ಕೋಲಾರ: ಕೊಳವೆ ಬಾವಿ ಒಂದರಲ್ಲಿ ನೀರು ಪರೀಕ್ಷೆ ವೇಳೆ 900 ಅಡಿ ಆಳದಲ್ಲಿ ದೇವರ ಕಿರೀಟ ಪತ್ತೆಯಾಗಿರುವ ಅಪರೂಪದ ಘಟನೆ ಕೋಲಾರದಲ್ಲಿ ಎರಡು ದಿನದ ಹಿಂದೆ ನಡೆದಿದೆ.
ಕೋಲಾರ ಜಿಲ್ಲೆ ಮಾಲೂರು ತಾಲೂಕು ತೊತಹಳ್ಳಿ ಗ್ರಾಮದ ಚಿಕ್ಕವೆಂಕಟರಮಣಪ್ಪ ಎಂಬವರ ಕೊಳವೆ ಬಾವಿಯಲ್ಲಿ ಈ ಪುರಾತನ ಕಿರೀಟ ಪತ್ತೆಯಾಗಿದೆ. ಒಂದು ವರ್ಷದಿಂದ ಕೆಟ್ಟು ಹೋಗಿದ್ದ ಕೊಳವೆ ಬಾವಿಯಲ್ಲಿ ನೀರಿಗಾಗಿ ಸ್ಕ್ಯಾನಿಂಗ್ ಅಳವಡಿಸಿ ಪರೀಕ್ಷೆ ಮಾಡುವ ವೇಳೆ ಈ ಕಿರೀಟ ಪತ್ತೆಯಾಗಿದೆ. ಸ್ಕ್ಯಾನರ್ ನಲ್ಲಿ ದೇವರ ಕಿರೀಟ ಕಂಡ ಸ್ಥಳೀಯರು ಆಶ್ಚರ್ಯ ಚಕಿತರಾಗಿದ್ದು, ಪುರಾತನ ಚಿನ್ನದ ಕಿರೀಟ ಪತ್ತೆಯಿಂದ ಸಾಕಷ್ಟು ಕುತೂಹಲ ಮೂಡಿದೆ.
Advertisement
ಒಂದು ವರ್ಷದಿಂದ ನೀರಿಲ್ಲದ ಕಾರಣ ಕೊಳವೆ ಬಾವಿ ಬಂದ್ ಮಾಡಲಾಗಿತ್ತು. ಇತ್ತೀಚೆಗೆ ಜೋರು ಮಳೆ ಬಂದ ಹಿನ್ನೆಲೆ ರೀ ಬೋರ್ ಮಾಡಲು ರೈತ ಚಿಕ್ಕವೆಂಕರಮಣಪ್ಪ ಸ್ಕ್ಯಾನ್ ಮಾಡಲು ಮುಂದಾದಾಗ ಕಿರೀಟ ಕಾಣಿಸಿದೆ. ಆದರೆ ಪತ್ತೆಯಾಗಿರುವ ಕಿರೀಟ ಚಿನ್ನದೋ ಅಥವಾ ನಕಲಿ ಎಂದು ತಿಳಿದು ಬಂದಿಲ್ಲ.