ರಾಯ್ಪುರ: ಸರ್ಕಾರಿ ಅಧಿಕಾರಿಯೊಬ್ಬನ ಮೊಬೈಲ್ ನೀರಿಗೆ ಬಿದ್ದಿದ್ದಕ್ಕೆ ಡ್ಯಾಮ್‍ನ ಪೂರ್ತಿ ನೀರನ್ನು ಖಾಲಿ ಮಾಡಿದ ಪ್ರಸಂಗವೊಂದು ಛತ್ತೀಸ್‍ಗಢ (Chhattisgarh) ದ ಕಂಕೇರ್ ಜಿಲ್ಲೆಯ ಕೊಯಿಲಿಬೀಡಾ ಬ್ಲಾಕ್‍ನ ಖೇರ್ಕಟ್ಟಾ ಅಣೆಕಟ್ಟಿನಲ್ಲಿ (Kherkatta Paralkot reservoir) ನಡೆದಿದೆ.
ಖೇರ್ಕಟ್ಟಾ ಅಣೆಕಟ್ಟಿನ ಸುತ್ತ ಭಾನುವಾರ ಸಂಜೆ ಆಹಾರ ಇಲಾಖೆಯ ಆಧಿಕಾರಿ ರಾಜೇಶ್ ವಿಶ್ವಾಸ್ ವಾಯುವಿಹಾರಕ್ಕೆ ತೆರಳಿದ್ದರು. ಹೀಗೆ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ತಮ್ಮ ಕೈ ಜಾರಿ ಮೊಬೈಲ್ ಡ್ಯಾಂನೊಳಗೆ ಬಿದ್ದಿದೆ. ಮೊಬೈಲ್ (Mobile) 1 ಲಕ್ಷ ರೂ. ದ್ದಾಗಿದೆ.
Advertisement
Advertisement
ಇದರಿಂದ ಗಲಿಬಿಲಿಗೊಂಡ ಅಧಿಕಾರಿ ನೀರಿಗೆ ಬಿದ್ದ ಮೊಬೈಲ್‍ಗಾಗಿ ಇಡೀ ಅಣೆಕಟ್ಟಿನ ನೀರನ್ನೇ ಖಾಲಿ ಮಾಡುವಂತೆ ಆದೇಶಿಸಿದ್ದಾರೆ. ಅದರಂತೆ ಇತರ ಅಧಿಕಾರಿಗಳು ಸುಮಾರು 21 ಲಕ್ಷ ಲೀಟರ್ ನೀರನ್ನು ಹೊರತೆಗೆದು ಮೊಬೈಲ್ ಹುಡುಕಿ ಕೊಟ್ಟಿದ್ದಾರೆ. ಇದನ್ನೂ ಓದಿ: 72 ವರ್ಷದ ವೃದ್ಧನನ್ನು ಕೊಂದು ತಿಂದ 40 ಮೊಸಳೆಗಳು!
Advertisement
ಪಂಪ್ ಮಾಡಿದ ನೀರು ಉಪಯೋಗಕ್ಕೆ ಯೋಗ್ಯವಲ್ಲ. ಮೊಬೈಲ್ ಫೋನ್ ತನ್ನ ವೈಯಕ್ತಿಕವಾಗಿದ್ದರಿಂದ ದರಲ್ಲಿ ಅನೇಕ ಪ್ರಮುಖರ ಸಂಪರ್ಕಗಳಿವೆ. ಹೀಗಾಗಿ ನೀರು ಖಾಲಿ ಮಾಡಿ ಅದನ್ನು ಹುಡುಕಬೇಕಾಯಿತು. ಅಲ್ಲದೆ ಅಣೆಕಟ್ಟಿನ ನೀರು ಹೊರತೆಗೆಯಲು ಸುಮಾರು 7 ಆವಿರದಿಂದ 8 ಸಾವಿರ ರೂ. ಮೌಲ್ಯದ ಡೀಸೆಲ್ ಬಳಸಲಾಗಿದೆ. ಈ ಬಗ್ಗೆ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳಿಂದ ಮೌಖಿಕವಾಗಿ ಆದೇಶ ಹೊರಡಿಸಲಾಗಿತ್ತು. ನನ್ನ ಕ್ರಮದಿಂದ ಯಾರಿಗೂ ಹಾನಿಯಾಗಿಲ್ಲ ಎಂದು ಅಧಿಕಾರಿ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
Advertisement
ಅಧಿಕಾರಿಯ ಬೇಜವಾಬ್ದಾರಿತನದಿಂದ ಸೋಮವಾರದಿಂದ ಗುರುವಾರದವರೆಗೆ ಸುಮಾರು 21 ಲಕ್ಷ ನೀರು ಪೋಲಾಗಿದೆ. ಈ ನೀರನ್ನು ರೈತರು 1.500 ಸಾವಿರ ಕೃಷಿ ಭೂಮಿಗೆ ಬಳಸಿಕೊಳ್ಳಲಾಗುತ್ತಿತ್ತು ಎನ್ನಲಾಗಿತ್ತು. ಅಧಿಕಾರಿಯ ನಡೆಯ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾದ ಬಳಿಕ ಅಧಿಕಾರಿಯನ್ನು ಸೇವೆಯಿಂದ ವಜಾ ಮಾಡಿ ಕಂಕೇರ್ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.