ಬೆಂಗಳೂರು: ಪಹಲ್ಗಾಮ್ ಘಟನೆ (Pahalgam Terror Attack) ಸೇಡು ತೀರಿಸಿಕೊಳ್ಳಲು ಕೂಡಲೇ ಕೇಂದ್ರ ಸರ್ಕಾರ ಯುದ್ಧ ಪ್ರಾರಂಭ ಮಾಡಬೇಕು ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ (Basavaraj Rayareddy) ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ. ಅಲ್ಲದೇ ಸಿಎಂ ಸಿದ್ದರಾಮಯ್ಯ ವಿರುದ್ಧ ಅಪಪ್ರಚಾರ ಮಾಡುತ್ತಿರುವ ಬಿಜೆಪಿ ನಾಯಕರಾದ ಅಶೋಕ್, ವಿಜಯೇಂದ್ರ ಸಿಎಂ ವಿರುದ್ಧದ ಹೇಳಿಕೆಯನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ (Siddaramaiah) ಅವರು ಯುದ್ಧ ಬೇಡ ಅಂತ ಹೇಳಿಲ್ಲ. ಅವರ ಹೇಳಿಕೆಯನ್ನ ತಪ್ಪಾಗಿ ಅರ್ಥೈಸಲಾಗಿದೆ. ಇದರಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದ್ದು, ಅಶೋಕ್, ವಿಜಯೇಂದ್ರ ಅವರು ಸಿಎಂ ವಿರುದ್ಧ ಮಾತನಾಡೋದು ಸರಿಯಲ್ಲ. ಕೂಡಲೇ ಇಬ್ಬರು ತಮ್ಮ ಹೇಳಿಕೆ ವಾಪಸ್ ಪಡೆಯಬೇಕು ಎಂದು ಆಗ್ರಹ ಮಾಡಿದರು. ಸಿಎಂ ಅವರ ಹೇಳಿಕೆ ಪಾಕಿಸ್ತಾನದಲ್ಲಿ ಬಂದರೆ ಅದಕ್ಕೂ ನಮಗೂ ಸಂಬAಧವಿಲ್ಲ. ಸಿದ್ದರಾಮಯ್ಯ ಯಾವತ್ತೂ ದೇಶದ ವಿರುದ್ಧ ಮಾತಾಡಿಲ್ಲ ಎಂದು ಸಿಎಂ ಪರ ಬ್ಯಾಟ್ ಬೀಸಿದರು. ಇದನ್ನೂ ಓದಿ: PG/DCET: ಅರ್ಜಿ ಸಲ್ಲಿಸಲು ಮೇ 10 ಕೊನೆ ದಿನ – ಕೆಇಎ
ಕೇಂದ್ರ ಸರ್ಕಾರ ಕೂಡಲೇ ಪಾಕಿಸ್ತಾನದ ವಿರುದ್ದ ಯುದ್ಧ ಪ್ರಾರಂಭ ಮಾಡಬೇಕು. ಯಾಕೆ ಇನ್ನೂ ಯುದ್ಧ ಮಾಡಲು ಮುಂದಾಗಿಲ್ಲ ಎಂದು ಪ್ರಶ್ನಿಸಿದರು. ರಾಹುಲ್ ಗಾಂಧಿ ಕಾಶ್ಮೀರಕ್ಕೆ ಹೋಗಿದ್ರು. ಪ್ರಧಾನಿ ಮೋದಿ ಹೋಗಿರಲಿಲ್ಲ. ಕೂಡಲೇ ಪ್ರಧಾನಿ ಮೋದಿ ಕಾಶ್ಮೀರಕ್ಕೆ ಹೋಗಿ ಸ್ಥಳ ಪರಿಶೀಲನೆ ಮಾಡಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ರಾಜ್ಯದಲ್ಲಿ ಬಿಜೆಪಿಯವರಿಗೆ ಒಂದೇ ಒಂದು ಸಭೆ ಮಾಡಲು ಬಿಡಲ್ಲ: ಡಿಕೆಶಿ ವಾರ್ನಿಂಗ್
ಕೇಂದ್ರ ಸರ್ಕಾರ ಕೂಡಲೇ ವಿಶೇಷ ತುರ್ತು ಸಂಸತ್ ಅಧಿವೇಶನ ಕರೆಯಬೇಕು. ಪಾಕಿಸ್ತಾನವನ್ನ ಭಯೋತ್ಪಾದಕ ರಾಷ್ಟ್ರ ಅಂತ ಘೋಷಣೆ ಮಾಡಬೇಕು. ಯುದ್ಧ ಕೂಡಲೇ ಪ್ರಾರಂಭ ಮಾಡಬೇಕು. ಯುದ್ಧಕ್ಕೆ ಹೆಚ್ಚು ಹಣ ಖರ್ಚು ಮಾಡಲು ಸಂಸತ್ ಅಧಿವೇಶನದಲ್ಲಿ ಅನುಮತಿ ಪಡೆಯಬೇಕು. ಸೈನ್ಯದಲ್ಲಿ ಖಾಲಿ ಇರುವ ಹುದ್ದೆ ಕೂಡಲೇ ಭರ್ತಿ ಮಾಡಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಮೋದಿ-ರಾಜನಾಥ್ ಸಿಂಗ್ ಮಹತ್ವದ ಚರ್ಚೆ; ಉಗ್ರರ ವಿರುದ್ಧ ಮುಂದಿನ ಕ್ರಮಕ್ಕೆ ಮಾಸ್ಟರ್ ಪ್ಲ್ಯಾನ್