– ಲಕ್ಷ ಕಂಠ ಗಾಯನ; ಭಗವದ್ಗೀತೆ ಮುಂದಿನ ಪೀಳಿಗೆ ಪರಿಚಯಿಸೋ ಭಾಗ
– ಕೇಂದ್ರದ ಪ್ರತಿ ಯೋಜನೆ ಶ್ರೀಕೃಷ್ಣನ ಶ್ಲೋಕದ ಪ್ರೇರಣೆ ಎಂದ ಪ್ರಧಾನಿ
ಉಡುಪಿ: ಶ್ರೀರಾಮಮಂದಿರ ಆಂದೋಲನದಲ್ಲಿ ಉಡುಪಿ (Udupi) ಜನರ ಪಾತ್ರ ಇಡೀ ದೇಶಕ್ಕೆ ಗೊತ್ತಿದೆ. ದಿ. ಪೇಜಾವರ ಶ್ರೀಗಳನ್ನ ನಾವು ಸ್ಮರಿಸಲೇಬೇಕು. ಅಲ್ಲದೇ ರಾಮಮಂದಿರ ನಿರ್ಮಾಣ ಉಡುಪಿಗೆ ಮತ್ತೊಂದು ಕಾರಣಕ್ಕೆ ವಿಶೇಷವಾಗಿದೆ. ಹೊಸ ಮಂದಿರದಲ್ಲಿ ಮಧ್ವಾಚಾರ್ಯರ ಹೆಸರಿನ ಒಂದು ದ್ವಾರ ನಿರ್ಮಾಣ ಮಾಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ತಿಳಿಸಿದರು.
ಉಡುಪಿ ಲಕ್ಷ ಕಂಠ ಭಗವದ್ಗೀತಾ (Bhagavad Gita) ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಮಧ್ವಾಚಾರ್ಯರ ಈ ಭೂಮಿಗೆ ಬಂದಿರೋದು ನನ್ನ ಪರಮ ಸೌಭಾಗ್ಯ. ಗುರುಗಳು ಮತ್ತು ಯತಿಗಳ ಜೊತೆ ಇರೋದು ಅಸಂಖ್ಯಾ ಪುಣ್ಯ ಸಂಪಾದಿಸಿದಂತಾಗಿದೆ. ಈ ಕಾರ್ಯಕ್ರಮದಲ್ಲಿ 1 ಲಕ್ಷ ಜನರು ಏಕಕಾಲದಲ್ಲಿ ಗೀತೆ ಪಠಿಸಿದ್ದಾರೆ. ಇದನ್ನು ಸಾಧ್ಯವಾಗಿಸಿದ ಸುಗುಣೇಂದ್ರ ತೀರ್ಥ ಶ್ರೀಗಳ ಸಹಿತ ಉಡುಪಿಯ ಅಷ್ಟ ಮಠಗಳ ಶ್ರೀ ಗಳಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ನಮಿಸಿದರು. ಇದನ್ನೂ ಓದಿ: ಉಡುಪಿ | ಕನಕನ ಕಿಂಡಿಯಲ್ಲಿ ಶ್ರೀ ಕೃಷ್ಣನ ದರ್ಶನ ಪಡೆದು 4 ಸಂಕಲ್ಪಕ್ಕೆ ಕರೆ ಕೊಟ್ಟ ಮೋದಿ
ವೇದ, ಉಪನಿಷತ್ ಮುಂದಿನ ಪೀಳಿಗೆ ಪರಿಚಯಿಸಬೇಕು
ಮುಂದುವರಿದು.. ಈ ಅಭಿಯಾನ ಸನಾತನ ಪರಂಪರೆಯ ಒಂದು ಸಾಂಸ್ಕೃತಿಕ ಜನಾಂದೋಲನ. ಭಾರತದಲ್ಲಿ ವೇದ, ಉಪನಿಷತ್, ಶಾಸ್ತ್ರದ ಜ್ಞಾನವನ್ನ ಮುಂದಿನ ಪೀಳಿಗೆಗೆ ಪರಿಚಯಿಸಬೇಕಿದೆ. ಈ ಕಾರ್ಯಕ್ರಮ ಕೂಡ ಭಗವದ್ಗೀತೆಯನ್ನ ಮುಂದಿನ ಪೀಳಿಗೆ ಪರಿಚಯಿಸೋ ಭಾಗವಾಗಿದೆ ಎಂದು ಹೇಳಿದರು.
ಉಡುಪಿ ಜನರ ಪಾತ್ರ ದೇಶಕ್ಕೇ ಗೊತ್ತಿದೆ
ಮೂರು ದಿನಗಳ ಹಿಂದೆ ನಾನು ಅಯೋಧ್ಯೆಯಲ್ಲಿದ್ದೆ, ಅಲ್ಲಿ ಧರ್ಮ ಧ್ವಜದ ಸ್ಥಾಪನೆಯಾಗಿದೆ. ಶ್ರೀರಾಮಮಂದಿರ ಆಂದೋಲನದಲ್ಲಿ ಉಡುಪಿಯ ಜನರ ಪಾತ್ರ ಇಡೀ ದೇಶಕ್ಕೆ ಗೊತ್ತಿದೆ. ಸ್ವರ್ಗೀಯಾಗಿರುವ ದಿ. ಪೇಜಾವರ ಶ್ರೀಗಳನ್ನ ನಾವು ಸ್ಮರಿಸಲೇಬೇಕು. ಅಲ್ಲದೇ ರಾಮಮಂದಿರ ನಿರ್ಮಾಣ ಉಡುಪಿಗೆ ಮತ್ತೊಂದು ಕಾರಣಕ್ಕೆ ವಿಶೇಷವಾಗಿದೆ. ಹೊಸ ಮಂದಿರದಲ್ಲಿ ಮಧ್ವಾಚಾರ್ಯರ (Madhvacharya) ಹೆಸರಿನ ಒಂದು ದ್ವಾರ ನಿರ್ಮಾಣ ಮಾಡಲಾಗಿದೆ. ರಾಮ ಮಂದಿರ ಪರಿಷತ್‌ನ ಒಂದು ದ್ವಾರ ಮಧ್ವರ ಹೆಸರಿನಲ್ಲಿ ಆಗಿರೋದು ಉಡುಪಿಗೆ ಮತ್ತೊಂದು ಹೆಮ್ಮೆ. ಜಗದ್ಗುರು ಮಧ್ವಾಚಾರ್ಯರ ಪರಂಪರೆ ಹರಿದಾಸ ಪರಂಪರೆಗಳಲ್ಲಿ ಒಂದು. ಶ್ರೀಕೃಷ್ಣನ ಉಪದೇಶ ಎಲ್ಲಾ ಯುಗಗಳಿಗೆ ಅನ್ವಯವಾಗುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಕೃಷ್ಣ ಮಠದಲ್ಲಿ ಮೋದಿ – ಪ್ರಧಾನಿ ಪಠಿಸಿದ ಭಗವದ್ಗೀತೆ 15ನೇ ಅಧ್ಯಾಯದ ಸಾರ ಏನು?
ಅಷ್ಟ ಮಠಗಳ ಸ್ಥಾಪನೆ ಮಾಡಿ ಹೊಸ ಯುಗಕ್ಕೆ ದಾರಿ
ಸ್ವಚ್ಛತಾ ಅಭಿಯಾನ ನಾವು ಆರಂಭಿಸೋ ಮೊದಲೇ ಉಡುಪಿಯಲ್ಲಿ ಆರಂಭವಾಗಿತ್ತು. ಜಲಸಂರಕ್ಚಣೆ, ಒಳ ಚರಂಡಿ ವ್ಯವಸ್ಥೆ ಹಲವು ವರ್ಷಗಳ ಹಿಂದೆಯೇ ಉಡುಪಿಯಲ್ಲಿ ಆರಂಭಿಸಲಾಗಿದೆ. ಮಧ್ವಾಚಾರ್ಯರು ಅಷ್ಟ ಮಠಗಳ ಸ್ಥಾಪನೆ ಮಾಡಿ ಹೊಸ ಯುಗಕ್ಕೆ ದಾರಿ ಮಾಡಿ ಕೊಟ್ಟರು, ಹಲವು ಸಂಕಷ್ಟಗಳ ಮಧ್ಯೆ ಭಕ್ತಿ ಮಾರ್ಗ ತೋರಿಸಿಕೊಟ್ಟರು. ಇಲ್ಲಿ ಶ್ರೀಕೃಷ್ಣನ ಭಕ್ತಿಯ ಜೊತೆಗೆ ಅನ್ನದಾಸೋಹದ ಸೇವೆಯೂ ಇದೆ. ಹೀಗಾಗಿ ಇಲ್ಲಿನ ಅಷ್ಟ ಮಠಗಳು ನಿತ್ಯ ಲಕ್ಷಾಂತರ ಜನರಿಗೆ ಸೇವೆ ಸಲ್ಲಿಸುತ್ತಿದೆ ಎಂದು ಹಾಡಿಹೊಗಳಿದರು.
ಕೇಂದ್ರದ ಪ್ರತೀ ಯೋಜನೆ ಶ್ರೀಕೃಷ್ಣನ ಶ್ಲೋಕದ ಪ್ರೇರಣೆ
ಮಧ್ವಾಚಾರ್ಯರು ದಾಸ ಪರಂಪರೆಗೂ ಪ್ರೇರಣೆ ನೀಡಿದವರು. ಭಗವದ್ಗೀತೆಯ ಸಾರ ಏನೆಂದರೆ ಲೋಕ ಕಲ್ಯಾಣದ ಕೆಲಸ ಮಾಡಿ ಎನ್ನುವುದು, ಕೇಂದ್ರ ಸರ್ಕಾರದ ಪ್ರತೀ ಯೋಜನೆಯೂ ಶ್ರೀಕೃಷ್ಣನ ಶ್ಲೋಕದ ಪ್ರೇರಣೆ. ಕೃಷ್ಣ ಗೀತೆಯ ಸಂದೇಶ ಯುದ್ಧ ಭೂಮಿಯಲ್ಲಿ ಕೊಟ್ಟದ್ದು, ಅದು ಇಂದಿಗೂ ಪ್ರಸ್ತುತ ಎಂದು ಸ್ಮರಿಸಿದರು. ಇದನ್ನೂ ಓದಿ: ಉಡುಪಿ | ಕೃಷ್ಣನೂರಿನಲ್ಲಿ ʻನಮೋʼ ರೋಡ್ ಶೋ; ಪ್ರಧಾನಿಗೆ ಹೂ ಮಳೆಯ ಸ್ವಾಗತ


