ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಭೀಕರವಾಗಿ ಹತ್ಯೆಯಾಗಿರುವುದು ವೈದ್ಯಕೀಯ ವರದಿಯಿಂದ ಸಾಬೀತಾಗಿದೆ. ದರ್ಶನ್ ವಿರುದ್ಧದ ಸಿಸಿಟಿವಿ ಸಾಕ್ಷ್ಯಗಳು, ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರಗಳ ಬಗ್ಗೆ ಮಾಹಿತಿಯೂ ಲಭ್ಯವಾಗಿದೆ. ಅಷ್ಟೇ ಅಲ್ಲ ದರ್ಶನ್ ಹಾಕಿದ್ದ ಬಟ್ಟೆ ವಾಶ್ ಮಾಡಿದ್ದು ಎಲ್ಲಿ? ಮತ್ತು ಯಾರು? ದರ್ಶನ್ ಹಾಕಿದ್ದ ಶೂಗಳು ಸಿಕ್ಕಿದ್ದು ಎಲ್ಲಿ? ಎಂಬ ಅಂಶಗಳು ರಿಮ್ಯಾಂಡ್ ಕಾಪಿಯಲ್ಲಿ ಬಹಿರಂಗವಾಗಿದೆ.
Advertisement
ಈ ನಡುವೆ ದರ್ಶನ್ `ಡಿ’ ಗ್ಯಾಂಗ್ ಕೊಲೆ ಪ್ರಕರಣದ 14ನೇ ಆರೋಪಿ ಪ್ರದೋಶ್ ಸ್ಫೋಟಕ ರಹಸ್ಯಗಳನ್ನ ಬಾಯ್ಬಿಟ್ಟಿದ್ದಾರೆ. ಆರೋಪಿ ನಟ ದರ್ಶನ್ ಹೆಸರು ಹೊರಬಾರದಂತೆ ಪ್ಲ್ಯಾನ್ ಮಾಡಿದ್ದು ಯಾರು? 30 ಲಕ್ಷ ರೂ. ಹಣದ ಅಮಿಷ ಕೊಟ್ಟಿದ್ದು ಯಾರು? ಎಂಬ ಇಂಚಿಂಚು ಮಾಹಿತಿಯನ್ನು ಬಾಯ್ಬಿಟ್ಟಿದ್ದಾರೆ. ಇದನ್ನೂ ಓದಿ: ಚನ್ನಪಟ್ಟಣದಲ್ಲಿ ಡಿಕೆಸು ಸ್ಪರ್ಧೆ ಫಿಕ್ಸಾ?- ಬುಧವಾರ ಇಡೀ ದಿನ ಚನ್ನಪಟ್ಟಣದಲ್ಲಿ ಡಿಕೆಶಿ ದೇಗುಲಗಳ ದರ್ಶನ
Advertisement
Advertisement
ಪ್ರದೋಶ್ ಹೇಳಿದ್ದೇನು?
ರೇಣುಕಾಸ್ವಾಮಿ ಪವಿತ್ರಾಗೌಡಗೆ ಅಶ್ಲೀಲ ಮೆಸೇಜ್ ಕಳುಹಿಸುತ್ತಿದ್ದ, ಅವನನ್ನು ಕರೆದುಕೊಂಡು ಬರುವಂತೆ ದರ್ಶನ್ ಸೂಚಿಸಿದ್ದರು. ಚಿತ್ರದುರ್ಗ ದರ್ಶನ್ ಅಭಿಮಾನಿ ಸಂಘದ ಜಿಲ್ಲಾಧ್ಯಕ್ಷನಿಗೆ ತಿಳಿಸಿದ್ದೆವು. ಬಳಿಕ ರಾಘವೇಂದ್ರ ಸಹಾಯದಿಂದ ಜಯಣ್ಣಗೆ ಸೇರಿದ್ದ ಶೆಡ್‌ಗೆ ರೇಣುಕಾಸ್ವಾಮಿಯನ್ನ ಕರೆತರಲಾಗಿತ್ತು. ಅಲ್ಲಿ ಪವಿತ್ರಾಗೌಡ, ದರ್ಶನ್ ಗ್ಯಾಂಗ್‌ನಿಂದ ಹಲ್ಲೆ ನಡೆದಿತ್ತು. ಹಗ್ಗ, ಲಾಠಿ, ಮರದ ಕೊಂಬೆಯಿಂದ ಹಲ್ಲೆ ನಡೆಸಲಾಗಿತ್ತು. ಕಾಲುಗಳಿಂದ ಮನಬಂದಂತೆ ತುಳಿದು ಹಲ್ಲೆ ಮಾಡಿದ್ದರು. ಹಲ್ಲೆಯಿಂದ ಅಸ್ವಸ್ಥಗೊಂಡು ರೇಣುಕಾಸ್ವಾಮಿ ಸ್ಥಳದಲ್ಲೇ ಸಾವನ್ನಪ್ಪಿದ್ದ ಎಂದು ಹೇಳಿಕೆ ನೀಡಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
Advertisement
ಘಟನೆ ನಂತರ ಯಾವುದೇ ಕಾರಣಕ್ಕೂ ದರ್ಶನ್ ಹೆಸರು ಹೊರಬಾರದಂತೆ ಪ್ಲಾನ್ ನಡೆದಿತ್ತು. ಅದಕ್ಕಾಗಿ ಎ-13 ಆರೋಪಿ ದೀಪಕ್ 30 ಲಕ್ಷದ ಹಣದ ಆಮಿಷ ಒಡ್ಡಿದ್ದರು. ಕಾರ್ತಿಕ್, ಕೇಶವಮೂರ್ತಿ, ನಿಖಿಲ್ ನಾಯಕ್‌ಗೆ ತಲಾ 5 ಲಕ್ಷ ರೂ. ನೀಡಲಾಗಿತ್ತು ಎಂದು ಪೊಲೀಸ್ ವಿಚಾರಣೆಯಲ್ಲಿ ಒಪ್ಪಿಕೊಂಡಿರುವುದಾಗಿ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಮೆಕ್ಕಾದಲ್ಲಿ ಮಿತಿಮೀರಿದ ತಾಪಮಾನ – 550ಕ್ಕೂ ಹೆಚ್ಚು ಹಜ್ ಯಾತ್ರಿಕರ ಸಾವು!
ತನಿಖೆ ಇನ್ನಷ್ಟು ತೀವ್ರ:
ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ತೀವ್ರಗೊಂಡಿದೆ. ಬೆಂಗಳೂರಿನ ಜಯಣ್ಣ ಶೆಡ್, ಮೈಸೂರಿನ ಹೋಟೆಲ್ ಮತ್ತು ಫಾರ್ಮ್‌ಹೌಸ್‌ನಲ್ಲಿ ಪೊಲೀಸರು ಮಹಜರು ನಡೆಸಿದ್ದಾರೆ. ಮೂರು ಬೈಕ್ ಸೀಜ್ ಮಾಡಿದ್ದಾರೆ. ಸರಿಯಾಗಿ ಊಟ ಮಾಡದ ಕಾರಣ ಅಸ್ವಸ್ಥರಾಗಿದ್ದ ನಟಿ ಪವಿತ್ರಾಗೌಡಗೆ ಮಲ್ಲತ್ತಹಳ್ಳಿ ಬಿಬಿಎಂಪಿ ಆಸ್ಪತ್ರೆಯಲ್ಲಿ ಪೊಲೀಸರು ಚಿಕಿತ್ಸೆ ಕೊಡಿಸಿದ್ದಾರೆ. ಇದನ್ನೂ ಓದಿ: ಸ್ವಿಸ್ ವಿಜ್ಞಾನಿಗಳಿಂದ ಬಯೋ ಕಂಪ್ಯೂಟರ್ ಸಂಶೋಧನೆ – ಏನಿದರ ವಿಶೇಷ?
ಇನ್ನು, ಕ್ರೈಂ ಸೀನ್‌ನಲ್ಲಿಯೇ ಇಲ್ಲದ ಕೇಶವಮೂರ್ತಿ, ನಿಖಿಲ್ ಮತ್ತು ಕಾರ್ತಿಕ್ 30 ಲಕ್ಷ ರೂ. ಆಸೆಗಾಗಿ ಕೊಲೆ ಆರೋಪ ಹೊತ್ತು ಪೊಲೀಸರ ಮುಂದೆ ಶರಣಾಗಿದ್ದ ವಿಚಾರವೂ ಬೆಳಕಿಗೆ ಬಂದಿದೆ. ಈ ಮಧ್ಯೆ, ಪ್ರಕರಣದಲ್ಲಿ ಯಾವುದೇ ಒತ್ತಡ ಇಲ್ಲ. ಪೊಲೀಸರು ಪರಿಣಾಮಕಾರಿಯಾಗಿ ಕೆಲಸ ಮಾಡ್ತಿದ್ದಾರೆ ಎಂದು ಪೊಲೀಸ್ ಕಮೀಷನರ್ ದಯಾನಂದ್ ಸ್ಪಷ್ಟಪಡಿಸಿದ್ದಾರೆ. ಅತ್ತ, ಚಿತ್ರದುರ್ಗದಲ್ಲಿ ಮೃತ ರೇಣುಕಾಸ್ವಾಮಿ ನಿವಾಸಕ್ಕೆ ಸಚಿವರಾದ ಪರಮೇಶ್ವರ್, ಡಿ ಸುಧಾಕರ್, ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.