ಮಂಗಳೂರು: ದೈವನರ್ತನದ ವೇಳೆಯೇ ದೈವ ನರ್ತಕ ಕುಸಿದು ಬಿದ್ದು ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ (Kadaba Taluku) ಎಡಮಂಗಲದಲ್ಲಿ ನಡೆದಿದೆ.
Advertisement
ಮೃತ ದುರ್ದೈವಿಯನ್ನು ಕಾಂತು (60) ಎಂದು ಗುರುತಿಸಲಾಗಿದೆ. ಈ ಘಟನೆ ಎಡಮಂಗಲ ಸಮೀಪದ ಇಡ್ಯಡ್ಕ (Idyadka) ಎಂಬಲ್ಲಿ ನಡೆದಿದೆ. ಶಿರಾಡಿ ದೈವದ ನರ್ತನಕ್ಕೆ ಮೊದಲು ಉಳ್ಳಾಕುಲು, ನಾಗಬ್ರಹ್ಮ ದೈವದ ನರ್ತನ ಸೇವೆ ನಡೆಯುತ್ತಿತ್ತು. ಬಳಿಕ ಶಿರಾಡಿ ದೈವ (Shiradi Daiva) ದ ಕೋಲ ನಡೆಯುತ್ತಿದ್ದ ಸಮಯದಲ್ಲಿ ಕಾಂತು ಏಕಾಏಕಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
Advertisement
Advertisement
ಸದ್ಯ ದೇವರ ಸೇವೆ ಮಾಡುತ್ತಿದ್ದ ಸಂದರ್ಭದಲ್ಲಿಯೇ ಈ ರೀತಿ ಸಾವು ಬಂದಿರುವುದು ನೆರೆದವರಲ್ಲಿ ಆತಂಕ ಸೃಷ್ಟಿಸಿದೆ. ಇದನ್ನೂ ಓದಿ: ಹೋಗಿ ಓದಿಕೋ ಎಂದು ಗದರಿದ ತಂದೆ – 9ರ ಬಾಲಕಿ ನೇಣಿಗೆ ಶರಣು