ಬೆಂಗಳೂರು: ಹುತಾತ್ಮ ಅರಣ್ಯ ರಕ್ಷಕರ ಕುಟುಂಬಕ್ಕೆ ನೀಡುತ್ತಿದ್ದ ಪರಿಹಾರದ ಮೊತ್ತ 30 ಲಕ್ಷದಿಂದ 50 ಲಕ್ಷ ರೂ. ಗೆ ಏರಿಕೆ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಘೊಷಿಸಿದ್ದಾರೆ.
ಅರಣ್ಯ ಇಲಾಖೆ ಕಟ್ಟಡದಲ್ಲಿ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಹುತಾತ್ಮ ಅರಣ್ಯ ಇಲಾಖೆ ಸಿಬ್ಬಂದಿಗೆ ಗೌರವಾರ್ಪಣೆ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು, ದಿವಂಗತ ಅರಣ್ಯ ಸಚಿವ ಉಮೇಶ್ ಕತ್ತಿ (Umesh Katti) ಸ್ಮರಿಸಿಕೊಂಡರು.
Advertisement
ನಮ್ಮ ಅರಣ್ಯ ಇಲಾಖೆಯ ಸಿಬ್ಬಂದಿ ಗಳು, ಸಾರ್ವಜನಿಕರು ಮಾಡಿರುವ ಊಹಾತೀತ ಸಾಹಸ, ಮೆರೆದಿರುವ ಶೌರ್ಯ, ದಿಟ್ಟತನಗಳನ್ನು ಮತ್ತು ಕೆಲವೊಮ್ಮೆ ಮಾಡಿರುವ ಪ್ರಾಣ ತ್ಯಾಗವನ್ನು ಸ್ಮರಿಸುವುದು ನಮ್ಮ ಕರ್ತವ್ಯ.#ಅರಣ್ಯಹುತಾತ್ಮರದಿನ pic.twitter.com/cc6fHoiy5G
— Basavaraj S Bommai (@BSBommai) September 11, 2022
Advertisement
ಮನುಷ್ಯ ಪ್ರಾಣಿ ಸಂಘರ್ಷ ಕಮ್ಮಿ ಮಾಡಬೇಕಿದೆ. ಮನುಷ್ಯ ಕಾಡಲ್ಲಿ ಹೆಚ್ಚು ಇದ್ದಷ್ಟೂ ಪ್ರಾಣಿಗಳು ಹೊರಗೆ ಬರುತ್ತವೆ. ಅರಣ್ಯ ಇಲಾಖೆ ಈ ಸಂಘರ್ಷ ಕಮ್ಮಿ ಮಾಡುವತ್ತ ಗಮನ ಕೊಡಬೇಕು. ಆನೆ (Elephant) -ಮಾನವ ಸಂಘರ್ಷ ಹೆಚ್ಚಿದೆ. ಇದನ್ನು ತಡೆಯಲು ಹೊಸ ವಿಧಾನಗಳ ಅಳವಡಿಕೆ ಅಗತ್ಯ ಇದೆ. ಆನೆಗಳು ಜಮೀನಿಗೆ ಬಾರದಂತೆ ತಡೆಯಲು ಹೊಸ ವಿಧಾನಗಳ ಅಳವಡಿಕೆಗೆ ನೂರು ಕೋಟಿ ರೂ. ಬಿಡುಗಡೆ ಮಾಡಿದ್ದೇವೆ. ಈ ನಿಟ್ಟಿನಲ್ಲಿ ಉಮೇಶ್ ಕತ್ತಿಯವರನ್ನು ಸ್ಮರಿಸಿಕೊಳ್ಳುತ್ತೇನೆ ಎಂದರು. ಇದನ್ನೂ ಓದಿ: ‘ಕುದುರೆ ವ್ಯಾಪಾರ’ ಆರೋಪ – ಕಾಂಗ್ರೆಸ್ ಶಾಸಕ, ಬಿಜೆಪಿ ನಾಯಕಿಯ ಹಾದಿಬೀದಿ ರಂಪಾಟ
Advertisement
Advertisement
ಬಂಡೀಪುರ (Bandipura) ದಲ್ಲಿ ಕತ್ತಿಯವರು ಹೊಸ ವಿಧಾನಕ್ಕೆ ಚಾಲನೆ ಕೊಟ್ಟಿದ್ರು. ಇತ್ತೀಚಿನ ದಿನಗಳಲ್ಲಿ ಇಡೀ ಫಾರೆಸ್ಟ್ ರೇಂಜ್ ಓಡಾಡಿದ ಸಚಿವರು ಅಂದ್ರೆ ಅದು ಉಮೇಶ್ ಕತ್ತಿ. ಕತ್ತಿಯವರು ಅರಣ್ಯಾಧಿಕಾರಿಗಳ ಮೇಲೆ ಯಾವುದೇ ಒತ್ತಡ ಹಾಕ್ತಿರಲಿಲ್ಲ. ಕತ್ತಿಯವರು ಇನ್ನಷ್ಟು ವರ್ಷ ನಮ್ಮ ಜೊತೆ ಇರಬೇಕಿತ್ತು, ಜನಸೇವೆ ಮಾಡಬೇಕಿತ್ತು ಎಂದು ಸ್ಮರಿಸಿದರು.
ಅರಣ್ಯ ಕೇವಲ ನಿಸರ್ಗದ ಒಂದು ಭಾಗವಲ್ಲ. ನಮ್ಮ ನಿಮ್ಮೆಲ್ಲರ ಬದುಕಿನ ಅವಿಭಾಜ್ಯ ಅಂಗ. ಮಳೆ, ಬೆಳೆ, ಆಹಾರ ಮತ್ತು ಉಸಿರಾಡಲು ಶುದ್ದ ಗಾಳಿ ನೀಡುವ ಅರಣ್ಯ ದೇಶದ ಪ್ರಮುಖ ಸಂಪತ್ತು. ಅರಣ್ಯವಿಲ್ಲದ ದೇಶಗಳು ಮರಳುಗಾಡಾಗಿರುವುದು ನಮ್ಮ ಕಣ್ಣ ಮುಂದೆಯೇ ಇದೆ. ಅರಣ್ಯ ರಕ್ಷಣೆ ನಮ್ಮೆಲ್ಲರ ಮೂಲಭೂತ ಕರ್ತವ್ಯವಾಗಬೇಕು.#ಅರಣ್ಯಹುತಾತ್ಮರದಿನ pic.twitter.com/o7mmnMusYe
— Basavaraj S Bommai (@BSBommai) September 11, 2022
ಈ ವರ್ಷ ಅರಣ್ಯ (Forest) ಹೆಚ್ಚಿಸಲು ವಿಶೇಷ ಕಾರ್ಯಕ್ರಮಗಳನ್ನ ಇಲಾಖೆ ಮಾಡಿದೆ. 21% ಅರಣ್ಯವನ್ನ 30% ಗೆ ಹೆಚ್ಚಿಸೋದು ನಮ್ಮ ಗುರಿ. ಬಂಜರು ಭೂಮಿ, ಗುಡ್ಡಗಾಡುಗಳಲ್ಲಿ ಗಿಡಮರ ಬೆಳೆಸಲು ಇದೇ ವೇಳೆ ಸಿಎಂ ಮನವಿ ಮಾಡಿದರು. ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ (National Forest Martyrs Day) ಯಲ್ಲಿ ಉಮೇಶ್ ಕತ್ತಿಯವರಿಗೆ ಒಂದು ನಿಮಿಷ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಅರ್ಪಣೆ ಮಾಡಲಾಯಿತು.