ಎರಡು ದಿನಗಳ ಹಿಂದೆಯಷ್ಟೇ ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್ ನಲ್ಲಿ ನಡೆದಿದೆ ಎನ್ನಲಾದ ಡ್ರಗ್ಸ್ ಪಾರ್ಟಿಯಲ್ಲಿ ಬಾಲಿವುಡ್ ನಟ ಶಕ್ತಿ ಕಪೂರ್ ಪುತ್ರ ಸಿದ್ಧಾಂತ ಕಪೂರ್ ಬಂಧನಕ್ಕೆ ಒಳಗಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಅವರಿಗೆ ಜಾಮೀನು ಸಿಕ್ಕರೂ ಅವರು ವಿಚಾರಣೆ ಎದುರಿಸುತ್ತಿದ್ದಾರೆ. ಈ ಕುರಿತು ಸಿದ್ಧಾಂತ ತಂದೆ ಶಕ್ತಿ ಕಪೂರ್ ಪ್ರಕರಣದ ಕುರಿತು ಮಾತನಾಡಿದ್ದಾರೆ.
Advertisement
ನನ್ನ ಮಗ ಡ್ರಗ್ಸ್ ತಗೆದುಕೊಳ್ಳುವುದಿಲ್ಲ. ನಮ್ಮದು ಸಂಪ್ರದಾಯಸ್ಥ ಕುಟುಂಬ. ಅವನು ಡಾನ್ಸ್ ಡಿಜೆ ಆಗಿರುವುದರಿಂದ ಇಂತಹ ಪಾರ್ಟಿಗಳಲ್ಲಿ ಭಾಗಿ ಆಗುತ್ತಾನೆ. ಆದರೆ, ಅವನು ಯಾವತ್ತೂ ಡ್ರಗ್ಸ್ ಸೇವಿಸುವುದಿಲ್ಲ. ಅವನ ಬಂಧನ ಮತ್ತು ವಿಚಾರಣೆ ಎಲ್ಲವೂ ಪಿತೂರಿಯ ಭಾಗ. ನನ್ನ ಮಕ್ಕಳನ್ನು ನಾನು ಆ ರೀತಿಯಲ್ಲಿ ಬೆಳೆಸಿಲ್ಲ ಎಂದಿದ್ದಾರೆ ಶಕ್ತಿ ಕಪೂರ್. ಅಲ್ಲದೇ, ಅವನು ಈ ಪ್ರಕರಣದಲ್ಲಿ ಆತಂಕ ಪಡುವುದು ಬೇಡ. ನಿರಪರಾಧಿಯಾಗಿ ಅವನು ಆಚೆ ಬರುತ್ತಾನೆ ಎಂದು ನುಡಿದಿದ್ದಾರೆ ಕಪೂರ್. ಇದನ್ನೂ ಓದಿ:ರಾಜಮೌಳಿ ಮುಂದಿನ ಚಿತ್ರಕ್ಕೆ ಐಶ್ವರ್ಯ ರೈ ನಾಯಕಿ?
Advertisement
Advertisement
ಸಿದ್ಧಾಂತ ಕಪೂರ್ ಡ್ರಗ್ಸ್ ಕೇಸ್ ನಲ್ಲಿ ವಿಚಾರಣೆಗೆ ಒಳಗಾಗುತ್ತಿರುವುದು ಇದೆ ಮೊದಲೇನೂ ಅಲ್ಲ. 2008ರಲ್ಲಿ ಮುಂಬೈನಲ್ಲಿ ನಡೆದ ರೇವ್ ಪಾರ್ಟಿಯಲ್ಲಿ 240 ಜನರನ್ನು ವಶಕ್ಕೆ ಪಡೆದು, ವಿಚಾರಣೆಗೆ ಒಳಪಡಿಸಲಾಗಿತ್ತು. ಈ ವೇಳೆಯಲ್ಲಿ ಸಿದ್ಧಾಂತ ಕೂಡ ಇದ್ದರು. ಕೆಲ ಪೆಡ್ಲರ್ ಗಳನ್ನು ಬಂಧಿಸಿ, ಲಕ್ಷಾಂತರ ರೂಪಾಯಿ ಡ್ರಗ್ಸ್ ಅಂದು ವಶಪಡಿಸಿಕೊಳ್ಳಲಾಗಿತ್ತು. ಅಲ್ಲದೇ, ಕಪೂರ್ ಪುತ್ರಿಯನ್ನು ಸಹ ಇಂಥದ್ದೇ ಕೇಸ್ ನಲ್ಲಿ ವಿಚಾರಣೆ ಮಾಡಲಾಗಿದೆ.