– ಮಾರ್ಚ್ 16 ರಂದು ವಿಚಾರಣೆ
ನವದೆಹಲಿ: ಹೊಸ ಅಬಕಾರಿ ನೀತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರಿಗೆ ಮಾರ್ಚ್ 16 ರಂದು ಖುದ್ದು ಹಾಜರಾಗಲು ರೋಸ್ ಅವೆನ್ಯೂ ಕೋರ್ಟ್ (Rouse Avenue court) ಅನುಮತಿ ನೀಡಿದೆ. ಜಾರಿ ನಿರ್ದೇಶನಾಲಯ (Enforecement Directorate) ನೀಡಿದ ಐದು ಸಮನ್ಸ್‌ಗಳಿಗೆ ಹಾಜರಾಗದ ಹಿನ್ನಲೆ ಅಧಿಕಾರಿಗಳು ಕೋರ್ಟ್ ಮೊರೆ ಹೋಗಿದ್ದರು.
ಈ ಮೊದಲು ಇಂದು ವಿಚಾರಣೆಗೆ ಹಾಜರಾಗಲು ಕೋರ್ಟ್ ಸೂಚನೆ ನೀಡಿತ್ತು. ವಿಡಿಯೋ ಕಾನ್ಫೆರೆನ್ಸ್ ಮೂಲಕ ವಿಚಾರಣೆಯಲ್ಲಿ ಭಾಗಿಯಾದ ಅರವಿಂದ್ ಕೇಜ್ರಿವಾಲ್, ಇವತ್ತು ವಿಚಾರಣೆಗೆ ಹಾಜರಾಗಬೇಕು ಎಂದುಕೊಂಡಿದ್ದೆ ಆದರೆ ವಿಧಾನಸಭೆಯಲ್ಲಿ ಇಂದು ನಡೆಯಲಿರುವ ವಿಶ್ವಾಸ ನಿರ್ಣಯದ ಚರ್ಚೆಯಿಂದಾಗಿ ನ್ಯಾಯಾಲಯದ ಮುಂದೆ ನೇರವಾಗಿ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಅಲ್ಲದೇ ಬಜೆಟ್ ಅಧಿವೇಶನವೂ ನಡೆಯುತ್ತಿದೆ. ಇದು ಮಾರ್ಚ್ 1 ರವರೆಗೆ ನಡೆಯಲಿದೆ. ತದನಂತರ ಯಾವುದೇ ದಿನಾಂಕವನ್ನು ನೀಡಬಹುದು ಎಂದು ಅವರು ಕೋರ್ಟ್‍ಗೆ ಮನವಿ ಮಾಡಿಕೊಂಡರು. ಮನವಿ ಆಲಿಸಿದ ಕೋರ್ಟ್ ಕೇಜ್ರಿವಾಲ್ ಅವರ ಮುಂದೆ ದೈಹಿಕವಾಗಿ ಹಾಜರಾಗಲು ಮುಂದಿನ ದಿನಾಂಕವನ್ನು ಮಾರ್ಚ್ 16ರ ಬೆಳಿಗ್ಗೆ 10 ಗಂಟೆಗೆ ನಿಗದಿಪಡಿಸಿತು. ಇದನ್ನೂ ಓದಿ: ಸಿಎಂಗೆ ಗೌರವ ಕೊಡುವುದು ನಮ್ಮ ಜವಾಬ್ದಾರಿ- ಅನಂತ್ ಕುಮಾರ್ ಹೆಗಡೆಗೆ ಹೈಕೋರ್ಟ್ ತರಾಟೆ
ನ್ಯಾಯಾಲಯದ ಆದೇಶದ ನಂತರ ಮಾತನಾಡಿದ ಕೇಜ್ರಿವಾಲ್ ಅವರ ವಕೀಲ ರಮೇಶ್ ಗುಪ್ತಾ, ಮುಖ್ಯಮಂತ್ರಿಯವರು ರೋಸ್ ಅವೆನ್ಯೂ ನ್ಯಾಯಾಲಯದ ಮುಂದೆ ವೈಯಕ್ತಿಕ ಹಾಜರಾತಿಯಿಂದ ವಿನಾಯಿತಿಗಾಗಿ ಸಲ್ಲಿಸಿದ ಅರ್ಜಿಯನ್ನು ಸ್ವೀಕರಿಸಿದೆ. ಇಡಿಯನ್ನು ಪ್ರತಿನಿಧಿಸುವ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ ರಾಜು ಅವರು ಅರ್ಜಿಯನ್ನು ವಿರೋಧಿಸಿಲ್ಲ. ಮುಂದಿನ ವಿಚಾರಣೆಗೆ ನ್ಯಾಯಾಲಯಕ್ಕೆ ಕೇಜ್ರಿವಾಲ್ ಹಾಜರಾಗಿ ಜಾಮೀನು ಪಡೆಯಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಎನ್.ವಿ ಅಂಜಾರಿಯಾ ನೇಮಕ