ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ (Upendra) ರಾಜಕಾರಣಕ್ಕೆ ಎಂಟ್ರಿ ಕೊಟ್ಟು ಹಲವು ವರ್ಷಗಳೇ ಕಳೆದಿವೆ. ಉತ್ತಮ ಪ್ರಜಾಕೀಯ ಪಾರ್ಟಿ (Uttama Prajaakeeya Party) ಹೆಸರಿನಲ್ಲಿ ಅವರು ಪಕ್ಷವೊಂದನ್ನು ಶುರು ಮಾಡುವ ಮೂಲಕ ರಾಜ್ಯಾದ್ಯಂತ ಪ್ರವಾಸ ಕೂಡ ಮಾಡಿದ್ದಾರೆ. ಈ ಪಕ್ಷದಿಂದ ಈಗಾಗಲೇ ಪಂಚಾಯತಿ ಚುನಾವಣೆಯನ್ನು ಅವರು ಎದುರಿಸಿದ್ದರು. ಈ ಪಕ್ಷದಿಂದ ಪಂಚಾಯತಿ ಚುನಾವಣೆಯಲ್ಲಿ ಒಬ್ಬ ಸದಸ್ಯ ಕೂಡ ಗೆದ್ದಿದ್ದಾನೆ. ಆದರೆ, ಅಧಿಕೃತವಾಗಿ ಈ ಪಕ್ಷಕ್ಕೆ ಚಿಹ್ನೆ ಇರಲಿಲ್ಲ. ಇದೀಗ ಕೇಂದ್ರ ಚುನಾವಣೆ ಆಯೋಗ (Election Commission) ಪಕ್ಷಕ್ಕೆ ಚಿಹ್ನೆ ನೀಡಿದೆ.
ಉಪೇಂದ್ರ ಅಧ್ಯಕ್ಷರಾಗಿರುವ ಉತ್ತಮ ಪ್ರಜಾಕೀಯ ಪಕ್ಷಕ್ಕೆ ‘ಆಟೋ’ವನ್ನು (Auto) ಚಿಹ್ನೆಯನ್ನಾಗಿ ಕೇಂದ್ರ ಚುನಾವಣೆ ಆಯೋಗ ನೀಡಿದೆ. ಈ ಮೂಲಕ ಉತ್ತಮ ಪ್ರಜಾಕೀಯ ಪಕ್ಷಕ್ಕೆ ಅಧಿಕೃತ ಚಿಹ್ನೆ ದೊರೆತಿದೆ. ಹಲವು ವರ್ಷಗಳಿಂದ ತಮ್ಮದೇ ಆದ ಸಿದ್ಧಾಂತ ಮೂಲಕ ಉಪೇಂದ್ರ ತಮ್ಮ ಪಕ್ಷಕ್ಕೆ ಅಭ್ಯರ್ಥಿಗಳನ್ನು ಸೆಳೆಯುತ್ತಿದ್ದಾರೆ. ತಾವು ನೇರವಾಗಿ ಚುನಾವಣೆ ಎದುರಿಸದೇ ಇದ್ದರೂ, ತಮ್ಮ ಅಭ್ಯರ್ಥಿಗಳ ಮೂಲಕ ರಾಜಕೀಯ ಪಡಸಾಲೆಯಲ್ಲಿ ತಮ್ಮ ಕನಸುಗಳನ್ನು ಬಿತ್ತುತ್ತಿದ್ದಾರೆ. ಇದನ್ನೂ ಓದಿ:ಅಪ್ಪು ಹೆಸರಿನಲ್ಲಿ ಮಕ್ಕಳ ಚಿತ್ರೋತ್ಸವ: ಅದ್ಧೂರಿ ಚಾಲನೆ
ಚುನಾವಣೆ ಎನ್ನುವುದು ಸುಲಭದ ತುತ್ತಲ್ಲ ಎಂದು ಉಪೇಂದ್ರಗೆ ಗೊತ್ತಿದ್ದರೂ, ವಿಭಿನ್ನ ಪ್ರಣಾಳಿಕೆಯ ಮೂಲಕ ಗಮನ ಸೆಳೆದಿದ್ದಾರೆ ಉಪೇಂದ್ರ. ಅವರ ಪ್ರಣಾಳಿಕೆಯ ಅಂಶಗಳು ಜನಪರವಾಗಿವೆ ನಿಜ. ಆದರೆ, ಅವುಗಳು ಜಾರಿಯಾಗುವುದು ತುಂಬಾ ಕಷ್ಟ. ಹಾಗಂತ ಉಪೇಂದ್ರ ಸುಮ್ಮನೆ ಕೂತಿಲ್ಲ. ಸಾಧ್ಯವಾದಷ್ಟು ಅವುಗಳನ್ನು ಜನರಿಗೆ ತಲುಪಿಸುವತ್ತ ನಾನಾ ರೀತಿಯಲ್ಲಿ ಕಸರತ್ತು ಮಾಡುತ್ತಿದ್ದಾರೆ.
ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮತ್ತೆ ಕಾರ್ಯೋನ್ಮುಖರಾಗಿರುವ ಅವರು, ವಿಧಾನಸಭೆ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಅಭ್ಯರ್ಥಿಗಳಿಗಾಗಿ ಮೊನ್ನೆಯಷ್ಟೇ ಪರೀಕ್ಷೆಯನ್ನು ಮಾಡಿದ್ದಾರೆ. ತಮ್ಮ ಕನಸುಗಳಿಗೆ ಮತ್ತಷ್ಟು ಕಸುವು ನೀಡುವಂತಹ ಅಭ್ಯರ್ಥಿಗಳ ಹುಡುಕಾಟದಲ್ಲಿ ಸದ್ಯ ಅವರು ತಲ್ಲೀಣರಾಗಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಎಷ್ಟು ಹುರಿಯಾಳುಗಳನ್ನು ಅವರು ಹಾಕಲಿದ್ದಾರೆ ಎನ್ನುವುದೇ ಸದ್ಯಕ್ಕಿರುವ ಕುತೂಹಲ.
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k