ಚಾಲಕನ ನಿಯಂತ್ರಣ ತಪ್ಪಿ 30 ಅಡಿ ಎತ್ತರದಿಂದ ಪಂಚಾಯ್ತಿ ಆವರಣಕ್ಕೆ ಬಿದ್ದ ಕಾರು – ಐವರು ಪಾರು

Public TV
1 Min Read
Chikkamagaluru Car Accident

ಚಿಕ್ಕಮಗಳೂರು: ದಟ್ಟ ಮಂಜು ಕವಿದಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ಪ್ರವಾಸಿ ಕಾರೊಂದು (Tourist Car) 30 ಅಡಿ ಎತ್ತರದ ಪ್ರದೇಶದಿಂದ ಪಂಚಾಯ್ತಿ ಆವರಣದೊಳಗೆ ಬಿದ್ದಿರುವ ಘಟನೆ ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಮೂಡಿಗೆರೆ (Mudigere) ತಾಲೂಕಿನ ಸುಂಕಸಾಲೆ ಗ್ರಾಮದ ಬಳಿ ನಡೆದಿದೆ.

ಬೆಂಗಳೂರಿನಿಂದ ಹೊರನಾಡಿಗೆ ಹೋಗುತ್ತಿದ್ದ ಪ್ರವಾಸಿ ಕಾರು ರಸ್ತೆಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಚಾಲಕ ವೇಗವಾಗಿ ಕಾರು ಚಲಾಯಿಸುತ್ತಿದ್ದದ್ದು ಅಪಘಾತಕ್ಕೆ ಒಂದು ಕಾರಣ ಎಂದು ತಿಳಿದು ಬಂದಿದೆ. 30 ಅಡಿ ಎತ್ತರದ ಪ್ರದೇಶದಿಂದ ಬಿದ್ದ ಕಾರು ಸುಂಕಸಾಲೆ ಗ್ರಾಮ ಪಂಚಾಯ್ತಿಯ ಆವರಣದ ಒಳಕ್ಕೆ ಬಿದ್ದಿದೆ. ಕಾರಿನಲ್ಲಿ ಐವರು ಪ್ರಯಾಣಿಕರಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಇದನ್ನೂ ಓದಿ: ಗುಣಮಟ್ಟದಲ್ಲಿ ರಾಜಿಯಾಗೋ ಪ್ರಶ್ನೆಯೇ ಇಲ್ಲ, ದೇಶದ ಯಾವ ಲ್ಯಾಬ್‌ನಲ್ಲಾದ್ರೂ ನಂದಿನಿ ಪ್ರೊಡಕ್ಟ್ ಪರೀಕ್ಷೆ ಮಾಡಲಿ: KMF ಎಂಡಿ

Chikkamagaluru Car Accident

ಕಾರು ಬಿದ್ದ ರಭಸಕ್ಕೆ ಕಾರು ಬಹುತೇಕ ಜಖಂಗೊಂಡಿದೆ. ಘಟನೆಯಲ್ಲಿ ಮೂವರಿಗೆ ಗಂಭೀರ ಗಾಯವಾಗಿದ್ದು, ಗಾಯಾಳುಗಳನ್ನ ಮೂಡಿಗೆರೆ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಶಾಸಕ ಮುನಿರತ್ನ ವಿರುದ್ಧ ಅತ್ಯಾಚಾರ ಪ್ರಕರಣ – ತನಿಖೆಗೆ ಎಸ್‌ಐಟಿ ರಚಿಸಿದ ರಾಜ್ಯ ಸರ್ಕಾರ

ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಿಂದ ಜಾವಳಿ, ಸುಂಕಸಾಲೆ, ಹಿರೇಬೈಲು ಮಾರ್ಗವಾಗಿ ಕಳಸ-ಹೊರನಾಡಿಗೆ ಹೋಗುವ ಮಾರ್ಗ ಎತ್ತರದ ಪ್ರದೇಶ ಹಾಗೂ ಕಾಫಿತೋಟಗಳ ಮಧ್ಯೆ ಹಾವುಬಳುಕಿನ ಮೈಕಟ್ಟಿನ ರಸ್ತೆಯಲ್ಲಿ ಸಾಗಬೇಕು. ಹಾಗಾಗಿ, ಪ್ರವಾಸಿಗರು ಅತ್ಯಂತ ಜಾಗರೂಕರಾಗಿ ವಾಹನ ಚಲಾಯಿಸಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಇಡೀ ರಾಜ್ಯಕ್ಕೆ ಬೆಳಕು ನೀಡುವ ರಾಯಚೂರಿನಲ್ಲೇ ಬೆಳಕಿಲ್ಲ – ಸಾರ್ವಜನಿಕರಿಂದ ತೀವ್ರ ಆಕ್ರೋಶ

Share This Article