ಬೆಂಗಳೂರು: ಕಪ್ ಈಗಲೂ ಅವರದ್ದೇ, ಮುಂದಕ್ಕೆ ನಮ್ಮದು ಎಂದು ಡಿ.ಕೆ ಸುರೇಶ್ (DK Suresh) ಹೇಳಿದ್ದಾರೆ.
ಕಪ್ (Cup) ನಮ್ದೆ ಎಂಬ ಸಚಿವ ಆರ್ ಅಶೋಕ್ (R Ashok) ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಡಿಕೆ ಸುರೇಶ್, ಈ ರೀತಿಯಾಗಿ ವ್ಯಂಗ್ಯವಾಡಿದ್ದಾರೆ. ಅಲ್ಲದೇ ಎಲ್ಲವನ್ನೂ ಸುರ್ಜೇವಾಲ ಹೇಳುತ್ತಾರೆ ಎಂದು ತಿಳಿಸಿದರು. ಇದನ್ನೂ ಓದಿ: ಕಾಂಗ್ರೆಸ್‌ನವರಿಗೆ ಬಹುಮತ ಬರಲ್ಲ, ಅದ್ಕೆ ಬೇರೆ ಪಕ್ಷದ ಜೊತೆ ಮಾತಾಡುವ ಪ್ರಯತ್ನ ಮಾಡ್ತಿದ್ದಾರೆ – ಸಿಎಂ
Advertisement
Advertisement
ಅಶೋಕ್ ಹೇಳಿದ್ದೇನು..?: ಗುರುವಾರ ಬೆಂಗಳೂರಿನಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದ ಸಚಿವ ಆರ್. ಅಶೋಕ್, ನಾವು ಮ್ಯಾಚ್ ಆಡೋದಕ್ಕೆ ಬಂದಿದ್ದೇವೆ, ಆಡಿ ಗೆಲ್ತೀವಿ. ಕಳೆದ ಬಾರಿ ಮೈತ್ರಿ ಸರ್ಕಾರ ಬಂತು. ನಂತರ ಅದು ಬಿದ್ದು ಹೋಯ್ತು. ಕಳೆದ 4 ವರ್ಷದಿಂದ ಸ್ಥಿರ ಸರ್ಕಾರ ಕೊಟ್ಟಿದ್ದು ಬಿಜೆಪಿ. ನಾವು ಯಾರ ಜೊತೆಗೂ ಹೊಂದಾಣಿಕೆ ಮಾಡಿಕೊಳ್ಳಲ್ಲ. ರಿಸಲ್ಟ್ ಬರಲಿ, ರಿಸಲ್ಟ್ ಬಂದ ಮೇಲೆ ಹೈಕಮಾಂಡ್ ನಾಯಕರ ಸೂಚನೆಯಂತೆ ನಡೆದುಕೊಳ್ತೇವೆ ಎಂದು ತಿಳಿಸಿದರು.
Advertisement
ಜೆಡಿಎಸ್ ಜೊತೆಗೆ ಹೊಂದಾಣಿಕೆಯ ಪ್ರಮೇಯ ಬರೋದೇ ಇಲ್ಲ. ರಿಸಲ್ಟ್ ಬಂದ ಮೇಲೆ ತಂತ್ರಗಾರಿಕೆ ಇದ್ದೇ ಇರುತ್ತದೆ. ನಮಗೆ ವಿಶ್ವಾಸ ಇದೆ. ನಾವೇ ಸರ್ಕಾರ ಮಾಡುತ್ತೇವೆ. ನಮ್ಮ ಕಾರ್ಯಕರ್ತರು, ಜನರ ಮೇಲೆ ನಂಬಿಕೆ ಇದೆ. ನಾವೇ ಸಿಂಗಲ್, ಲಾರ್ಜೆಸ್ಟ್ ಪಕ್ಷ ಆಗಿ ಗೆದ್ದು ಬಂದರೂ ಸರ್ಕಾರ ರಚಿಸುವ ನೈತಿಕತೆ ಬಿಜೆಪಿಗೆ ಇದೆ ಎಂದಿದ್ದರು.