ಹಾವೇರಿ: ಕಳೆದ 4 ದಿನಗಳಿಂದ ಓಡಾಡುತ್ತಿರುವ ಒಂಟಿ ಸಲಗ (Elephant) ಇಂದು ಬೆಳಗ್ಗೆ ಹಿರೇಕೆರೂರು (Hirekerur) ಪಟ್ಟಣದಲ್ಲಿ ಕಾಣಿಸಿಕೊಂಡಿದೆ. ಹಿರೇಕೆರೂರು ಪಟ್ಟಣದ ದುರ್ಗಾದೇವಿ ನಗರದ ಶಾಸಕರ ಮಾದರಿ ಶಾಲೆಯ ಗೇಟ್ ಮುರಿದು ಆನೆ ಒಳ ಪ್ರವೇಶಿಸಿದೆ.
ಆರಂಭದಲ್ಲಿ ಬ್ಯಾಡಗಿ ಬಳಿಕ ರಾಣೆಬೆನ್ನೂರು ಈಗ ಹಿರೇಕೆರೂರಿನಲ್ಲಿ ಕಾಣಿಸಿಕೊಂಡಿದ್ದು ಸುತ್ತಮುತ್ತಲಿನ ಗ್ರಾಮಸ್ಥರು ಆತಂಕದಲ್ಲಿದ್ದಾರೆ. ರೈತರ ಜಮೀನಿನಲ್ಲಿ ಬೆಳೆದಿದ್ದ ಬೆಳೆಯನ್ನು ಹಾನಿ ಮಾಡುತ್ತಾ ಆನೆ ನುಗ್ಗುತ್ತಿದೆ. ಇದನ್ನೂ ಓದಿ: ರೂಮಿನಲ್ಲಿ ಕೆಟ್ಟ ವಾಸನೆ ಬಂದ್ರೆ ಬಿಟ್ಟಿದ್ದು ಯಾರು ಅನ್ನೋದು ಬಿಟ್ಟವನಿಗೆ ಮಾತ್ರ ಗೊತ್ತಿರುತ್ತೆ: ಸುದೀಪ್
ನಿನ್ನೆ ರಾಣೆಬೇನ್ನೂರು ತಾಲೂಕಿನ ಕುಸಗೂರ ಗ್ರಾಮದ ಬಳಿ ಆನೆ ಪ್ರತ್ಯಕ್ಷವಾಗಿತ್ತು. ಇವತ್ತು ಶಿಕಾರಿಪುರದತ್ತ ಆನೆ ಮುಖ ಮಾಡಿದ್ದು ಸೆರೆಹಿಡಿಯಲು 4 ದಿನಗಳಿಂದ ಅರಣ್ಯ ಇಲಾಖೆ ಹರಸಾಹಸ ಪಡುತ್ತಿದೆ. ಆದರೆ ಒಂದೇ ಕಡೆ ನಿಲ್ಲದೆ ಬೇರೆ ಕಡೆ ಕಾಡಾನೆ ಹೋಗುತ್ತಿರುವುದರಿಂದ ಸೆರೆ ಹಿಡಿಯಲು ಕಷ್ಟವಾಗುತ್ತಿದೆ.

