ಮೈಸೂರು: ನಗರದ ಶ್ರೀ ಚಾಮರಾಜೇಂದ್ರ ಮೃಗಾಲಯಕ್ಕೆ ಚಾಮುಂಡಿ ಬೆಟ್ಟದಿಂದ ಬಂದ ಚಿರತೆಯೊಂದು ಆವರಣದಲ್ಲಿದ್ದ ಮರವನ್ನು ಏರಿ ಕೆಲಕಾಲ ಆತಂಕವನ್ನು ಸೃಷ್ಟಿ ಮಾಡಿತ್ತು.
ಚಿರತೆ ಕಾಣುತ್ತಿದ್ದಂತೆ ಸಾರ್ವಜನಿಕರಿಗೆ ಮೃಗಾಲಯದ ಪ್ರವೇಶವನ್ನು ನಿಷೇಧಿಸಲಾಯಿತು. ಚಿರತೆ ಕಾಣಿಸಿಕೊಂಡ ಸಮಯದಲ್ಲಿ ಮೃಗಾಲಯದಲ್ಲಿ ಪ್ರವಾಸಿಗರು ಇದ್ದಿದರಿಂದ ಭಯದ ವಾತಾವರಣ ನಿರ್ಮಾಣವಾಗಿತ್ತು. ವಿಷಯ ತಿಳಿದು ಸ್ಥಳಾಕ್ಕಾಗಮಿಸಿದ ಅರಣ್ಯ ಸಿಬ್ಬಂದಿ ಏರ್ ಗನ್ ಮೂಲಕ ಚಿರತೆಗೆ ಅರವಳಿಕೆ ಮದ್ದು ನೀಡಿ ಸೆರೆ ಹಿಡಿದಿದ್ದಾರೆ.
Advertisement
ಮೃಗಾಲಯದಲ್ಲಿನ ಚಿರತೆಗಳೆಲ್ಲಾ ಬೋನಿನಲ್ಲಿವೆ. ಈ ಚಿರತೆ ಹೊರಗಡೆಯಿಂದ ಬಂದು ಮರವೇರಿ ಕುಳಿತಿತ್ತು. ಕಾರ್ಯಚರಣೆ ನಡೆಸಿ ಒಂದೂವರೆ ವರ್ಷದ ಗಂಡು ಚಿರತೆಯನ್ನು ಸೆರೆ ಹಿಡಿಯಲಾಗಿದೆ ಎಂದು ಮೃಗಾಲಯದ ಅಧಿಕಾರಿಗಳು ತಿಳಿಸಿದ್ದಾರೆ.