ನವದೆಹಲಿ: ಹಠಾತ್ತನೆ 900ಕ್ಕೂ ಹೆಚ್ಚು ಯುಎಸ್ ಮತ್ತು ಭಾರತೀಯ ಉದ್ಯೋಗಿಗಳನ್ನು ವಜಾಗೊಳಿಸಿದ ರೀತಿಗೆ Better.com ಸಿಇಒ ವಿಶಾಲ್ ಗಾರ್ಗ್ ಕ್ಷಮೆಯಾಚಿಸಿದರು.
Better.com ಸಿಇಒ ಕಳೆದ ವಾರ ಜೂಮ್ ಮಿಟಿಂಗ್ ನಲ್ಲಿ 900 ಉದ್ಯೋಗಿಗಳನ್ನು ವಜಾಗೊಳಿಸಿದ್ದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ವಿಶಾಲ್ ಅವರು ಜನರ ಟೀಕೆಗೆ ಗುರಿಯಾಗುತ್ತಿದ್ದಾರೆ. ಈ ಹಿನ್ನೆಲೆ ಅವರು ಅಡಮಾನ ಕಂಪನಿಯಲ್ಲಿ ವಜಾ ಮಾಡುವ ಕಾರ್ಯ ನಿರ್ವಹಿಸುವ ರೀತಿಗೆ ಕ್ಷಮೆಯಾಚಿಸಿದರು. ಇದನ್ನೂ ಓದಿ: ಮಂಡ್ಯದಲ್ಲಿ ಪಡಿತರ ಅಕ್ಕಿ ಪಾಲಿಶ್ ಮಾಡಿ ವಿದೇಶಕ್ಕೆ ರಫ್ತು
Advertisement
Advertisement
ನಾನು ಈ ಸುದ್ದಿಯನ್ನು ಹೇಳುವಾಗ ತುಂಬಾ ಕಷ್ಟವಾಗಿತ್ತು. ಆದರೆ ಈಗ ಕಠಿಣ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದೆ. ನಾನು ಇದನ್ನು ಅರ್ಥಮಾಡಿಕೊಂಡಿದ್ದೇನೆ ಎಂದು ಬರೆದು ಕ್ಷಮೆಯನ್ನು ಕೇಳಿದರು. ಹಠಾತ್ತನೆ ವಜಾ ಮಾಡಲು ಕಾರಣವೇನು? ಎಂದು ಕೇಳಿದಾಗ, ಮಾರುಕಟ್ಟೆಯ ದಕ್ಷತೆ, ಕಾರ್ಯಕ್ಷಮತೆ ಮತ್ತು ಉತ್ಪಾದಕತೆಯಲ್ಲಿ ಬದಲಾವಣೆಯಿಂದ ಅವರನ್ನು ವಜಾಗೊಳಿಸಲಾಗಿದೆ ಎಂದು ಭಾರತೀಯ-ಅಮೆರಿಕನ್ ಸಿಇಒ ಹೇಳಿದ್ದರು. .
Advertisement
ಕಳೆದ ವಾರ ವಿಶಾಲ್ ಗಾರ್ಗ್ ಅವರು ಜೂಮ್ ಮೀಟಿಂಗ್ ನಲ್ಲಿ ಉದ್ಯೋಗಿಗಳನ್ನು ಉದ್ದೇಶಿಸಿ ಮಾತನಾಡಿದ್ದು, ನಾನು ಇಂದು ನಿಮಗೆ ಒಳ್ಳೆಯ ಸುದ್ದಿಯನ್ನು ಹೇಳಲು ಬಂದಿಲ್ಲ. ಮಾರುಕಟ್ಟೆ ಬದಲಾಗಿದೆ, ನಾವು ಬದುಕಲು ಮುಂದೆ ಸಾಗಬೇಕು. ಆಶಾದಾಯಕವಾಗಿ, ಧೈರ್ಯದಿಂದ ನಮ್ಮನ್ನು ನಾವು ಅಭಿವೃದ್ಧಿಪಡಿಸಲು ಮುಂದಾಗಬೇಕು. ಇದು ನೀವು ಕೇಳಲು ಬಯಸುವ ಸುದ್ದಿಯಲ್ಲ. ಆದರೆ ಕೊನೆಯದಾಗಿ ಇದು ನನ್ನ ನಿರ್ಧಾರವಾಗಿತ್ತು. ನೀವು ಅದನ್ನು ನನ್ನಿಂದಲ್ಲೇ ಕೇಳಬೇಕೆಂದು ನಾನು ಬಯಸುತ್ತೇನೆ. ಇದು ನಿಜವಾಗಿಯೂ ಸವಾಲಿನ ನಿರ್ಧಾರವಾಗಿದೆ. ನನ್ನ ವೃತ್ತಿಜೀವನದಲ್ಲಿ ಇದು ಎರಡನೇ ಬಾರಿಗೆ ಈ ರೀತಿಯ ನಿರ್ಧಾರವನ್ನು ಮಾಡುತ್ತಿದ್ದೇನೆ ಎಂದಿದ್ದರು. ಇದನ್ನೂ ಓದಿ: ಯುಎಸ್, ಭಾರತದ 900ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿದ CEO
Advertisement
Vishal Garg: “I wish I didn’t have to lay off 900 of you over a zoom call but I’m gonna lay y’all off right before the holidays lmfaooo”pic.twitter.com/6bxPGTemEG
— litquidity (@litcapital) December 5, 2021
ನಾನು ಇದನ್ನು ಮಾಡಲು ಬಯಸುವುದಿಲ್ಲ. ಹಿಂದೆ ಈ ರೀತಿ ನಾನು ಮಾಡಿದ್ದಕ್ಕೆ ನಾನು ಅತ್ತಿದ್ದೆ. ಈ ಬಾರಿ ನನಗೆ ಸ್ವಲ್ಪ ಧೈರ್ಯವಿದೆ ಎಂದು ನಾನು ಭಾವಿಸುತ್ತೇನೆ. ನಾವು ಕಂಪನಿಯ ಸುಮಾರು 15% ಉದ್ಯೋಗಿಗಳನ್ನು ವಜಾಗೊಳಿಸಿದ್ದೆವು. ಇಂದು ದುರದೃಷ್ಟಕರವಾಗಿ ನೀವು ಈ ಗುಂಪಿನ ಭಾಗವಾಗಿದ್ದೀರಿ. ಇಲ್ಲಿಗೆ ನಿಮ್ಮ ಉದ್ಯೋಗವನ್ನು ತಕ್ಷಣವೇ ಕೊನೆಗೊಳಿಸಲಾಗಿದೆ ಎಂದು ಶಾಕಿಂಗ್ ಹೇಳಿಕೆಯನ್ನು ನೀಡಿದ್ದರು.
2016 ರಲ್ಲಿ Better.com ಸ್ಥಾಪನೆಯಾಗಿದ್ದು, ನ್ಯೂಯಾರ್ಕ್‍ನಲ್ಲಿ ಇದರ ಪ್ರಧಾನ ಕಛೇರಿ ಇದೆ. Better.com ತನ್ನ ಆನ್‍ಲೈನ್ ಪ್ಲಾಟ್‍ಫಾರ್ಮ್ ಮೂಲಕ ಮನೆಮಾಲೀಕರಿಗೆ ಅಡಮಾನ ಮತ್ತು ವಿಮಾ ಉತ್ಪನ್ನಗಳನ್ನು ನೀಡುತ್ತದೆ.