ಮುಂಬೈ: 2 ದಿನಗಳಲ್ಲಿ ಸುಮಾರು 31 ಮಂದಿ ಸಾವನ್ನಪ್ಪಿದ ಜಿಲ್ಲಾಸ್ಪತ್ರೆಯ (Maharastra District Hospital) ಟಾಯ್ಲೆಟ್ ಕ್ಲೀನ್ ಮಾಡುವ ಮೂಲಕ ಮಹಾರಾಷ್ಟ್ರದ ಬಿಜೆಪಿ ಸಂಸದರೊಬ್ಬರು (BJP MP) ಸುದ್ದಿಯಾಗಿದ್ದಾರೆ.
ಹೇಮಂತ್ ಪಾಟೀಲ್ (Hemanth Patil) ಅವರು ಇಂದು ಮಹಾರಾಷ್ಟ್ರದ ನಾಂದೆಡ್ ಜಿಲ್ಲೆಯಲ್ಲಿರುವ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಈ ವೇಳೆ ಆಸ್ಪ್ರೆಯ ಆವರಣದಲ್ಲಿ ಬಿದ್ದಿದ್ದ ಕಸದ ರಾಶಿಯನ್ನು ಕಂಡು ವೈದ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬಳಿಕ ಶೌಚಾಲಯಗಳ ಪರಿಶೀಲನೆ ನಡೆಸಿದ್ದಾರೆ. ಆಗ ಅಲ್ಲಿನಕೊಳಕು ನೋಡಿ ಸಂಸದರು ಮತ್ತೆ ಗರಂ ಆಗಿದ್ದಾರೆ. ಅಲ್ಲದೆ ವೈದ್ಯಾಧಿಕಾರಿಗಳು ಕರೆದು ಪೊರಕೆಯಿಂದ ಅದನ್ನು ಸ್ವಚ್ಛಗೊಳಿಸುವಂತೆ ಸೂಚಿಸಿದ್ದಾರೆ.
Advertisement
Shiv Sena (Shinde faction) MP Hemant Patil makes Hospital Dean clean toilet after 24 people die in 24 hours.
MP is seen spraying water! pic.twitter.com/1FSv5K6onH
— Karthik Reddy (@bykarthikreddy) October 3, 2023
Advertisement
ಇದನ್ನು ಅಲ್ಲಿನ ಸಿಬ್ಬಂದಿ ವಿಡಿಯೋ ಮಾಡಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವೀಡಿಯೋದಲ್ಲಿ ಸಂಸದರು ಪೈಪ್ ಹಿಡಿದು ಬೀರು ಬಡುತ್ತಿದ್ದರೆ, ಆಸ್ಪತ್ರೆಯ ಡೀನ್ ಗಲೀಜಾಗಿದ್ದ ಟಾಯ್ಲೆಟ್ ತೊಳೆಯುತ್ತಿರುವುದನ್ನು ಕಾಣಬಹುದಾಗಿದೆ. ಇದನ್ನೂ ಓದಿ: ಬಾಲಕರಿಗೆ ಚಾಕ್ಲೇಟ್ ಆಸೆ ತೋರಿಸಿ ಅತ್ಯಾಚಾರ; ಹುಬ್ಬಳ್ಳಿಯಲ್ಲಿ ವಿಕೃತ ಸಲಿಂಗಕಾಮಿ ಬಂಧನ
Advertisement
Advertisement
ಸೆಪ್ಟೆಂಬರ್ 30 ರಿಂದ ಅಕ್ಟೋಬರ್ 2 ರ ನಡುವೆ ಸಂಭವಿಸಿದ ಸಾವುಗಳಿಗೆ ಆಸ್ಪತ್ರೆಯ ವೈದ್ಯರನ್ನೇ ಹೊಣೆಗಾರರನ್ನಾಗಿ ಮಾಡಿ, ಅವರೆಲ್ಲರ ವಿರುದ್ಧ ಕೊಲೆ ಪ್ರಕರಣ ದಾಖಲಿಸಬೇಕು ಎಂದು ಇದೇ ವೇಳೆ ಪಾಟೀಲ್ ಒತ್ತಾಯಿಸಿದರು. ಪಾಟೀಲ್ ಭೇಟಿ ವೇಳೆ ಆಡಳಿತ ಮತ್ತು ಪೊಲೀಸರೊಂದಿಗೆ ಆಸ್ಪತ್ರೆ ಆವರಣ ವೀಕ್ಷಣೆ ಮಾಡಿದರು. ಅಲ್ಲದೆ ಕೆಲವು ರೋಗಿಗಳೊಂದಿಗೆ ಸಂವಾದ ನಡೆಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಸಂಸದರು, ಡೀನ್‍ನ ಶೌಚಾಲಯದ ಬ್ಲಾಕ್‍ಗೆ ಭೇಟಿ ನೀಡಿದ್ದು, ತಿಂಗಳಿಂದ ಬಳಕೆಯಾಗದೆ ಉಳಿದಿರುವ ಸ್ನಾನಗೃಹಗಳು ಕೊಳಕಿನಿಂದ ತುಂಬಿರುವುದು ಕಂಡುಬಂದಿದೆ. ಇನ್ನು ಮಕ್ಕಳ ಬ್ಲಾಕ್‍ನಲ್ಲಿರುವ ಶೌಚಾಲಯಗಳಿಗೆ ಬೀಗ ಹಾಕಲಾಗಿದ್ದು, ಮಹಿಳೆಯರ ಬ್ಲಾಕ್‍ನಲ್ಲಿ ಮದ್ಯದ ಬಾಟಲಿಗಳು ತುಂಬಿದ್ದವು ಎಂದರು.
ಆಸ್ಪತ್ರೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಹಂದಿಗಳು ಸೇರಿದಂತೆ ಹಲವು ಪ್ರಾಣಿಗಳು ಓಡಾಡುತ್ತಿವೆ. ಸುತ್ತಲೂ ಸಾಕಷ್ಟು ಕೊಳಕು ಬಿದ್ದಿದ್ದು, ಯಾರೂ ಇತ್ತ ಗಮನ ಹರಿಸುತ್ತಿಲ್ಲ. ಹೀಗಾಗಿ ಆಸ್ಪತ್ರೆಯ ಡೀನ್ ಮತ್ತು ವಿಭಾಗದ ಮುಖ್ಯಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ (Eknath Shindhe) ಅವರಿಗೆ ಸಂಸದರು ಮನವಿ ಮಾಡಿದರು.
Web Stories