ಪದೇ ಪದೇ ಪ್ರಭಾಸ್ ವಿರುದ್ದ ಕಿಡಿಕಾರುತ್ತಿರುವ ‘ದಿ ಕಾಶ್ಮೀರ್ ಫೈಲ್ಸ್’ ನಿರ್ದೇಶಕ

Public TV
1 Min Read
prabhas

ದಿ ಕಾಶ್ಮೀರ್ ಫೈಲ್ಸ್ (The Kashmir Files) ಸಿನಿಮಾ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri) ಸುಖಾಸುಮ್ಮನೆ ಪ್ರಭಾಸ್ (Prabhas) ವಿರುದ್ಧ ಕುಟುಕುತ್ತಿದ್ದಾರೆ. ಸಲಾರ್ ಸಿನಿಮಾದ ಟೀಸರ್ ವೇಳೆ ‘ಪ್ರಭಾಸ್ ಒಬ್ಬ ನಟನೆ ಅಲ್ಲ’ ಎನ್ನುವ ಅರ್ಥದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಇದೀಗ ಮತ್ತೆ ಪ್ರಭಾಸ್ ವಿರುದ್ಧ ನಾಲಿಗೆ ಹರಿಬಿಟ್ಟಿದ್ದಾರೆ.

Prabhas 2

ಆದಿಪುರುಷ (Adipurusha) ವಿಚಾರವಾಗಿ ಮಾತನಾಡಿರುವ ವಿವೇಕ್ ಅಗ್ನಿಹೋತ್ರಿ, ‘ಮಹಾಭಾರತ, ರಾಮಾಯಣದಂತಹ ಕಥೆಗಳನ್ನು ಸಿನಿಮಾ ಮಾಡುವಾಗ ಅವುಗಳಿಗೆ ಸ್ಟಾರ್ ನಟರ ಅವಶ್ಯಕತೆ ಇರುವುದಿಲ್ಲ. ಅವರೇ ಜನರಿಗೆ ಸ್ಟಾರ್ ಆಗಬೇಕು. ನಟರು ರಾತ್ರಿಯೆಲ್ಲ ಕುಡಿದು ಬೆಳಗ್ಗೆ ದೇವರು ಆಗು ಅಂದರೆ ಅದು ಹೇಗೆ ಸಾಧ್ಯ?’ ಎಂದು ಪರೋಕ್ಷವಾಗಿ ಪ್ರಭಾಸ್ ಅವರನ್ನು ಟೀಕಿಸಿದ್ದಾರೆ. ಇದನ್ನೂ ಓದಿ:ಮದುವೆ ದಿನ ಹತ್ತಿರ ಬರುತ್ತಿದ್ದಂತೆ ಬಾಲಿಗೆ ಹಾರಿದ ಹರ್ಷಿಕಾ ಪೂಣಚ್ಚ

prabhas

ಪದೇ ಪದೇ ತಮ್ಮ ನೆಚ್ಚಿನ ನಟನ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಬರೆಯುತ್ತಿರುವ ವಿವೇಕ್ ಅಗ್ನಿಹೋತ್ರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಪ್ರಭಾಸ್ ಅಭಿಮಾನಿಗಳು. ವಿವೇಕ್ ಬಗ್ಗೆ ಸಾಕಷ್ಟು ಕೆಟ್ಟ ಕೆಟ್ಟ ಕಾಮೆಂಟ್ ಗಳನ್ನೂ ಬರೆದು ಹಾಕಿದ್ದಾರೆ. ಅಲ್ಲದೇ, ಎಂತಹ ಸಿನಿಮಾಗಳನ್ನು ವಿವೇಕ್ ಮಾಡಬೇಕು ಎನ್ನುವ ಸಲಹೆಯನ್ನೂ ಕೆಲವರು ಕೊಟ್ಟಿದ್ದಾರೆ.

 

ಪ್ರಭಾಸ್ ನಟನೆಯ ಆದಿಪುರುಷ ಸಿನಿಮಾಗೆ ನೂರೆಂಟು ವಿಘ್ನಗಳು ಎದುರಾದವು. ಆದರೂ, ಬಾಕ್ಸ್ ಆಫೀಸಿನಲ್ಲಿ ಗೆಲ್ಲುವಲ್ಲಿ ಆದಿಪುರುಷ ವಿಫಲನಾದ. ಇದೀಗ ಪ್ರಭಾಸ್ ನಟನೆಯ ಸಲಾರ್ (Salar) ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ಆ ಸಿನಿಮಾ ಬಗ್ಗೆ ನಿರೀಕ್ಷೆ ಇಮ್ಮಡಿಯಾಗಿದೆ.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article