ಬೆಂಗಳೂರು: ರಾಜ್ಯದಲ್ಲಿ 40% ಕಮೀಷನ್ ಸಮರ ಜೋರಾಗಿ ನಡೆಯುವಾಗಲೇ ಈಗ ಮತ್ತೊಂದು ಗುತ್ತಿಗೆದಾರರ ಸಂಘ ಸಿಎಂ ಬೊಮ್ಮಾಯಿ ಕಾಮಗಾರಿಗಳ ಬಿಲ್ ಬಿಡುಗಡೆ ಮಾಡುವಂತೆ ಪತ್ರ ಬರೆದು ಒತ್ತಾಯ ಮಾಡಿದೆ.
ಸಮಾಜ ಕಲ್ಯಾಣ ಇಲಾಖೆ ಅಡಿ ಬರುವ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಗುತ್ತಿಗೆದಾರರ ಸಂಘ ಸಿಎಂಗೆ ಪತ್ರ ಬರೆದು ಬಾಕಿ ಹಣ ಬಿಡುಗಡೆ ಮಾಡುವಂತೆ ಒತ್ತಾಯ ಮಾಡಿದೆ. ಕಳೆದ ಒಂದು ವರ್ಷದಿಂದ ಮಾಡಿರುವ ಕೆಲಸದ ಬಾಕಿ 1,200 ಕೋಟಿ ಬಿಲ್ ಬಾಕಿ ಇದೆ. ನಾವು ಹಣ ಹಾಕಿ ಅನೇಕ ಕಟ್ಟಡಗಳನ್ನು ಕಟ್ಟಿದ್ದೇವೆ. ಹೀಗಿದ್ದರೂ ಸರ್ಕಾರ ಮತ್ತು ಇಲಾಖೆ ಬಿಲ್ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದೆ.
Advertisement
Advertisement
ಗುತ್ತಿಗೆದಾರರು ಬಾಕಿ ಹಣ ಸಿಗದೆ ಆತ್ಮಹತ್ಯೆ ದಾರಿ ಹಿಡಿಯುವ ಸ್ಥಿತಿಗೆ ತಲುಪಿದ್ದಾರೆ. ಕೂಡಲೇ ಬಿಲ್ ಬಿಡುಗಡೆ ಮಾಡಿವಂತೆ ಸಿಎಂ ಬೊಮ್ಮಾಯಿಗೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಗುತ್ತಿಗೆದಾರರ ಸಂಘ ಒತ್ತಾಯ ಮಾಡಿದ್ದು, ಬಾಕಿ ಬಿಲ್ ಬಿಡುಗಡೆ ಮಾಡದೇ ಹೋದರೆ ಅನಿರ್ದಿಷ್ಟಾವಧಿ ಧರಣಿ ನಡೆಸುವುದಾಗಿ ಎಚ್ಚರಿಕೆಯನ್ನು ಗುತ್ತಿಗೆದಾರರು ಸಂಘ ನೀಡಿದೆ.
Advertisement
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸಂಘದ ಅಧ್ಯಕ್ಷ ಶಂಕರ್ ಗೌಡ ಹೊಸಮನಿ, ಕಳೆದ ಒಂದು ವರ್ಷಗಳಿಂದ ಮಾಡಿರುವ ಕೆಲಸದ ಬಿಲ್ ಬಾಕಿ ಇದೆ. ಈ ಹಿಂದೆ ಯಾವತ್ತು ಇಂತಹ ಸಮಸ್ಯೆ ಆಗಿಲ್ಲ. ಕಳೆದ ಒಂದು ವರ್ಷದಿಂದ ಈ ಸಮಸ್ಯೆ ಆಗಿದೆ. ಒಟ್ಟಾರೆ ಸುಮಾರು 1,500 ಕೋಟಿ ಬಿಲ್ ಬಾಕಿ ಬರಬೇಕಿದೆ ಎಂದು ಮಾಹಿತಿ ನೀಡಿದರು.
Advertisement
ಗುತ್ತಿಗೆದಾರರು ಸಂಕಷ್ಟದಲ್ಲಿ ಇದ್ದಾರೆ. ಹಣ ಬಿಡುಗಡೆ ಮಾಡದೇ ಹೋದರೆ ಆತ್ಮಹತ್ಯೆ ದಾರಿ ಹಿಡಿಯುವ ಸ್ಥಿತಿ ಬರಲಿದೆ. ಹೀಗಾಗಿ ಕೂಡಲೇ ಹಣ ಬಿಡುಗಡೆ ಮಾಡಿ ಎಂದು ಒತ್ತಾಯ ಮಾಡಿದ್ದಾರೆ. ಇಲಾಖೆ ಅನುದಾನದ ಕೊರತೆ ಇದೆ ಎಂದು ಹೇಳುತ್ತಿದೆ. ಆದರೆ ಯಾರು ಕೂಡಾ ಬಾಕಿ ಬಿಲ್‍ಗೆ ಬಿಡುಗಡೆಗೆ ಹಣದ ಬೇಡಿಕೆ ಇಟ್ಟಿಲ್ಲ. ಪರ್ಸೆಂಟೇಜ್ ಬೇಡಿಕೆ ಯಾರು ನಮಗೆ ಇಟ್ಟಿಲ್ಲ. ಇಲಾಖೆ ಸಚಿವರು, ಅಧಿಕಾರಿಗಳು ನಮ್ಮ ಪರವಾಗಿಯೇ ಇದ್ದಾರೆ. ಆದರೆ ಅನುದಾನ ಕೊರತೆ ಅಂತ ಹಣ ಬಿಡುಗಡೆ ಮಾಡಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ನಾಟಿ ಮಾಡಿದ್ದ ಭತ್ತದ ಗದ್ದೆಯಲ್ಲಿ ಓಡಾಡಿ ಕಾಡಾನೆಗಳ ದಾಂಧಲೆ – ಬೆಳೆ ನಾಶ, ಕಂಗಾಲಾದ ರೈತರು
ಇನ್ನೊಂದು ವಾರದಲ್ಲಿ ಸಮಸ್ಯೆ ಪರಿಹಾರ ಮಾಡೋದಾಗಿ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಇನ್ನೊಂದು ವಾರ ನಾವು ಕಾದು ನೋಡುತ್ತೇವೆ. ಸಮಸ್ಯೆ ಪರಿಹಾರ ಮಾಡದೇ ಹೋದರೆ ಸಭೆ ಮಾಡಿ ಮುಂದಿನ ಹೋರಾಟದ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಬಹುಮತ ಸಾಬೀತಿಗೆ ಮುಂದಾದ ನಿತೀಶ್ ಕುಮಾರ್ – RJD ಪಕ್ಷದ ಇಬ್ಬರು ಹಿರಿಯ ನಾಯಕರ ಮನೆ ಮೇಲೆ CBI ದಾಳಿ