ಮದುವೆ ಸಂಭ್ರಮದ ಖುಷಿ ಹಂಚಿಕೊಂಡ ಡಾಲಿ ದಂಪತಿ

Public TV
2 Min Read
Daali Dhananjaya Dhanyatha Wedding 1

– ಅಭಿಮಾನಿಗಳ ಪ್ರೀತಿಗೆ ಬೆಲೆ ಕಟ್ಟೋಕೆ ಆಗಲ್ಲ ಎಂದ ಡಾಲಿ

ಮೈಸೂರು: ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ (Daali Dhananjaya) ಹಾಗೂ ಡಾಕ್ಟರ್ ಧನ್ಯತಾ (Dhanyatha) ವಿವಾಹ ಮೈಸೂರು ವಸ್ತುಪ್ರದರ್ಶನ ಮೈದಾನದಲ್ಲಿ ಅದ್ಧೂರಿಯಾಗಿ ನೆರವೇರಿದೆ. ವೈವಾಹಿಕ ಜೀವನಕ್ಕೆ ಕಾಲಿಟ್ಟ ದಂಪತಿ ಮದುವೆ ಸಂಭ್ರಮದ ಖುಷಿಯನ್ನು ಹಂಚಿಕೊಂಡಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಡಾಲಿ, ಅಭಿಮಾನಿಗಳ ಪ್ರೀತಿಗೆ ಬೆಲೆ ಕಟ್ಟಲು ಆಗಲ್ಲ. ಸಾವಿರಾರು ಜನರು ಬಂದು ಆಶೀರ್ವದಿಸಿದ್ದಾರೆ. ಮೈಸೂರು ಬಾಲ್ಯದ ಗೆಳೆಯರು, ನನ್ನ ಗುರುಗಳು ಬಂದಿದ್ದರು. ಮೈಸೂರಿನಲ್ಲಿ (Mysuru) ನನ್ನ ಮದುವೆ ಸಾರ್ಥಕ ಅನ್ನಿಸ್ತು ಎಂದರು. ಇದನ್ನೂ ಓದಿ: ರಾಜ್ಯ ಸರ್ಕಾರ ಹಣಕಾಸಿನ ನಿರ್ವಹಣೆಯಲ್ಲಿ ವಿಫಲವಾಗಿದೆ – ಬೊಮ್ಮಾಯಿ ವಾಗ್ದಾಳಿ

ಮೈಸೂರು ಅಂದರೆ ಎಲ್ಲರಿಗೂ ಎಮೋಷನ್ ಇದ್ದೇ ಇದೆ. ಮದುವೆ ಕಾರ್ಯಕ್ರಮ ತುಂಬಾ ಚೆನ್ನಾಗಿ ಆಯಿತು. ಚಿತ್ರರಂಗಕ್ಕೆ ಯಾವಾಗಲೂ ನಾನು ಆಭಾರಿ. ನಾನು ಚಿತ್ರರಂಗಕ್ಕೆ ಬಂದಾಗಿನಿಂದಲೂ ಎಲ್ಲರ ಸಪೋರ್ಟ್ ಇದೆ. ಈಗ ಜವಾಬ್ದಾರಿ ಜಾಸ್ತಿ ಆಗಿದೆ. ಎಲ್ಲರೂ ಖುಷಿ ಪಟ್ಟಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಪ್ಲಾಟ್‌ಫಾರ್ಮ್ ಮೆಟ್ಟಿಲಿನಿಂದ ಪ್ರಯಾಣಿಕ ಜಾರಿ ಬಿದ್ದಿದ್ದು ಕಾಲ್ತುಳಿತಕ್ಕೆ ಕಾರಣ: ರೈಲ್ವೆ ಅಧಿಕಾರಿ

ಎಲ್ಲರಿಗೂ ಧನ್ಯವಾದ. ಕಾರ್ಯಕ್ರಮ ಶಾಂತಿಯುತವಾಗಿ ಆಯಿತು. ಆರತಕ್ಷತೆಗೆ ಜನ ಬಂದಿದ್ದು ಖುಷಿ ಆಯಿತು. ನಾನು ಅಂದುಕೊಂಡಂತೆ ಆಗಿದೆ. ಎಲ್ಲರು ಖುಷಿ ಆಗಿದ್ದಾರೆ. ಅಭಿಮಾನಿಗಳ ಪ್ರೀತಿಗೆ ಏನು ಹೇಳಬೇಕು ಗೊತ್ತಿಲ್ಲ. ಅಭಿಮಾನಿಗಳು ತುಂಬಾ ಶಾಂತಿಯುತವಾಗಿ ನಡೆದುಕೊಂಡಿದ್ದಾರೆ. ನಾನು ಜೀವನ ಕಂಡುಕೊಂಡಿದ್ದು ಮೈಸೂರಲ್ಲಿ, ಇಲ್ಲೇ ಮದುವೆ ಆಗಿದ್ದು ಖುಷಿ ಆಯ್ತು. ತಾಳಿ ಕಟ್ಟುವಾಗ ನನಗೆ ಭಯ ಯಾವುದು ಆಗಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಓವರ್‌ಟೆಕ್ ಮಾಡಲು ಹೋಗಿ ಬೈಕ್‌ಗೆ ಸರ್ಕಾರಿ ಬಸ್ ಡಿಕ್ಕಿ – ಓರ್ವ ಸಾವು

ಇನ್ನು ಡಾಲಿ ಪತ್ನಿ ಧನ್ಯತಾ ಪ್ರತಿಕ್ರಿಯಿಸಿ, ಇಷ್ಟು ಜನರನ್ನ ನಾನು ನೋಡಿಲ್ಲ. ತುಂಬಾ ಭಾವುಕಳಾದೆ. ಡಾಲಿ ಕುಟುಂಬ ನನ್ನ ಕುಟುಂಬ. ನನ್ನ ಮನೆಗೆ ಹೋಗೋಕೆ ತುಂಬಾ ಖುಷಿ ಇದೆ. ನಾನು ಡಾಲಿ ಮನೆಗೆ ಹೋಗೋಕೆ ತುಂಬಾ ಕಾಯ್ತಾ ಇದ್ದೇನೆ. ಇಷ್ಟು ಪ್ರೀತಿ ಆಶೀರ್ವಾದ ನೋಡಿ ತುಂಬಾ ಖುಷಿ ಆಯಿತು ಎಂದು ಹರ್ಷ ವ್ಯಕ್ತಪಡಿಸಿದರು. ಇದನ್ನೂ ಓದಿ: ಹುಟ್ಟುಹಬ್ಬದ ದಿನವೇ ನಟ ದರ್ಶನ್ ಬ್ಯಾನರ್ ತೆರವು – ಫ್ಯಾನ್ಸ್‌ಗೆ ಶಾಕ್

Share This Article