ಬತ್ತಿ ಬರಿದಾಗಿದ್ದರೆ, ಹೊಲಗದ್ದೆಗಳಿಗೆ ಅಷ್ಟೇ ಅಲ್ಲ, ಜನ ಜಾನುವಾರುಗಳಿಗೆ ಕುಡಿಯಲು ನೀರಿಲ್ಲದ ಪರಿಸ್ಥಿತಿ ಎದುರಾಗಿದೆ. ಮತ್ತೊಂದು ಕಡೆ ಬರಿದಾದ ನದಿಯ ಪ್ರದೇಶವನ್ನು ನದಿ ಪಾತ್ರದ ರೈತರೇ ಆಕ್ರಮಿಸಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ರಾಮನ ಬಾಣ ಹುಸಿಯಿಲ್ಲ, ಸುರರು-ಅಸುರರು ಕಾದಾಡಿದರು, ಭಕ್ತಕೋಟಿಗೆ ಮಂಗಳವಾಯಿತು: ಮೈಲಾರಲಿಂಗ ಸ್ವಾಮಿ ಕಾರ್ಣಿಕ
Advertisement
Advertisement
2019ರಿಂದ ಸತತ ಮೂರು ವರ್ಷ ಪ್ರವಾಹದಿಂದ ಕಂಗಾಲಾಗಿರುವ ಈ ಭಾಗದ ರೈತರು, ಈ ಬಾರಿ ಬರ ಸಿಡಿಲಿಗೆ ಸಿಕ್ಕು ನಲುಗಿ ಹೋಗಿದ್ದಾರೆ. ಈ ಹಿಂದೆ ಪ್ರವಾಹ ಆವರಿಸಿದ ಸಂದರ್ಭದಲ್ಲಿ, ಮಲಪ್ರಭಾ ನದಿ ನೀರಿನ ಹರಿವಿನ ದಿಕ್ಕೇ ಬದಲಾಗಿದೆ. ನದಿ ಪ್ರದೇಶ ಒತ್ತುವರಿ ಆಗಿರುವುದೇ ಆ ಪ್ರವಾಹಕ್ಕೆ ಕಾರಣ ಎಂಬುದನ್ನು ಅರಿತು ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಮಲಪ್ರಭಾ ನದಿ ಒತ್ತುವರಿ ಸರ್ವೆ ಕಾರ್ಯಕ್ಕೆ ಸೂಚನೆ ನೀಡಿತ್ತು. ಅಧಿಕಾರಿ ವರ್ಗ ಒತ್ತುವರಿ ಸರ್ವೆ ಮುಗಿಸಿ ರಾಜ್ಯ ಸರ್ಕಾರಕ್ಕೆ ಪ್ರಸ್ಥಾವನೆಯನ್ನೂ ಸಲ್ಲಿಸಿದ್ದರು. ಇದನ್ನೂ ಓದಿ: ಸರ್ಕಾರದ ಹಣ ತಿಂದಿಲ್ಲವೆಂದು ಹೆಚ್‍ಡಿಕೆ ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡ್ಲಿ: ಬಾಲಕೃಷ್ಣ
ಆದರೆ ಸದ್ಯ ರಾಜ್ಯದಲ್ಲಿ ಅಧಿಕಾರಕ್ಕೇರಿರುವ ಕಾಂಗ್ರೆಸ್ ಪಕ್ಷ ಈ ಬಗ್ಗೆ ಗಮನ ಹರಿಸುತ್ತಿಲ್ಲ. ಹೀಗಾಗಿ ನದಿ ಪ್ರದೇಶ ಒತ್ತುವರಿ ಸದ್ದಿಲ್ಲದೇ ಸಾಗುತ್ತಿದೆ ಎನ್ನುತ್ತಿದ್ದಾರೆ ರೈತರು. ಇನ್ನು ಸುಮಾರು 130 ಮೀಟರ್ ಅಗಲವಾಗಿ ಹರಿಯುತ್ತಿದ್ದ ನದಿಯ ಒಡಲು ಕೆಲ ಭಾಗದಲ್ಲಿ ಕೇವಲ 20ರಿಂದ 30 ಮೀಟರ್ ಅಗಲಕ್ಕೆ ಬಂದು ತಲುಪಿದೆ. ನದಿ ಒತ್ತುವರಿ ತೆರವು ಮಾಡದೇ ಇದ್ದರೇ ನದಿ ಯಾವುದು, ರೈತರ ಜಮೀನು ಯಾವುದು ಎಂಬುದೇ ತಿಳಿಯದಂತಾಗುತ್ತದೆ. ನದಿ ಪ್ರದೇಶ ಅತಿಕ್ರಮಣ ಮಾಡಿದವರ ವಿರುದ್ಧ ಕ್ರಮ ಜರುಗಿಸಿ ನದಿಯ ಒಡಲು ಹಿಗ್ಗಿಸಿ ಎಂದು ರೈತರು ಆಗ್ರಹಿಸುತ್ತಿದ್ದಾರೆ. ಇದನ್ನೂ ಓದಿ: ರಾಮನಗರವನ್ನು ಬೆಂಗಳೂರು ದಕ್ಷಿಣ ಜಿಲ್ಲೆಯನ್ನಾಗಿ ಮಾಡ್ತೇವೆ: ಬಾಲಕೃಷ್ಣ
ಆದರೆ ನದಿಯ ಒಡಲು ಹಿಗ್ಗಿಸುವ ಕೆಲಸ ಮಾಡಬೇಕಿರುವ ಅಧಿಕಾರಿಗಳು ನಿದ್ರೆಗೆ ಜಾರಿದರೆ ಜನಪ್ರತಿನಿಧಿಗಳು ಈ ಬಗ್ಗೆ ತುಟಿಬಿಚ್ಚುತ್ತಿಲ್ಲ. ಹೀಗಾಗಿ ಮಳೆ ಇಲ್ಲದೇ ಮಲಪ್ರಭಾ ಬತ್ತಿ ಬರಿದಾಗುತ್ತಿದ್ದರೆ ಇತ್ತ ನದಿ ಪ್ರದೇಶ ಒತ್ತುವರಿ ಕಾರ್ಯ ಸುಲಲಿತವಾಗಿ ಸಾಗುತ್ತಿದೆ. ಇದನ್ನೂ ಓದಿ: ಅದ್ಧೂರಿಯಾಗಿ ತೆರೆಕಂಡ ಮಂಗಳೂರು ದಸರಾ
Web Stories