ಗುಜರಾತ್ ನ ಜನಪ್ರಿಯ ಗಾಯಕಿ, ನಟಿಯೂ ಆಗಿದ್ದ ವೈಶಾಲಿ ಬುಲ್ಸಾರ್ ಕಾಣೆಯಾಗಿದ್ದರು. ಎರಡು ದಿನಗಳ ಹಿಂದೆಯಷ್ಟೇ ನನ್ನ ಪತ್ನಿ ಕಾಣೆಯಾಗಿದ್ದಾಳೆ ಎಂದು ವೈಶಾಲಿ ಪತಿ ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ಪೊಲೀಸರು ವೈಶಾಲಿಗಾಗಿ ಹುಡುಕಾಟ ನಡೆಸಿದ್ದರು. ಕೊನೆಗೂ ವೈಶಾಲಿ ಹೆಣವಾಗಿ ದೊರೆತಿದ್ದಾರೆ. ಗುರಜಾರ್ ನ ಪರ್ಡಿ ತಾಲ್ಲೂಕಿನ ನಿರ್ಜನ ಪ್ರದೇಶವೊಂದರಲ್ಲಿ ನಿಂತಿದ್ದ ಅವರದ್ದೇ ಕಾರಿನಲ್ಲಿ ಅವರ ಮೃತದೇಹ ಸಿಕ್ಕಿದೆ.
Advertisement
ವೈಶಾಲಿಯ ಕಾರು ವಲ್ಸಾಡ್ ಜಿಲ್ಲೆಯ ಪರ್ಡಿ ತಾಲ್ಲೂಕಿನ ಪಾರ್ ನದಿ ತೀರದಲ್ಲಿನ ನಿರ್ಜನ ಪ್ರದೇಶದಲ್ಲಿ ಕಂಡಿದ್ದು, ಕಾರು ನೋಡಿದ್ದ ಸ್ಥಳಿಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗುತ್ತಿದೆ. ಪೊಲೀಸರು ಸ್ಥಳಕ್ಕೆ ಧಾವಿಸಿದಾಗ ಕಾರಿನ ಹಿಂಬದಿಯ ಸೀಟಿನಲ್ಲಿ ವೈಶಾಲಿಯ ಮೃತದೇಹ ದೊರೆತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಆರ್ಯವರ್ಧನ್ ಗುರೂಜಿಯವರಲ್ಲಿ ಅಪ್ಪನ ಪ್ರೀತಿ ಕಂಡೆ: ರೂಪೇಶ್ ಭಾವುಕ
Advertisement
Advertisement
ಪೊಲೀಸರ ಮಾಹಿತಿ ಪ್ರಕಾರ, ಗಾಯಕಿಯನ್ನು ಉಸಿರುಗಟ್ಟಿಸಿ ಕೊಂದಿರುವುದು ಮೇಲ್ನೋಟಕ್ಕೆ ಗೊತ್ತಾಗಿದ್ದು, ಆಕೆಯ ಮೈಮೇಲೆ ಯಾವುದೇ ಗಾಯಗಳಿಲ್ಲ ಎಂದಿದ್ದಾರೆ. ಅಲ್ಲದೇ, ಸಾಯುವ ಸಂದರ್ಭದಲ್ಲಿ ಯಾವುದೇ ಪ್ರತಿರೋಧ ತೋರಿಸಿದ ಕುರುಹುಗಳೂ ಕಾಣುತ್ತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
ಪತಿಯ ಹೇಳಿಕೆ ಪ್ರಕಾರ ವಲ್ಸಾಡ್ ನ ತಮ್ಮ ಮನೆಯಿಂದ ಹೊರಡುವಾಗ ಸ್ಥಳಿಯ ಅಯ್ಯಪ್ಪ ದೇವಸ್ಥಾನದ ಬಳಿ ಗೆಳೆಯರನ್ನು ಕಾಣಲು ಹೋಗುತ್ತಿರುವುದಾಗಿ ತಿಳಿಸಿದ್ದರಂತೆ ವೈಶಾಲಿ. ಆನಂತರ ಮನೆಗೆ ಬಾರದ ಹಿನ್ನೆಲೆಯಲ್ಲಿ ಪತಿ ದೂರು ದಾಖಲಿಸಿದ್ದರು. ಗಾಯಕಿಯಷ್ಟೇ ಅಲ್ಲ, ಸಂಗೀತ ಶಾಲೆಯನ್ನೂ ವೈಶಾಲಿ ನಡೆಸುತ್ತಿದ್ದು, ಅಪಾರ ಅಭಿಮಾನಿಗಳನ್ನು ಅವರು ಹೊಂದಿದ್ದರು.