ChikkaballapurDistrictsKarnatakaLatestMain Post

ಕೋಮು ಗಲಭೆಗೆ ಕಾಂಗ್ರೆಸ್, ಬಿಜೆಪಿನೇ ನೇರ ಕಾರಣ: ಹೆಚ್.ಡಿ. ದೇವೇಗೌಡ

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಕೋಮು ಗಲಭೆಗೆ ಕಾಂಗ್ರೆಸ್ ಹಾಗೂ ಬಿಜೆಪಿ ನೇರ ಕಾರಣ ಎಂದು ಮಾಜಿ ಪ್ರಧಾನ ಮಂತ್ರಿ ಹೆಚ್.ಡಿ. ದೇವೇಗೌಡ ಹೇಳಿದರು.

ಚಿಕ್ಕಬಳ್ಳಾಪುರ ತಾಲೂಕು ಪೆರೇಸಂದ್ರ ಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಸಿಎಂ ಆಗಿದ್ದಾಗ ಒಂದೇ ಒಂದು ಕೋಮುಗಲಭೆ ಆಗಿರಲಿಲ್ಲ. ಕಾಂಗ್ರೆಸ್ ಹಾಗೂ ಬಿಜೆಪಿ ಅವರು ದೊಡ್ಡವರು, ಇಬ್ಬರದ್ದು ದೊಡ್ಡ, ದೊಡ್ಡ ಪಕ್ಷಗಳು, ಜನ ಮೆಚ್ಚಿಕೊಂಡು ಅವರಿಗೆ ವೋಟು ಕೊಡುತ್ತಾರೋ, ಇವರಿಗೆ ಕೊಡುತ್ತಾರೋ ನಂಗೆ ಗೊತ್ತಿಲ್ಲ. ಆದರೆ ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಮಠಕ್ಕೆ ಅನುದಾನ ಬೇಕಿದ್ರೆ ಶೇ.30 ಕಮಿಷನ್ ಕೊಡಿ ಅಂತಾರೆ ಅಧಿಕಾರಿಗಳು: ದಿಂಗಾಲೇಶ್ವರ ಸ್ವಾಮೀಜಿ

ಗಲಭೆಗೆ ಬಿಜೆಪಿ ಕಾರಣ ಆದರೆ ಬಿಜೆಪಿ ಮೇಲೆ, ಕಾಂಗ್ರೆಸ್ ಕಾರಣ ಆದರೆ ಕಾಂಗ್ರೆಸ್ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಕೇಂದ್ರ ಸರ್ಕಾರ ಯಾಕೆ ಮುಗ್ಧರಾಗಿ ನೋಡುತ್ತಿದೆ. ಇದು ಇದ್ದರೇನೆ ಅವರಿಗೆ ವೋಟು ಬರುವುದು ಅಂತ ಸುಮ್ಮನಿದ್ದಾರೆ. ಅವರು ಆಳಿರುವುದನ್ನು ನಾನು ನೋಡಿದ್ದೇನೆ. ಕಾಂಗ್ರೆಸ್ ಪಕ್ಷದ ಬಗ್ಗೆಯೂ ನನಗೆ ಗೊತ್ತಿದೆ. ಇದರ ಬಗ್ಗೆ ಯಾರಾದರೂ ಮಾತನಾಡುತ್ತಿದ್ದೀರಾ? ಅವರ ಹೈಕಮಾಂಡ್ ಇದ್ಯಾ? ನಾನು ಸಿದ್ದರಾಮಯ್ಯ ಬಗ್ಗೆ ಮಾತನಾಡಲು ಆಗುತ್ತಾ? ನನ್ನ ಮಾತು ಸಿದ್ದರಾಮಯ್ಯ ಕೇಳುತ್ತಾರಾ ಎಂದರು. ಇದನ್ನೂ ಓದಿ: ಇಬ್ಬರು, ಮೂವರು ಸಚಿವರನ್ನು ಬಿಟ್ಟು ಎಲ್ರೂ 40% ಕಮಿಷನ್ ಪಡೆಯುತ್ತಿದ್ದಾರೆ: ಎಂ.ಬಿ ಪಾಟೀಲ್

Leave a Reply

Your email address will not be published.

Back to top button