ಚಿಕ್ಕಮಗಳೂರು: 22 ವರ್ಷದ ಬಳಿಕ ತಾಯಿ ಮಡಿಲನ್ನು ಮಗಳು ಸೇರಿದ ಹೃದಯ ಕಲಕುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಅಂಜಲಿ 22 ವರ್ಷಗಳ ಬಳಿಕ ತಾಯಿಯನ್ನು ಭೇಟಿಯಾದ ಮಗಳು. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಮುದ್ರೆಮನೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. 9 ವರ್ಷ ವಯಸ್ಸಿನಲ್ಲಿ ಅಂಜಲಿ ನಾಪತ್ತೆಯಾಗಿದ್ದರು. ನಂತರ ಅವರು ಕೇರಳದಲ್ಲಿ ಮನೆ ಕೆಲಸ ಮಾಡಿಕೊಂಡು ಜೀವನ ನಿರ್ವಹಿಸುತ್ತಿದ್ದರು. ಕೇರಳದ ನೆಲ್ಲಮಣಿಯಲ್ಲೇ ಸಾಜಿಯೊಂದಿಗೆ ಅಂಜಲಿ ವಿವಾಹವಾಗಿ ಜೀವನ ಸಾಗಿಸುತ್ತಿದ್ದರು.
Advertisement
Advertisement
ಈ ನಡುವೆ ಅಂಜಲಿಗೆ ತಾಯಿಯ ನೆನಪು ಬಹಳ ಕಾಡಿದೆ. ಇದರಿಂದಾಗಿ ಕಳೆದ 3 ವರ್ಷದಿಂದ ತಾಯಿಗಾಗಿ ಹುಡುಕಾಟ ನಡೆಸಿದ್ದಾರೆ. ಈ ಬಗ್ಗೆ ಮಂಗಳೂರಿನ ಫಿಶ್‍ಮೋಣು, ಮುಸ್ತಾಫರ ಬಳಿ ಅಂಜಲಿ ಹಾಗೂ ಪತಿ ಸಾಜಿ ಹೇಳಿಕೊಂಡಿದ್ದರು. ಮೂಡಿಗೆರೆ ಸುತ್ತಮುತ್ತ ಅಂಜಲಿ ತಾಯಿಗಾಗಿ ಹುಡಕಾಟ ನಡೆಸಿದ್ದಾರೆ. ಕೊನೆಗೂ ಮೂಡಿಗೆರೆಯ ಮುದ್ರೆ ಮನೆಯಲ್ಲಿ ಅಂಜಲಿ ತಾಯಿ ಪತ್ತೆಯಾಗಿದ್ದಾರೆ. ಅಂಜಲಿ ಹಾಗೂ ಆಕೆಯ ತಾಯಿ ಭೇಟಿಯಾಗುತ್ತಿದ್ದಂತೆ ತಬ್ಬಿ ಕಣ್ಣೀರಿಟ್ಟಿದ್ದಾರೆ. ಇದನ್ನೂ ಓದಿ: ಒಂದೇ ದಿನದಲ್ಲಿ 100 ವೈದ್ಯರಿಗೆ ಕೋವಿಡ್ ಪಾಸಿಟಿವ್!
Advertisement
Advertisement
ಅಂಜಲಿ ತಾಯಿಯನ್ನು ಹುಡುಕುತ್ತಾ ಮೂಡಗೆರೆಯ ಮುದ್ರೆ ಮನೆಗೆ ಹೋಗಿದ್ದಾರೆ. ಈ ವೇಳೆ ಅವರ ತಾಯಿ ಅಲ್ಲಿಯೇ ಕೆಲಸ ಮಾಡುತ್ತಿರುವ ವಿಷಯ ತಿಳಿದಿದೆ. ತಾಯಿ ಬರುತ್ತಿರುವುದನ್ನು ನೋಡಿದ ತಕ್ಷಣ ಅಂಜಲಿ ಓಡಿ ಹೋಗಿ ತಾಯಿಯನ್ನು ತಬ್ಬಿಕೊಂಡು ಕಣ್ಣಿರಿಟ್ಟು ಯೊಗ ಕ್ಷೇಮವನ್ನು ವಿಚಾರಿಸಿದ ವೀಡಿಯೋ ವೈರಲ್ ಆಗಿದೆ. ಇದನ್ನೂ ಓದಿ: ದೆಹಲಿಯಲ್ಲಿ ವೀಕೆಂಡ್ ಕರ್ಫ್ಯೂ – ಶನಿವಾರ, ಭಾನುವಾರ ಕಂಪ್ಲೀಟ್ ಬಂದ್