-ಕಾರ್, ಜೀಪ್ ಪೂಜೆಗೆ 40 ರೂಪಾಯಿ
ಬೆಂಗಳೂರು: ಸರ್ಕಾರಿ ಬಸ್ ಆಯುಧ ಪೂಜೆಗಾಗಿ ಸಾರಿಗೆ ಇಲಾಖೆ ನೌಕರರಿಗೆ 100 ರೂಪಾಯಿ ನೀಡಿರುವುದು ಸುದ್ದಿಯಾಗಿದೆ.
Advertisement
ಸಾರಿಗೆ ಸಚಿವರೇನೋ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಹಬ್ಬ ಮಾಡುತ್ತಾರೆ. ಅವ್ರಿಗೇನು ಕಡಿಮೆ ಹೇಳಿ, ಸಾರಿಗೆ ಇಲಾಖೆ ನನಗೆ ಬೇಡ ಎನ್ನುತ್ತಿದ್ದ ಅವರು ಕೊನೆಗೆ ಅನಿವಾರ್ಯವಾಗಿ ಸಾರಿಗೆ ಸಚಿವರಾಗಿ ಮುಂದುವರೆಯುತ್ತಿದ್ದು, ಶ್ರೀರಾಮುಲು ಅವ್ರಿಗೆ ಸಾರಿಗೆ ನೌಕರರ ಕಷ್ಟವೇನು ಅನ್ನೋದು ತಿಳಿದಿಲ್ಲ. ಸಾರಿಗೆ ನೌಕರರ ಕಷ್ಟ ತಿಳಿದಿದ್ರೆ ಖಂಡಿತ ಹೀಗೆ ಬಸ್ ಪೂಜೆಗೆ ಅಂತಾ 100 ರೂ ನೀಡ್ತಿರಲಿಲ್ಲ. ಸಾರಿಗೆ ಇಲಾಖೆಯವರು ಆಯುಧ ಪೂಜೆ ಪ್ರಯುಕ್ತ ಬಸ್ ಪೂಜೆಗೆ 100 ರೂ ನೀಡಿದ್ದಾರೆ. ಇವತ್ತಿನ ದುಬಾರಿ ದುನಿಯಾದಲ್ಲಿ 100 ರೂಪಾಯಿಗೆ ಏನ್ ಬರುತ್ತೆ ಎಂದು ನೌಕರರು ಈ ಬಗ್ಗೆ ಇಲಾಖೆಯ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: ಇನ್ನೊಂದು ವಾರ ಶಾರೂಖ್ ಮಗನಿಗೆ ಜೈಲೇ ಗತಿ
Advertisement
Advertisement
100 ರೂಪಾಯಿಯಲ್ಲಿ ಹೂ, ಹಣ್ಣು, ಬಾಳೆಕಂದು, ಪೂಜಾ ಸಾಮಗ್ರಿಗಳನ್ನು ತಂದು ಪೂಜೆ ಮಾಡೋದಕ್ಕೆ ಆಗುತ್ತಾ? ಕೋಟ್ಯಂತರ ರೂಪಾಯಿ ಸಂಪಾದನೆಗೆ ಕಾರಣವಾಗಿರೋ ಬಸ್ ಗಳ ಪೂಜೆಗೆ ಹಣ ಕೊಡಲು ಸಾರಿಗೆ ಇಲಾಖೆ ಹೀಗೆ ಯಾಕೆ ಮಾಡುತ್ತಿದೆ ಎನ್ನುವುದು ಗೊತ್ತಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಸಾರಿಗೆ ಇಲಾಖೆ ಸಿಬ್ಬಂದಿ ಸಮಸ್ಯೆ ಆಲಿಸಿದ ಶ್ರೀರಾಮುಲು
Advertisement
100 ರೂಪಾಯಿ ಆಯುಧ ಪೂಜೆ ಮಾಡಬೇಕಾದ ದಾರುಣ ಪರಿಸ್ಥಿತಿ ಮಾತ್ರ ನಮ್ಮ ಸಾರಿಗೆ ನೌಕರರದ್ದು. ಅಷ್ಟೇ ಅಲ್ಲ ಸಾರಿಗೆ ಇಲಾಖೆಯಲ್ಲಿರುವ ಕಾರ್, ಜೀಪ್ ಪೂಜೆಗೂ ಸಾರಿಗೆ ಇಲಾಖೆ 40 ರೂಪಾಯಿ ನೀಡಿದೆ. 40 ರೂಪಾಯಿ ತಗೊಂಡು ಯಾವ ಮಾರ್ಕೆಟ್‍ಗೆ ಹೋಗಿ ಶಾಪಿಂಗ್ ಮಾಡಿ ಪೂಜೆ ಮಾಡಬೇಕೋ ಗೊತ್ತಿಲ್ಲ ಎನ್ನುತ್ತಿದ್ದಾರೆ ಸಾರಿಗೆ ನೌಕರರು.