ಬೆಂಗಳೂರು: ನನ್ನ ಯೋಗ್ಯತೆ ಮೀರಿ ನನಗೆ ಕೇಂದ್ರ ಸರ್ಕಾರ ದೊಡ್ಡ ಗೌರವ ಕೊಟ್ಟಿದೆ ಅಂತ ಪದ್ಮವಿಭೂಷಣ (Padmavibhushan) ಗೌರವಕ್ಕೆ ಪಾತ್ರರಾಗಿರೋ ಮಾಜಿ ಸಿಎಂ ಎಸ್.ಎಂ. ಕೃಷ್ಣ (SM Krishna) ಕೇಂದ್ರ ಸರ್ಕಾರಕ್ಕೆ ಧನ್ಯವಾದ ತಿಳಿಸಿದರು.
ಪದ್ಮವಿಭೂಷಣ ಪ್ರಶಸ್ತಿಗೆ ಆಯ್ಕೆಯಾಗಿರುವ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣಾ ಅವರನ್ನು ಅವರ ನಿವಾಸದಲ್ಲಿ ಮುಖ್ಯಮಂತ್ರಿ @BSBommai ಅವರು ಇಂದು ಭೇಟಿಯಾಗಿ ಅಭಿನಂದಿಸಿ, ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಸಚಿವ @RAshokaBJP, @mla_sudhakar ಉಪಸ್ಥಿತರಿದ್ದರು. pic.twitter.com/nKfbIQnA4J
— CM of Karnataka (@CMofKarnataka) January 27, 2023
Advertisement
ಪದ್ಮವಿಭೂಷಣ ಗೌರವಕ್ಕೆ ಪಾತ್ರರಾದ ಕೃಷ್ಣ ಅವರನ್ನು ಸಿಎಂ ಬೊಮ್ಮಾಯಿ ಅಭಿನಂದನೆ ಸಲ್ಲಿಸಿದರು. ಈ ವೇಳೆ ಮಾತಾನಾಡಿದ ಅವರು, ನನ್ನ ಯೋಗ್ಯತೆ ಮೀರಿದ ದೊಡ್ಡ ಗೌರವ ಕೇಂದ್ರ ನೀಡಿದೆ. ಪ್ರಧಾನಿ ಮೋದಿ (Narendra Modi), ಗೃಹಮಂತ್ರಿ ಅಮಿತ್ ಶಾ (AmitShah) ಅವರು ಗೌರವ ನೀಡಿದ್ದಾರೆ. ಇದು ಬಯಸದೇ ಬಂದ ಭಾಗ್ಯ. ನಾನು ಕನಸು-ಮನಸಿನಲ್ಲೂ ಇದನ್ನು ನಿರೀಕ್ಷೆ ಮಾಡಿರಲಿಲ್ಲ. ಪ್ರಧಾನಿಗಳು, ಗೃಹ ಸಚಿವರು ಗೌರವ ನೀಡಿದ್ದಾರೆ ಅವರಿಗೆ ಧನ್ಯವಾದ ಹೇಳುತ್ತೇನೆ ಅಂದರು.
Advertisement
Advertisement
ಪ್ರಧಾನಿಗಳು ಪದ್ಮ ಪ್ರಶಸ್ತಿಗೆ ಒಂದು ಚೌಕಟ್ಟು ನಿರ್ಮಾಣ ಮಾಡಿದ್ದಾರೆ. ಇದಕ್ಕೆ ನಾನು ಧನ್ಯವಾದ ಹೇಳ್ತೀನಿ. ಯಶಸ್ವಿನಿ ಯೋಜನೆ ಮತ್ತು ಬಿಸಿಯೂಟ ನನ್ನ ಹೃದಯಕ್ಕೆ ಹತ್ತಿರವಾದ ಯೋಜನೆಗಳು. ಯಶಸ್ವಿನಿಯನ್ನ ಮತ್ತಷ್ಟು ಯಶಸ್ವಿಯಾಗಿ ಮಾಡಲು ಸಿಎಂ ಮುಂದಾಗಿದ್ದಾರೆ. ಸಿಎಂಗೆ ಧನ್ಯವಾದ ಹೇಳುತ್ತೇನೆ ಎಂದರು. ಇದನ್ನೂ ಓದಿ: ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಸಾಧನೆ ಮರೆಯಲು ಸಾಧ್ಯವಿಲ್ಲ: ಕೆ.ಗೋಪಾಲಯ್ಯ
Advertisement
ಪದ್ಮವಿಭೂಷಣ ಪ್ರಶಸ್ತಿಗೆ ಆಯ್ಕೆಯಾದ ಸಜ್ಜನ, ಶ್ರೇಷ್ಠ ವ್ಯಕ್ತಿತ್ವದ ಹಿರಿಯ ಮುತ್ಸದ್ದಿ ರಾಜಕಾರಣಿ ಎಸ್ ಎಂ ಕೃಷ್ಣ ಅವರನ್ನು ಅಭಿನಂದಿಸಿದ ಕ್ಷಣ. pic.twitter.com/zuTXjk697t
— R. Ashoka (ಆರ್. ಅಶೋಕ) (@RAshokaBJP) January 27, 2023
ರಾಜ್ಯ ಸರ್ಕಾರ ನನ್ನ ಬಗ್ಗೆ ಒಳ್ಳೆಯ ರೀತಿ ನಡೆಸಿಕೊಂಡು ಬಂದಿದೆ. ಮೊದಲು ಕೆಂಪೇಗೌಡ ಪ್ರಶಸ್ತಿ (Kempegowda Award) ಈಗ ಪದ್ಮವಿಭೂಷಣ ಪ್ರಶಸ್ತಿ ಬಂತು. ಇದು ನನ್ನ ಅಲ್ಪ ಸೇವೆಗೆ ಸಿಕ್ಕ ಗೌರವ ಅಂದುಕೊಳ್ತೀನಿ. ಎಲ್ಲರಿಗೂ ನನ್ನ ನಮಸ್ಕಾರ ಮಾಡ್ತೀನಿ. ದೇಶಕ್ಕೆ ಜನರಿಗೆ ಒಳ್ಳೆಯದಾಗಲಿ ಎಂದರು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k