ಕಣ್ಸನ್ನೆ ಮೂಲಕ ಜಗತ್ತನ್ನೇ ತನ್ನತ್ತ ಸೆಳೆದಿದ್ದ ಕೇರಳ ನಟಿ ಪ್ರಿಯಾ ವಾರಿಯಾರ್ (Priya Warrier) ಮತ್ತು ನಿರ್ದೇಶಕ ಒಮರ್ ಲುಲು ನಡುವೆ ಮುಸುಕಿನ ಗುದ್ದಾಟ ನಡೆದಿದೆ. 2019ರಲ್ಲಿ ರಿಲೀಸ್ ಆದ ‘ಒರು ಆಡಾರ್ ಲವ್’ ಸಿನಿಮಾದಲ್ಲಿ ಪ್ರಿಯಾ ವಾರಿಯರ್ ಕಣ್ಸನ್ನೆ ಮಾಡುವ ಮೂಲಕ ಸಖತ್ ಫೇಮಸ್ ಆಗಿದ್ದರು. ರಾತ್ರೋರಾತ್ರಿ ಅದೊಂದು ದೃಶ್ಯ ಆಕೆಗೆ ಸಾಕಷ್ಟು ಜನಪ್ರಿಯತೆಯನ್ನು ತಂದುಕೊಟ್ಟಿತ್ತು. ಈ ದೃಶ್ಯದ ಐಡ್ಯಾಗಾಗಿ ಇಬ್ಬರೂ ಕಿತ್ತಾಡುತ್ತಿದ್ದಾರೆ.
ಕಣ್ಸನ್ನೆ (Kansanne) ಮಾಡುವ ದೃಶ್ಯದ ಐಡಿಯಾವನ್ನು ಕೊಟ್ಟಿದ್ದು ನಾನೇ ಎಂದು ಪ್ರಿಯಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಆದರೆ, ಇದಕ್ಕೆ ನಿರ್ದೇಶಕ ಲುಲು (Omar Lulu) ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಈ ಐಡ್ಯಾ ಅವಳದ್ದಲ್ಲ ಸುಳ್ಳು ಹೇಳುತ್ತಿದ್ದಾಳೆ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ:ನಟ ಚಿರಂಜೀವಿ ಸರ್ಜಾ 3 ನೇ ವರ್ಷದ ಪುಣ್ಯತಿಥಿ
ಈ ಹಿಂದಿನ ಒಂದು ಸಂದರ್ಶನದಲ್ಲಿ ಇದೇ ಪ್ರಿಯಾ ವಾರಿಯರ್, ಕಣ್ಸನ್ನೆ ದೃಶ್ಯದ ಐಡ್ಯಾ ನೀಡಿದ್ದು ಆ ಸಿನಿಮಾದ ಹೀರೋ ರೋಷನ್ ಎಂದು ಹೇಳಿಕೆ ನೀಡಿದ್ದರು. ಆ ವಿಡಿಯೋವನ್ನು ಮತ್ತು ಈಗ ತಾನೇ ಎಂದು ಹೇಳಿಕೊಂಡಿರುವ ವಿಡಿಯೋವನ್ನು ಸೇರಿಸಿ, ಲುಲು ಕಾಮೆಂಟ್ ಮಾಡಿದ್ದಾರೆ. ಈ ಹುಡುಗಿಗೆ ಮರುವಿನ ಕಾಯಿಲೆ ಇರಬಹುದು. ಹಾಗಾಗಿ ತೈಲ ಕೊಡಿ, ತಲೆಗೆ ಹಚ್ಚಿಕೊಂಡರೆ ನೆನಪಾಗುವುದು ಎಂದು ಕಾಮೆಂಟ್ ಮಾಡಿದ್ದಾರೆ.
ಕಣ್ಸನ್ನೆ ಮೂಲಕ ಸಾಕಷ್ಟು ಅವಕಾಶಗಳನ್ನು ಪಡೆದಿದ್ದ ಪ್ರಿಯಾ ವಾರಿಯರ್, ಹೇಗೆಲ್ಲ ಸುಳ್ಳು ಹೇಳುತ್ತಾರೆ ಎನ್ನುವುದನ್ನು ವಿಡಿಯೋ ಮಾಡಿಯೇ ಕಾಮೆಂಟ್ ಮಾಡಿರುವ ಲುಲುಗೆ ನಟಿ ಮತ್ತೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಒಬ್ಬರಿಗೊಬ್ಬರು ಕಾಲು ಎಳೆದುಕೊಳ್ಳುವ ಮೂಲಕ ಉಚಿತ ಮನರಂಜನೆ ನೀಡುತ್ತಿದ್ದಾರೆ.