ಫ್ಯಾಷನ್ ಶೋವೊಂದರಲ್ಲಿ ಭಾಗಿಯಾಗಲು ವಿಶೇಷ ಕಾಸ್ಟ್ಯೂಮ್ ಧರಿಸಿ ಬಂದಿದ್ದರು ಬಾಲಿವುಡ್ (Bollywood) ನಟ ಭೂಮಿ ಪೆಡ್ನೇಕರ್ (Bhumi Pednekar). ಅವರು ಧರಿಸಿದ್ದ ಕಾಸ್ಟ್ಯೂಮ್ (Costume) ಕಂಡು ಹಲವರು ಬೆರಗಾದರು. ಇದೆಂಥ ಕಾಸ್ಟ್ಯೂಮ್ ಎಂದು ಪ್ರಶ್ನೆ ಮಾಡಿದವರೇ ಹೆಚ್ಚು. ಜೊತೆಗೆ ಅಲ್ಲೊಂದು ಅವಾಂತರ ಕೂಡ ನಡೆದಿದೆ.
ಭೂಮಿ ಧರಿಸಿದ್ದ ಕಾಸ್ಟ್ಯೂಮ್ ನಲ್ಲಿ ಏನೋ ವ್ಯತ್ಯಾಸ ಕಂಡು ಕೂಡಲೇ ಅಲ್ಲಿದ್ದವರು ಗಮನಕ್ಕೆ ತಂದಿದ್ದಾರೆ. ಕೂಡಲೇ ಕ್ಯಾಮೆರಾ ಕಣ್ಣಿಂದ ತಪ್ಪಿಸಿಕೊಂಡು ಚೆಕಾರ್ಡ್ ಬೋರ್ಡ್ ಹಿಂದೆ ಹೋಗಿದ್ದಾರೆ. ಅಲ್ಲಿ ಕಾಸ್ಟ್ಯೂಮ್ ಸರಿ ಪಡಿಸಿಕೊಂಡಿದ್ದಾರೆ. ಆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಟಾಯ್ಲೆಟ್ ಏಕ್ ಪ್ರೇಮ್ ಕಥಾ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ನಟಿಸಿರುವ ಭೂಮಿ, ಆಯಾ ಸಿನಿಮಾಗಳ ಪಾತ್ರದ ಮೂಲಕ ಫೇಮಸ್ ಆದವರು. ಜೊತೆಗೆ ಫ್ಯಾಷನ್ ಶೋಗಳು ಹಾಗೂ ಫಿಟ್ ನೆಸ್ ಬಗ್ಗೆ ಸಾಕಷ್ಟು ಒಲವು ಬೆಳೆಸಿಕೊಂಡವರು. ಇದೀಗ ಅವಕಾಶ ಕಡಿಮೆ ಆದ ಕಾರಣದಿಂದಾಗಿ ವಿಚಿತ್ರ ಡ್ರೆಸ್ ಗಳನ್ನು ಹಾಕಿಕೊಂಡು ಗಮನ ಸೆಳೆಯುತ್ತಾರೆ ಎನ್ನುವ ಆರೋಪವೂ ಈ ನಟಿಯ ಮೇಲಿದೆ.