ಬೆಂಗಳೂರು: ಪ್ಯಾನ್ ಜೊತೆಗೆ ಆಧಾರ್ ಕಾರ್ಡ್ (AadhaarPanLink) ಜೋಡಣೆಗೆ ಜೂನ್ 30 ರ ವರೆಗೆ ಅವಧಿ ವಿಸ್ತರಿಸಿ ಹಣಕಾಸು ಸಚಿವಾಲಯ ಆದೇಶ ಹೊರಡಿಸಿದೆ.
ಪ್ಯಾನ್ (Pan Card) ಜೊತೆಗೆ ಆಧಾರ್ (Aadhaar Card) ಲಿಂಕ್‌ಗೆ ಮಾ.31 ಕೊನೆ ದಿನವಾಗಿತ್ತು. ಈ ಅವಧಿಯನ್ನು ವಿಸ್ತರಿಸಲಾಗಿದೆ. 2023ರ ಜೂನ್ 30 ರ ವರೆಗೆ ಅವಧಿ ವಿಸ್ತರಿಸಲಾಗಿದೆ ಎಂದು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ನನ್ನ ಕೊನೆ ಚುನಾವಣೆ ಹುಟ್ಟೂರಿನಲ್ಲಿ ಆಗಬೇಕೆಂಬ ಆಸೆ: ಸಿದ್ದರಾಮಯ್ಯ
Advertisement
In order to provide some more time to the taxpayers, the date for linking PAN & Aadhaar has been extended to 30th June, 2023, whereby persons can intimate their Aadhaar to the prescribed authority for PAN-Aadhaar linking without facing repercussions.
(1/2) pic.twitter.com/EE9VEamJKh
— Income Tax India (@IncomeTaxIndia) March 28, 2023
Advertisement
ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್ ಹೊಂದಿರುವುದನ್ನು ತಪ್ಪಿಸುವ ಉದ್ದೇಶದಿಂದ ಆಧಾರ್ ಜೊತೆಗೆ ಪ್ಯಾನ್ ಲಿಂಕ್ ಮಾಡಿಸಬೇಕು ಎಂದು ಆದೇಶ ಹೊರಡಿಸಲಾಗಿತ್ತು. ಲಿಂಕ್ ಮಾಡಿಸಲು ಮಾ.31 ಕೊನೆ ದಿನವಾಗಿತ್ತು. ಇದಕ್ಕೆ ಜನಾಕ್ರೋಶ ವ್ಯಕ್ತವಾದ ಬೆನ್ನಲ್ಲೆ ಗಡುವು ಮೂರು ತಿಂಗಳವರೆಗೆ ವಿಸ್ತರಣೆ ಮಾಡಲಾಗಿದೆ.
Advertisement
ಪ್ಯಾನ್ ಜೊತೆಗೆ ಆಧಾರ್ ಜೋಡಿಸುವ ವ್ಯವಸ್ಥೆಯನ್ನು 2017ರ ಏಪ್ರಿಲ್‌ನಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿತ್ತು. ಆಗ ಪ್ಯಾನ್-ಆಧಾರ್ ಜೋಡಣೆಗೆ ಸರ್ಕಾರ ಯಾವುದೇ ಶುಲ್ಕ ವಿಧಿಸಿರಲಿಲ್ಲ. ಆದರೆ ನಿರೀಕ್ಷಿತ ಮಟ್ಟದಲ್ಲಿ ಆಧಾರ್-ಪ್ಯಾನ್ ಲಿಂಕ್ ಕಾರ್ಯಗತವಾಗಲಿಲ್ಲ. ಹೀಗಾಗಿ ಲಿಂಕ್‌ಗೆ ಹಲವು ಬಾರಿ ದಿನಾಂಕ ವಿಸ್ತರಣೆ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು.
Advertisement
ಕೊನೆಯ ಹಂತ ಎಂದು ಹೇಳಿ 2023ರ ಮಾರ್ಚ್ 31ಕ್ಕೆ ಕೊನೆ ದಿನ ಎಂದು ಗಡುವು ವಿಧಿಸಿತ್ತು. ಪ್ಯಾನ್ ಅನ್ನು ಆಧಾರ್ ಜೊತೆಗೆ ಜೋಡಣೆಗೆ 1,000 ಶುಲ್ಕ ವಿಧಿಸಲಾಗಿತ್ತು. ಇದರ ವಿರುದ್ಧ ಸಾರ್ವಜನಿಕ ವಲಯದಲ್ಲಿ ಆಕ್ಷೇಪ ವ್ಯಕ್ತವಾಗಿತ್ತು. ಅಲ್ಲದೇ ದಿನಾಂಕ ವಿಸ್ತರಣೆಗೆ ಕೂಗು ಕೇಳಿಬಂದಿತ್ತು. ಇದನ್ನೂ ಓದಿ: ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ 5 ದಿನ ಪೊಲೀಸ್ ಕಸ್ಟಡಿಗೆ