ದಕ್ಷಿಣದ ಸಿನಿಮಾಗಳಿಗೆ ಹಿಂದಿಯಲ್ಲಿ (Bollywood) ಬೇಡಿಕೆ ಹೆಚ್ಚಾಗುತ್ತಿದೆ. ಕೋಟಿ ಕೋಟಿ ಮುಂಗಡ ಹಣಕೊಟ್ಟು ವಿತರಣಾ ಹಕ್ಕುಗಳನ್ನು (Rights) ಖರೀದಿಸಲಾಗುತ್ತಿದೆ. ಅಲ್ಲು ಅರ್ಜುನ್ ನಟನೆಯ ಪುಷ್ಪ 2 ಸಿನಿಮಾದ ಹಕ್ಕನ್ನು ಬರೋಬ್ಬರಿ 200 ಕೋಟಿ ರೂಪಾಯಿಗೆ ಖರೀದಿಸಿದ್ದಾರಂತೆ ಅನಿಲ್ ತಡಾನಿ. ಅಧಿಕೃತವಾಗಿ ಮಾಹಿತಿಯನ್ನು ಚಿತ್ರತಂಡವಾಗಲಿ ಅಥವಾ ತಡಾನಿ ಆಗಲಿ ಹೇಳಿಕೊಳ್ಳದೇ ಇದ್ದರೂ, ಬಿಟೌನ್ ನಲ್ಲಿ ಇದು ಭಾರೀ ಸದ್ದು ಮಾಡಿದೆ.
Advertisement
ಪುಷ್ಪ 2 ಸಿನಿಮಾ ಬಿಡುಗಡೆಯ ದಿನಾಂಕ ಸಮೀಪಕ್ಕೆ ಬರುತ್ತಿದ್ದಂತೆಯೇ ಸಿನಿಮಾ ತಲುಪಿಸಲು ನಾನಾ ರೀತಿಯ ಸಿದ್ದತೆಗಳನ್ನು ಮಾಡುತ್ತಿದೆ ಚಿತ್ರತಂಡ. ಈಗಾಗಲೇ ಫಸ್ಟ್ ಲುಕ್, ಟೀಸರ್ ರಿಲೀಸ್ ಮಾಡಿರುವ ನಿರ್ದೇಶಕರು, ಈಗ ಮೇ 1 ರಂದು ಚಿತ್ರದ ಮೊದಲ ಲಿರಿಕಲ್ ಸಾಂಗ್ (Lyrical Song) ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ.
Advertisement
Advertisement
ಭಾರತೀಯ ಸಿನಿಮಾ ರಂಗದಲ್ಲಿ ಪುಷ್ಪ 2 ದಾಖಲೆಗೆ ಕಾರಣವಾಗುತ್ತಿದೆ. ಈ ಸಿನಿಮಾದ ಡಿಜಿಟೆಲ್ ರೈಟ್ಸ್ (Digital Rights) ಬರೋಬ್ಬರಿ 275 ಕೋಟಿ ರೂಪಾಯಿ ಸೇಲ್ ಆಗಿದೆ ಎನ್ನುವ ಮಾಹಿತಿ ಸಿಗುತ್ತಿದೆ. ಈ ಹಣ ಸಿನಿಮಾ ರಿಲೀಸ್ ಆದ ನಂತರ ಮತ್ತಷ್ಟು ಏರಿಕೆಯೂ ಆಗಲಿದೆಯಂತೆ. ಇಷ್ಟೊಂದು ಮೊತ್ತದ ಹಣವನ್ನು ಕೊಟ್ಟು ಇದೇ ಮೊದಲ ಬಾರಿಗೆ ಡಿಜಿಟೆಲ್ ಹಕ್ಕುಗಳನ್ನು ಖರೀದಿಸಲಾಗಿದೆಯಂತೆ.
Advertisement
ಅಲ್ಲು ಅರ್ಜುನ್ (Allu Arjun) ನಟನೆಯ ಪುಷ್ಪ 2 (Pushpa 2) ಸಿನಿಮಾ ಇದೇ ಆಗಸ್ಟ್ 15ರಂದು ಬಿಡುಗಡೆ ಮಾಡುವುದಾಗಿ ಈಗಾಗಲೇ ಚಿತ್ರತಂಡ ಘೋಷಣೆ ಮಾಡಿದೆ. ಅದೇ ರೀತಿಯ ಬಾಲಿವುಡ್ ನ ಹೆಸರಾಂತ ನಟ ಅಜಯ್ ದೇವಗನ್ (Ajay Devgan) ನಟನೆಯ ಸಿಂಗಂ ಅಗೇನ್ ಚಿತ್ರ ಕೂಡ ಅದೇ ದಿನಾಂಕದಂದು ರಿಲೀಸ್ ಆಗಬೇಕಿತ್ತು. ಆದರೆ, ಸಿಂಗಂ (Singam Again) ಸೈಡ್ ಗೆ ಹೋಗಿದೆ ಎನ್ನುವ ಮಾಹಿತಿ ಹರಿದಾಡುತ್ತಿದೆ.
ಪುಷ್ಪ 2 ಸಿನಿಮಾ ಸಾಕಷ್ಟು ಸದ್ದು ಮಾಡುತ್ತಿದೆ. ಸಿನಿ ಪಂಡಿತರ ಲೆಕ್ಕಾಚಾರದಂತೆ ಸಾವಿರಾರು ಕೋಟಿ ರೂಪಾಯಿ ವ್ಯಾಪಾರ ಮಾಡುವ ಶಕ್ತಿ ಈ ಚಿತ್ರಕ್ಕಿದೆಯಂತೆ. ಅಲ್ಲದೇ, ದೊಡ್ಡ ಮಟ್ಟದಲ್ಲಿ ಮತ್ತು ಹಲವು ಭಾಷೆಗಳಲ್ಲಿ ಈ ಚಿತ್ರವನ್ನು ತೆರೆಗೆ ತರಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಹಾಗಾಗಿ ಸಿಂಗಂ ಅಗೇನ್ ಚಿತ್ರದ ರಿಲೀಸ್ ಅನ್ನು ಮುಂದೂಡಿಕೆ ಮಾಡುವ ಯೋಚನೆ ಮಾಡಲಾಗಿದೆಯಂತೆ.