LatestMain PostNational

ಪೆನ್ನಾರ್ ನದಿ ನೀರು ಹಂಚಿಕೆ ವಿವಾದ – ನ್ಯಾಯಧಿಕರಣ ರಚನೆಗೆ ಕೇಂದ್ರದ ಒಲವು

ನವದೆಹಲಿ: ಪೆನ್ನಾರ್ ನದಿ (Pennar River) ನೀರು ಹಂಚಿಕೆ ವಿವಾದ ಬಗೆಹರಿಸಲು ನ್ಯಾಯಾಧಿಕರಣ ರಚನೆ ಮಾಡಬೇಕಾಗಬಹುದು ಎಂದು ಕೇಂದ್ರ ಸರ್ಕಾರ (Central Goverment) ಸುಪ್ರೀಂಕೋರ್ಟ್‍ಗೆ (Supreme Court) ಹೇಳಿದೆ. ಮಾರ್ಕಂಡೇಯ ಜಲಾಶಯ (Markandeya Reservoir) ನಿರ್ಮಾಣ ವಿರುದ್ಧ ತಮಿಳುನಾಡು (TamilNadu) ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಕೇಂದ್ರ ಸರ್ಕಾರ ತನ್ನ ನಿಲುವು ಹೇಳಿದೆ.

ಮಾರ್ಕಂಡೇಯ ಜಲಾಶಯ ನಿರ್ಮಾಣದಿಂದ ಪೆನ್ನಾರ್ ನದಿಯಿಂದ ತಮಿಳುನಾಡಿಗೆ ಹರಿಯುವ ನೀರಿನ ಪ್ರಮಾಣ ಕಡಿಮೆಯಾಗಬಹುದು, ಈ ಯೋಜನೆಗೆ ತಡೆ ನೀಡಬೇಕು ಎಂದು ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯನ್ನು ಇಂದು ನ್ಯಾ.ಎಂಆರ್ ಶಾ ನೇತೃತ್ವ ದ್ವಿ ಸದಸ್ಯ ಪೀಠ ವಿಚಾರಣೆ ನಡೆಸಿತು. ಇದನ್ನೂ ಓದಿ: ಅಫ್ತಾಬ್‌ಗೆ ಮಂಪರು ಪರೀಕ್ಷೆ ಸಾಧ್ಯತೆ – ಕೋರ್ಟ್ ಆದೇಶಕ್ಕೆ ಕಾಯುತ್ತಿರುವ ಪೊಲೀಸರು

ಪ್ರಕರಣ ವಿಚಾರಣೆ ವೇಳೆ ಪೀಠ ಕೇಂದ್ರ ಸರ್ಕಾರದ ಅಭಿಪ್ರಾಯ ಕೇಳಿತು. ಇದಕ್ಕೆ ಪ್ರತಿಕ್ರಿಯಿಸಿದ ಕೇಂದ್ರದ ಪರ ವಕೀಲರು ನ್ಯಾಯಾಧಿಕರಣ ರಚನೆ ಬಗ್ಗೆ ಪ್ರಸ್ತಾಪ ಮಾಡಿದರು. ತಮಿಳುನಾಡು – ಕರ್ನಾಟಕ ಮಧ್ಯ ಸಂಧಾನ ಸಾಧ್ಯವಿಲ್ಲ, ನ್ಯಾಯಾಧಿಕರಣದ ಮೂಲಕ ವಿವಾದ ಬಗೆಹರಿಯಲಿ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ ನ್ಯಾಯಾಧೀಕರಣ ರಚನೆ ಬಗ್ಗೆ ನಾಲ್ಕು ವಾರಗಳಲ್ಲಿ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ಇದನ್ನೂ ಓದಿ: 25ನೇ ಬೆಂಗಳೂರು ಟೆಕ್ ಸಮ್ಮಿಟ್- ಕನ್ನಡದಲ್ಲಿಯೇ ಮಾತು ಶುರು ಮಾಡಿದ ಪ್ರಧಾನಿ ಮೋದಿ

Live Tv

Leave a Reply

Your email address will not be published. Required fields are marked *

Back to top button