ಹಲವಾರು ಚಿತ್ರಗಳಲ್ಲಿ ಪೋಷಕ ಕಲಾವಿದನಾಗಿ ಬೆಳ್ಳಿತೆರೆಯ ಮೇಲೆ ಕಾಣಿಸಿಕೊಂಡಿದ್ದ ಮೋಹನ್ (Mohan) ವಿಧಿವಶರಾಗಿದ್ದಾರೆ (Passed away). ಕಮಲ್ ಹಾಸನ್ (Kamal Haasan)ಸೇರಿದಂತೆ ಹಲವಾರು ನಟರ ಜೊತೆ ತೆರೆ ಹಂಚಿಕೊಂಡಿದ್ದ ಮೋಹನ್ ಅವರ ಮೃತದೇಹ ರಸ್ತೆ ಬದಿಯಲ್ಲಿ ಪತ್ತೆಯಾಗಿದೆ. ತಮಿಳಿನ ನಾಡಿನ ಮಧುರೈ (Madurai) ಜಿಲ್ಲೆಯ ತಿರುಪ್ಪಂಗುಂಡ್ರಂ ರಸ್ತೆಯಲ್ಲಿ ಅನಾಥ ಶವ ನೋಡಿದ್ದ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಸ್ಥಳಕ್ಕೆ ಆಗಮಿಸಿದ್ದ ಪೊಲೀಸರು ಶವವನ್ನು ಸರಕಾರಿ ಆಸ್ಪತ್ರೆಗೆ ರವಾನಿಸಿದ್ದರು. ಆಮೇಲೆ ಅದು ನಟ ಮೋಹನ್ ಅವರ ಮೃತದೇಹ ಎಂದು ಗೊತ್ತಾಗಿದೆ. ಅವರ ಕುಟುಂಬಸ್ಥರಿಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಮೋಹನ್ ಕುಟುಂಬಸ್ಥರು ಸೇಲಂ (Salem) ಜಿಲ್ಲೆಯ ಮೆಟ್ಟೂರಿನಲ್ಲಿ ವಾಸವಿದ್ದಾರೆ ಎಂದು ತಿಳಿದು ಬಂದಿದೆ.
ಮೋಹನ್ ಕೂಡ ಅದೇ ಗ್ರಾಮದಲ್ಲಿ ವಾಸವಿದ್ದರು. ಆದರೆ, ಮಧುರೈಗೆ ಹೋಗಿದ್ದು ಏಕೆ ಎನ್ನುವ ಅನುಮಾನ ಮೂಡಿದೆ. ಮೂಲಗಳ ಪ್ರಕಾರ ಆರ್ಥಿಕ ಸ್ಥಿತಿ ತೀರಾ ಹದಗೆಟ್ಟ ಕಾರಣದಿಂದಾಗಿ ಕೆಲಸ ಹುಡುಕಿಕೊಂಡು ಬಂದಿದ್ದರು ಎಂದು ಹೇಳಲಾಗುತ್ತಿದೆ. 60ರ ವಯಸ್ಸಿನ ಮೋಹನ್ ಅನಾರೋಗ್ಯದ ಕಾರಣದಿಂದ ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ. ತನಿಖೆ ನಡೆಯುತ್ತಿದೆ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]