ಉಡುಪಿ: ಮದುವೆಯಾಗಿ ಹನಿಮೂನ್‍ಗೆ ಹೋಗದೆ ತಮ್ಮ ಊರಿನ ಸೋಮೇಶ್ವರ ಸಮುದ್ರ ತೀರವನ್ನು ಸ್ವಚ್ಛ ಮಾಡಿದ್ದ ಉಡುಪಿಯ ಜೋಡಿಗೆ ಈ ಬಾರಿ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗುವ ಅವಕಾಶ ಸಿಕ್ಕಿದೆ. ಬೈಂದೂರಿನ ಅನುದೀಪ್, ಮಿನೂಷಾ ದೆಹಲಿಗೆ ಹಾರಿದ್ದಾರೆ. ನಮ್ಮ ಪ್ರವಾಸಿ ತಾಣಗಳು ನಮ್ಮ ಸಂಪತ್ತು. ಕಡಲ ತೀರಗಳನ್ನು ಸುಂದರವಾಗಿ ಇಡೋಣ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಮನ್ ಕಿ ಬಾತ್ ನಲ್ಲಿ ಕರೆ ಕೊಟ್ಟಿದ್ದರು. ಅನುದೀಪ್ ಮಿನೂಷಾ ಜೋಡಿಯ ಕೆಲಸವನ್ನು ಉಲ್ಲೇಖ ಮಾಡಿದ್ದರು.
Advertisement
ಕೇಂದ್ರ ಸರ್ಕಾರದಿಂದ ಇಬ್ಬರಿಗೂ ಗಣರಾಜ್ಯೋತ್ಸವದ ಆಮಂತ್ರಣ (Republic Day Invitation) ಬಂದಿದೆ. ಉಡುಪಿ ಜಿಲ್ಲೆ ಜೋಡಿ ದೆಹಲಿ ತಲುಪಿದೆ. ನಾಳಿನ 75 ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದೆ. ಈ ಸಂತೋಷವನ್ನು ಇಬ್ಬರು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಸಿದ್ಧಾಂತಕ್ಕೆ ಬದ್ಧರಾದವರು ಬೇರೆ ಪಕ್ಷಕ್ಕೆ ಒಗ್ಗಲ್ಲ: ಶೆಟ್ಟರ್ ಬಿಜೆಪಿಗೆ ಮರಳಿದ್ದಕ್ಕೆ ಕೋಟ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯೆ
Advertisement
Advertisement
ಭಾರತ ಸರ್ಕಾರಕ್ಕೆ, ಪ್ರಧಾನಿ ನರೇಂದ್ರ ಮೋದಿಗೆ (Narendra Modi) ಈ ಜೋಡಿ ಧನ್ಯವಾದ ಹೇಳಿದ್ದಾರೆ. 2020ರಲ್ಲಿ ಮದುವೆಯಾಗಿದ್ದ ಅನುದೀಪ್ ಮತ್ತು ಮಿನುಷಾ ಹೊರಗಡೆ ಓಡಾಡುವ ಅವಕಾಶವನ್ನು ಕಳೆದುಕೊಂಡಿದ್ದರು ಕರೋನ ಕಾಲದ ನಿರ್ಬಂಧ ಇರುವುದರಿಂದ ಎಲ್ಲೂ ಸಂಚಾರ ಮಾಡುವ ಅವಕಾಶಗಳು ಇರಲಿಲ್ಲ. ಹಾಗೆ ಸೋಮೇಶ್ವರ ಬೈಂದೂರು ಸುತ್ತಮುತ್ತ ಸುಮಾರು 700 ಮೀಟರ್ ನಷ್ಟು ಕಡಲ ತಡೆಯನ್ನ ಕ್ಲೀನ್ ಮಾಡಿದ್ದಾರೆ. ಈ ಜೋಡಿಹ ಕೆಲಸಕ್ಕೆ ಸುತ್ತಮುತ್ತಲಿನ ಯುವಕ ಯುವತಿಯರು ಕೈಜೋಡಿಸಿದ್ದರು. ಸುಮಾರು 500 ಕೆಜಿಯಷ್ಟು ಕಸ ಸಂಗ್ರಹ ಮಾಡಿದ್ದರು.
Advertisement
ಪ್ರವಾಸಕ್ಕೆಂದು ಹೋಗುವ ಯಾರೂ ಪರಿಸರವನ್ನು ಕಲುಷಿತ ಮಾಡಬೇಡಿ. ತಿರುಗಾಟಕ್ಕೆ ಕೊಂಡು ಹೋದ ವಸ್ತುವನ್ನು ಎಲ್ಲೂ ಎಸೆಯಬೇಡಿ ಎಂದು ಈ ಜೋಡಿ ಕರೆ ನೀಡಿದೆ.