ರಾಯಚೂರು: ಜಿಲ್ಲೆಯ ಲಿಂಗಸುಗೂರು (Lingasuguru) ತಾಲೂಕಿನ ಪೈದೊಡ್ಡಿ ಕ್ರಾಸ್ ಬಳಿ ಕುರಿಗಳ ಜೀವ ಉಳಿಸಲು ಹೋಗಿ ಸರ್ಕಾರಿ ಬಸ್ ಕಂದಕಕ್ಕೆ ಇಳಿದ ಘಟನೆ ನಡೆದಿದೆ.
ಹಾವೇರಿಯಿಂದ ಕಲಬುರಗಿ ಕಡೆಗೆ ಹೊರಟಿದ್ದ ಬಸ್‌ಗೆ ಏಕಾಏಕಿ ಕುರಿ ಹಿಂಡು ಅಡ್ಡ ಬಂದಿದ್ದು, ಚಾಲಕನ ನಿಯಂತ್ರಣ ತಪ್ಪಿದೆ. ತಕ್ಷಣವೇ ಬಸ್‌ನ್ನು ಚಾಲಕ ಕಂದಕಕ್ಕೆ ಇಳಿಸಿದ್ದಾನೆ. ಸ್ವಲ್ಪದರಲ್ಲೇ ಭಾರೀ ಅನಾಹುತ ತಪ್ಪಿದ್ದು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.ಇದನ್ನೂ ಓದಿ: ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಕೇಸ್ – ಭಾನುವಾರ ಮೃತ ಸಚಿನ್ ನಿವಾಸಕ್ಕೆ ಬಿಜೆಪಿ ನಿಯೋಗ ಭೇಟಿ
ಕೂಡಲೇ ಚಾಲಕ ಎಚ್ಚೆತ್ತಿದ್ದರಿಂದ ಯಾವುದೇ ಅಹಿತಕರ ಘಟನೆ ಜರುಗಿಲ್ಲ. ಘಟನೆಯಿಂದ ಹೆದ್ದಾರಿಯಲ್ಲಿ ಸುಮಾರು 5 ಕಿ.ಮೀವರಗೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.ಇದನ್ನೂ ಓದಿ: ಕಾರ್ಪೊರೇಟ್ ಕಂಪನಿಗೆ 2 ದಿನದಲ್ಲಿ 12.51 ಕೋಟಿ ವಂಚನೆ; ಬ್ಯಾಂಕ್ ಮ್ಯಾನೇಜರ್ ಸೇರಿ ನಾಲ್ವರ ಬಂಧನ