ಮೈಸೂರು: ಇಲ್ಲಿನ ವಿವಾದಿತ ಬಸ್ ನಿಲ್ದಾಣದ ಮೇಲಿನ ಗುಂಬಜ್ ತೆರವಿಗೆ ಸಂಸದ ಪ್ರತಾಪ್ ಸಿಂಹ (Pratap Simha) ಕೊಟ್ಟ ಡೆಡ್ ಲೈನ್ ಮುಗಿದಿದೆ. ಸಂಸದರು ಕೊಟ್ಟ ಡೆಡ್ ಲೈನ್ ಮುಗಿದರೂ ಗುಂಬಜ್ ತೆರವಾಗಿಲ್ಲ. ಅಲ್ಲಿಗೆ ಇಂದು ಸಂಸದರು ಏನು ಮಾಡ್ತಾರೆ ಎಂಬುದೆ ಕೂತುಹಲ.
Advertisement
ಮೈಸೂರು-ಊಟಿ (Mysuru- Ooty) ಮುಖ್ಯ ರಸ್ತೆಯಲ್ಲಿ ನಿರ್ಮಾಣವಾಗಿರೋ ಬಸ್ ನಿಲ್ದಾಣದ ಮೇಲೆ ಗುಂಬಜ್ ಕಟ್ಟಲಾಗಿತ್ತು. ಈ ಬಗ್ಗೆ ಕೆಂಡಾಮಂಡಲಾರಾಗಿದ್ದ ಸಂಸದ ಪ್ರತಾಪ್ ಸಿಂಹ ನಾಲ್ಕು ದಿನಗಳ ಒಳಗೆ ಗುಂಬಜ್ ತೆರವು ಮಾಡದೆ ಇದ್ದರೆ ಮರು ದಿನ ನಾನೇ ಜೆಸಿಬಿ ತೆಗೆದುಕೊಂಡು ಹೋಗಿ ಒಡೆದು ಹಾಕ್ತಿನಿ ಎಂದಿದ್ರು. ನಿನ್ನೆಗೆ ಸಂಸದರು ಕೊಟ್ಟ ಡೆಡ್ ಲೈನ್ ಮುಗಿದಿದೆ. ಗುಂಬಜ್ ಇನ್ನೂ ಹಾಗೇ ಇದೆ. ಹೀಗಾಗಿ ಇವತ್ತು ಸಂಸದರು ತೆರವು ಕಾರ್ಯಕ್ಕೆ ಇಳಿಯುತ್ತಾರಾ ಎಂಬ ಕುತೂಹಲ ಮೂಡಿದೆ. ಇದನ್ನೂ ಓದಿ: ಗುಂಬಜ್ ಗುದ್ದಾಟಕ್ಕೆ ಟ್ವಿಸ್ಟ್ – ಬಸ್‌ನಿಲ್ದಾಣದ ಜಾಗ ನಮ್ಮದು, ತೆರವು ಮಾಡಿ ಎಂದ NHAI
Advertisement
Advertisement
ಮಸೀದಿ ರೂಪದಲ್ಲಿ ವಿನ್ಯಾಸ ಮಾಡಲಾಗಿದೆ ಅಂತಾ ಸಂಸದರು ಅಬ್ಬರಿಸಿದ ಕೂಡಲೇ ರಾತ್ರೋರಾತ್ರಿ ಗುಂಬಜ್ ಮೇಲೆ ಕಳಸ ಇಡಲಾಗಿತ್ತು. ನಂತರದ ರಾತ್ರಿಯಲ್ಲಿ ಗುಂಬಜ್‍ಗೆ ಕೆಂಪು ಬಣ್ಣ ಬಳಿಯಲಾಯಿತು. ಅಲ್ಲದೆ ಬಸ್ ನಿಲ್ದಾಣಕ್ಕೆ ರಾತ್ರೋರಾತ್ರಿ ಜೆಎಸ್ ಎಸ್ ಕಾಲೇಜ್ ಬಸ್ ನಿಲ್ದಾಣ ಅಂತ ನಾಮಫಲಕ ಹಾಕಿ ಒಂದು ಕಡೆ ಸುತ್ತೂರು ಆದಿ ಜಗದ್ಗುರುಗಳು ಮತ್ತು ಸುತ್ತೂರು ಶ್ರೀ ರಾಜೇಂದ್ರ ಸ್ವಾಮೀಜಿಗಳು ಮತ್ತೊಂದು ಕಡೆ ಪ್ರಧಾನಿ ಮೋದಿ ಹಾಗೂ ಸಿಎಂ ಬೊಮ್ಮಾಯಿ ಫೋಟೋ ಹಾಕಿ ಬಚಾವ್ ಆಗೋ ತಂತ್ರ ರೂಪಿಸಿದ್ದರು. ಈ ಪ್ರಕರಣಕ್ಕೆ ಮಂಗಳೂರಿನಲ್ಲಿ ಯು.ಟಿ.ಖಾದರ್ ಪ್ರತಿಕ್ರಿಯೆ ನೀಡಿ, ನಮ್ಮದು ಊರು ಮತ್ತು ಜನರ ಮನಸ್ಸು ಕಟ್ಟುವ ಕೆಲಸ, ಕೆಲವರದ್ದು ಜನರ ಮನಸ್ಸು ಮತ್ತು ಊರು ಒಡೆಯುವ ಕೆಲಸ ಅಂತ ಕಿಡಿಕಾರಿದರು. ಬಸ್ ನಿಲ್ದಾಣವನ್ನ ಬಸ್ ನಿಲ್ದಾಣ ಆಗಿ ಇರಲಿಕ್ಕೆ ಬಿಡಬೇಕು ಅಂತ ಧಾರವಾಡದಲ್ಲಿ ಚಕ್ರವರ್ತಿ ಸೂಲಿಬೆಲೆ ಸಲಹೆ ಕೊಟ್ಟರು.
Advertisement
ಈ ನಡುವೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೂ ಕೆಆರ್‍ಐಡಿಎಲ್‍ಗೆ ನೋಟಿಸ್ ನೀಡಿದ್ದು ಬಸ್ ನಿಲ್ದಾಣದ ಜಾಗವೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸೇರಿದ್ದು ಅನಧಿಕೃತವಾಗಿ ಬಸ್ ನಿಲ್ದಾಣ ನಿರ್ಮಿಸಲಾಗಿದೆ. ಈ ನಿಲ್ದಾಣವನ್ನು 7 ದಿನಗಳ ಒಳಗೆ ತೆರವು ಮಾಡುವಂತೆ ತಿಳಿಸಿದೆ. ಹೀಗಾಗಿ ಬಸ್ ನಿಲ್ದಾಣ ವಿವಾದ ಬೇರೆ ಹಂತಕ್ಕೆ ಹೋಗುವ ಲಕ್ಷಣ ಕಾಣುತ್ತಿದೆ.
ತಮ್ಮ ನಿಲುವಿನ ಬಗ್ಗೆ ಗುಟ್ಟು ಬಿಟ್ಟು ಕೊಡದ ಸಂಸದ ಪ್ರತಾಪ್ ಸಿಂಹ ಮುಂದೆ ಗುಂಬಜ್ ತೆರವಿಗೆ ಮುಂದಾಗುತ್ತಾರಾ? ಎನ್ನುವುದು ಕಾದು ನೋಡಬೇಕಿದೆ.