ಮುಂಬೈ: ಮಹಾರಾಷ್ಟ್ರದ (Maharashtra) ಅಭಿವೃದ್ಧಿಗೆ ಡಬಲ್ ಎಂಜಿನ್ (Double-Engine) ಸರ್ಕಾರ ಈಗ ತ್ರಿಬಲ್ ಎಂಜಿನ್ (Triple Engine) ಆಗಿದೆ ಎಂದು ಮುಖ್ಯಮಂತ್ರಿ ಏಕನಾಥ್ ಶಿಂಧೆ (Eknath Shinde) ಅಭಿಪ್ರಾಯಪಟ್ಟಿದ್ದಾರೆ.
ಎನ್‌ಸಿಪಿ ಅಜಿತ್ ಪವಾರ್ (Ajit Pawar) ಮಹಾರಾಷ್ಟ್ರ ಸರ್ಕಾರದ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮಾತನಾಡಿದ ಶಿಂಧೆ, ಓರ್ವ ಸಿಎಂ, ಇಬ್ಬರು ಡಿಸಿಎಂ ನಮ್ಮ ಸರ್ಕಾರದಲ್ಲಿದ್ದಾರೆ. ಮಹಾರಾಷ್ಟ್ರದ ಅಭಿವೃದ್ಧಿಗೆ ಡಬಲ್ ಎಂಜಿನ್ ಈಗ ತ್ರಿಬಲ್ ಎಂಜಿನ್ ಆಗಿದೆ. ಅಜಿತ್ ಪವಾರ್ ಅವರನ್ನು ನಾನು ಸ್ವಾಗತಿಸುತ್ತೇನೆ. ಅವರ ಅನುಭವ ಸರ್ಕಾರಕ್ಕೆ ಶಕ್ತಿ ನೀಡಲಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಎನ್‌ಸಿಪಿಯಲ್ಲಿ ಬಿರುಕು – ಶಿಂಧೆ ಸರ್ಕಾರ ಸೇರಿದ ಅಜಿತ್ ಪವಾರ್ ಈಗ ಡಿಸಿಎಂ
- Advertisement -
- Advertisement -
ಸಚಿವ ಸಂಪುಟದಲ್ಲಿ ಸ್ಥಾನ ಹಂಚಿಕೆ ಕುರಿತು ಚರ್ಚೆ ನಡೆಸಲು ಸಾಕಷ್ಟು ಸಮಯಾವಕಾಶವಿದೆ. ಮಹಾರಾಷ್ಟ್ರದ ಅಭಿವೃದ್ಧಿಗಾಗಿ ನಾವೆಲ್ಲ ಒಗ್ಗೂಡಿದ್ದೇವೆ. ಲೋಕಸಭೆ ಚುನಾವಣೆಯಲ್ಲಿ 4-5 ಸ್ಥಾನಗಳನ್ನು ಪಡೆದಿರುವ ಅವರು (ವಿಪಕ್ಷಗಳು) ಈ ಬಾರಿ ಅಷ್ಟು ಸ್ಥಾನಗಳನ್ನು ಪಡೆಯಲು ಸಾಧ್ಯವಾಗಲ್ಲ ಎಂದು ಟಾಂಗ್ ಕೊಟ್ಟಿದ್ದಾರೆ.
- Advertisement -
ಮಹಾರಾಷ್ಟ್ರದಲ್ಲಿ ಭಾನುವಾರ ನಡೆದ ರಾಜಕೀಯ ಬೆಳವಣಿಗೆಯಲ್ಲಿ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಅಜಿತ್ ಪವಾರ್ ನೇತೃತ್ವದಲ್ಲಿ 29 ಶಾಸಕರು, ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಬಣದ ಜೊತೆ ಕೈ ಜೋಡಿಸಿದ್ದಾರೆ. ಇದನ್ನೂ ಓದಿ: ನಾಳೆಯಿಂದ ಹೊಸ ಸರ್ಕಾರದ ಮೊದಲ ಅಧಿವೇಶನ – ಸದನ ಕದನ ಅಖಾಡ ರೆಡಿ
- Advertisement -
ಮಹಾರಾಷ್ಟ್ರ ರಾಜಕೀಯ ಇತಿಹಾಸದಲ್ಲಿ ಶಿವಸೇನೆಯ ಏಕನಾಥ್ ಶಿಂಧೆ ಬಣ, ಬಿಜೆಪಿ ಹಾಗೂ ಎನ್‌ಸಿಪಿ ಅಜಿತ್ ಪವಾರ್ ಬಣ ಕೈ ಜೋಡಿಸಿ ಸರ್ಕಾರ ನಡೆಸುತ್ತಿದೆ. ಶರದ್ ಪವಾರ್ ಅವರಿಗೆ ಸೆಡ್ಡು ಹೊಡೆದು, 29 ಶಾಸಕರ ಬೆಂಬಲದೊಂದಿಗೆ ರಾಜಭವನ ತಲುಪಿದ ಪವಾರ್ ಇಂದು ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
Web Stories