ಬೆಳಗಾವಿ: ರಮೇಶ್ ಜಾರಕಿಹೊಳಿ ಹೇಳಿಕೆಯನ್ನು ನಾನು ಹೃದಯದಿಂದ ಸ್ವಾಗತ ಮಾಡುತ್ತೇನೆ. ಸೋವಾರದವರೆಗೆ ಕಾಯುವುದು ಬೇಡ ದಾಖಲೆಗಳಿದ್ದರೆ, ಇಂದೇ ಬಿಡುಗಡೆ ಮಾಡಲಿ ಎಂದು ರಮೇಶ್ ಜಾರಕಿಹೊಳಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಸವಾಲು ಹಾಕಿದ್ದಾರೆ.
Advertisement
ನಗರದಲ್ಲಿ ಸಿಡಿ ಹಿಂದೆ ಇರುವ ಮಹಾನಾಯಕ ಸಂತೋಷ್ ಪಾಟೀಲ್ ಆತ್ಮಹತ್ಯೆಗೂ ಕಾರಣ, ಅವರ ದಾಖಲೆ ಬಿಡುಗಡೆ ಮಾಡುವುದರ ಬಗ್ಗೆ ರಮೇಶ್ ಜಾರಕಿಹೊಳಿ ಹೇಳಿಕೆ ನೀಡಿದ್ದರು. ಈ ವಿಚಾರವಾಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಲಕ್ಷ್ಮಿ ಹೆಬ್ಬಾಳ್ಕರ್ ಅವರು, ರಮೇಶ್ ಜಾರಕಿಹೊಳಿ ಹೇಳಿಕೆಯನ್ನು ನಾನು ಹೃದಯದಿಂದ ಸ್ವಾಗತ ಮಾಡುತ್ತೇನೆ. ಸೋವಾರದವರೆಗೆ ಕಾಯುವುದು ಬೇಡ. ಧಾರವಾಹಿಯಲ್ಲಿ ಕುತೂಹಲ ಕ್ರಿಯೇಟ್ ಮಾಡುವ ರೀತಿ ಮಾಡಬೇಡಿ. ದಾಖಲೆಗಳಿದ್ದರೆ, ಇವತ್ತೆ ಬಿಡುಗಡೆ ಮಾಡಬೇಕು. ಈ ಘಳಿಗೆಯಲ್ಲಿ ಬಿಡುಗಡೆ ಮಾಡಬೇಕು. ಬೇಜವಾಬ್ದಾರಿ ಹೇಳಿಕೆಯಿಂದ ಗೊಂದಲ ಸೃಷ್ಟಿ ಆಗುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.
Advertisement
Advertisement
ಸಂತೋಷ್ ಪಾಟೀಲ್ ಮನೆಗೆ ನಿರಾಣಿ ಹೋಗಿ ಬಂದಿದ್ದಾರೆ. ಗ್ರಾಮ ಪಂಚಾಯತಿ ಅಧ್ಯಕ್ಷ ನಾಗೇಶ್ ಮನ್ನೊಳ್ಕರ್ ಎರಡು ಸಲ ಈಶ್ವರಪ್ಪ ಬಳಿ ಕರೆದುಕೊಂಡು ಹೋಗಿದ್ದೆ ಎಂದಿದ್ದಾರೆ. ರಮೇಶ್ ಜಾರಕಿಹೊಳಿ ಕೆಲಸ ಆಗಿದೆ ಎಂದಿದ್ದಾರೆ. ಬಿಜೆಪಿ ಪದಾಧಿಕಾರಿಗಳು ಸಂತೋಷ್ ನಮ್ಮ ಕಾರ್ಯಕರ್ಯ ಅಲ್ಲ ಎಂದಿದ್ದಾರೆ. ಎಲ್ಲಾ ಗೊಂದಲ ಬಿಜೆಪಿ ಪಕ್ಷದಲ್ಲಿ ಇದೆ. ಇದನ್ನು ಮೊದಲು ಸರಿ ಮಾಡಲಿ ಎಂದಿದ್ದಾರೆ.
Advertisement
ಸಂತೋಷ್ ಪಾಟೀಲ್ ಕೆಲಸ ಮಾಡುವಾಗ ರಮೇಶ್ ಜಿಲ್ಲಾ ಉಸ್ತುವಾರಿ ಮಂತ್ರಿ ಆಗಿದ್ದರು. ನಾನು ಹತ್ತು ಸಾರಿ ಅವರನ್ನು ಕರೆಸುವ ಯತ್ನ ಮಾಡಿದೆ. ತಾಲೂಕು ಪಂಚಾಯತ್ ಸಭೆಯಲ್ಲೂ ಈ ಬಗ್ಗೆ ಪ್ರಸ್ತಾಪ ಮಾಡಿದೆ. ಆದರೆ ಅವನು ಬರಲೇ ಇಲ್ಲ. ನಾನು ಬಿಜೆಪಿ, ಬಿಜೆಪಿ ಎನ್ನುತ್ತಲೇ ಇದ್ದ. ನಾನು ರಮೇಶ್ ಜಾರಕಿಹೊಳಿ ಫಾಲೋವರ್ ಎನ್ನುತ್ತಿದ್ದ. ಯಾರು ಕೆಲಸ ಮಾಡಿಸಿದರು, ಯಾರು ಪ್ರಚೋದನೆ ಮಾಡಿದರು. ಯಾರ ಕುಮ್ಮಕ್ಕು, ಆಶ್ವಾಸನೆ ಮೇಲೆ ಸಂತೋಷ್ ಪಾಟೀಲ್ ಮಾಡಿದ್ದರು. ಬಿಜೆಪಿ ಸಂಘಟನೆ ಆಗಲಿ ಅಂತ ಕೆಲಸ ಮಾಡಿರಬಹುದು ಎಂದು ಹೇಳಿದ್ದಾರೆ.
108 ಕಾಮಗಾರಿ ಕಳಪೆ ಎಂಬ ಹೇಳಿಕೆ ವಿಚಾರ: ಟ್ರೋಲ್ ಮಾಡಲಿ ನಾನು ಸ್ವಾಗತ ಮಾಡುತ್ತೇನೆ. ನನ್ನ ಹೇಳಿಕೆಯಿಂದ ನಾನು ಹಿಂದೆ ಸರಿಯಲ್ಲ. ಇಲಾಖೆ ಅಧಿಕಾರಿಗಳ ಜವಾಬ್ದಾರಿ ಇದೆಯಲ್ಲ. ಜಿಲ್ಲಾ ಪಂಚಾಯತಿ ಸಿಇಓ ಅವರನ್ನು ಮೂರು ಸಲ ಭೇಟಿಯಾಗಿದ್ದೇನೆ. ನನ್ನ ಗಮನಕ್ಕೆ ಬಂದಿದ್ದರಿಂದಲೇ ನಾನು ಓಡಾಡಿದ್ದೇನೆ. ಯಾವ ಇಲಾಖೆಯಿಂದ ಕೆಲಸ ಆಗಿದೆ, ಕಾಮಗಾರಿ ಆಗಿದೆ. ಅದು ಕಳಪೆನಾ ಏನು ಅಂತ ಎಂಬುವುದು ಅವರ ಇಲಾಖೆ ಅಧಿಕಾರಿಗಳ ಜವಾಬ್ದಾರಿಯಾಗಿದೆ. ಈಶ್ವರಪ್ಪ ಭರವಸೆ ಮೇಲೆ ಸಂತೋಷ್ ಪಾಟೀಲ್ ಕೆಲಸ ಮಾಡಿದ್ದಾನೆ. ಈ ಬಗ್ಗೆ ಗ್ರಾಮ ಪಂಚಾಯತಿ ಅಧ್ಯಕ್ಷರ ವಿರುದ್ಧವು ತನಿಖೆ ಆಗಬೇಕು ಎಂದು ಒತ್ತಾಯಿಸಿದ್ದಾರೆ.